ad

ಮನೆಯ ಮೇಲೆ ಅರಣ್ಯ ಇಲಾಖೆ ದಾಳಿ, ಪರವಾನಗಿ ಇಲ್ಲದೆ ಕಪ್ಪು ಆಮೆ ಸಾಕಾಣಿಕೆ ಪತ್ತೆ- Forest department raids house, finds black turtle farming without license

 SUDDILIVE || SHIVAMOGGA

ಮನೆಯ ಮೇಲೆ ಅರಣ್ಯ ಇಲಾಖೆ ದಾಳಿ, ಪರವಾನಗಿ ಇಲ್ಲದೆ ಕಪ್ಪು ಆಮೆ ಸಾಕಾಣಿಕೆ ಪತ್ತೆ-  Forest department raids house, finds black turtle farming without license  

Turtle, license

ಅಕ್ರಮ ಕಪ್ಪು ಆಮೆಯ ಸಾಕಾಣಿಕೆ ಮಾಡುತ್ತಿದ್ದ   ಮನೆಯ ಮೇಲೆ ಅರಣ್ಯ ಇಲಾಖೆ ದಾಳಿ ನಡೆಸಿದೆ. ಈ ಸಂಬಂಧ ವ್ಯಕ್ತಿಯೋರ್ವನನ್ನ‌ಬಂಧಿಸಲಾಗಿದೆ.    ಘಟನೆ ಶಿವಮೊಗ್ಗದ ಚಿಕ್ಕಲ್ ಸಿದ್ದೇಶ್ವರ ನಗರದಲ್ಲಿ ನಡೆದಿದೆ. 

ಶಿವಮೊಗ್ಗ ಚಿಕ್ಕಲ್ ಸಿದ್ದೇಶ್ವರ ನಗರದಲ್ಲಿ ವ್ಯಕ್ತಿಯೊಬ್ಬ ಮನೆಯೊಂದರಲ್ಲಿ ಅಕ್ರಮವಾಗಿ ಕಪ್ಪು ಆಮೆಯನ್ನ ಸಾಕುತ್ತಿದ್ದಾನೆ ಎಂಬ ಮಾಹಿತಿ ಆಧಾರದ ಮೇರೆಗೆ   ಅರಣ್ಯ ಸಂಚಾರಿ ದಳ ಸಾಗರದ ಪಿಎಸ್ಐ ವಿನಾಯಕ್ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ.

ದಾಳಿ ವೇಳೆ ಮಹಮದ್ ಸಮೀಯುಲ್ಲಾ ಎಂಬಾತನನ್ನು ಬಂಧಿಸಲಾಗಿದ್ದು, ಬಂಧಿತನ ಬಳಿಯಿದ್ದ ಕಪ್ಪು ಆಮೆಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.  ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂಬ ಮಾಹಿತಿ ಗುರುವಾರ ಲಭ್ಯವಾಗಿದೆ.

Forest department raids house, finds black turtle farming without license  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close