SUDDILIVE || SHIVAMOGGA
ಶಿವಮೊಗ್ಗದ ಮೂವರಿಗೆ ರಾಜ್ಯೋತ್ಸವ ಪ್ರಶಸ್ತಿ- Three from Shimoga win Rajyotsava award
ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗಳನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು, ಜಿಲ್ಲೆಯ ಮೂವರು ಸಾಧಕರು ಬಾಜನರಾಗಿದ್ದಾರೆ.ರಾಜ್ಯೋತ್ಸವಕ್ಕೂ ಎರಡು ದಿನ ಮುನ್ನವಾದ ಇಂದು ರಾಜ್ಯ ಸರ್ಕಾರ ಪ್ರಶಸ್ತಿಗಳನ್ನು ಘೋಷಣೆ ಮಾಡಿದ್ದು, ಶಿವಮೊಗ್ಗ ಜಿಲ್ಲೆಯ ಮೂವರು ಸಾಧಕರನ್ನು ಆಯ್ಕೆ ಮಾಡಿದೆ.
ಯಾರಿಗೆಲ್ಲಾ ಪ್ರಶಸ್ತಿ?
ಜಿಲ್ಲೆಯ ಸಾಹಿತ್ಯ ಕ್ಷೇತ್ರದಿಂದ ಹಿರಿಯ ಸಾಹಿತಿ ಪ್ರೊ. ರಾಜೇಂದ್ರ ಚೆನ್ನಿ, ಜಾನಪದ ಕ್ಷೇತ್ರದಿಂದ ಹಿರಿಯ ಕಲಾವಿದ ಬಿ. ಟಾಕಪ್ಪ ಕಣ್ಣೂರು ಹಾಗೂ ಸಮಾಜಸೇವೆ ಕ್ಷೇತ್ರದಿಂದ ಕೋಣಂದೂರು ಲಿಂಗಪ್ಪ ಅವರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಇನ್ನು, ಈ ಬಾರಿ ಸಾಹಿತ್ಯ ಕ್ಷೇತ್ರದಿಂದ 6, ಜಾನಪದ ಕ್ಷೇತ್ರದಿಂದ 8, ಸಂಗೀತ ಕ್ಷೇತ್ರದಿಂದ 2, ನೃತ್ಯ ಕ್ಷೇತ್ರದಿಂದ 1, ಚಲನಚಿತ್ರ/ಕಿರುತೆರೆ ಕ್ಷೇತ್ರದಿಂದ 2, ಆಡಳಿತ ಕ್ಷೇತ್ರದಿಂದ 1, ವೈದ್ಯಕೀಯ ಕ್ಷೇತ್ರದಿಂದ 2, ಸಮಾಜಸೇವೆ ಕ್ಷೇತ್ರದಿಂದ 5, ಸಂಕೀರ್ಣ ಕ್ಷೇತ್ರದಿಂದ 8, ಹೊರನಾಡ/ಹೊರದೇಶದಿಂದ 2, ಪರಿಸರ ಕ್ಷೇತ್ರದಿಂದ 2, ಕೃಷಿ ಕ್ಷೇತ್ರದಿಂದ 2, ಮಾಧ್ಯಮ ಕ್ಷೇತ್ರದಿಂದ 4, ವಿಜ್ಞಾನ/ತಂತ್ರಜ್ಞಾನ ಕ್ಷೇತ್ರದಿಂದ 3, ಸಹಕಾರ ಕ್ಷೇತ್ರದಿಂದ 1, ಯಕ್ಷಗಾನ ಕ್ಷೇತ್ರದಿಂದ 3, ಬಯಲಾಟದಿಂದ 1, ರಂಗಭೂಮಿಯಿAದ 5, ಶಿಕ್ಷಣ ಕ್ಷೇತ್ರದಿಂದ 4, ಕ್ರೀಡಾ ಕ್ಷೇತ್ರದಿಂದ 3, ನ್ಯಾಯಾಂಗ ಕ್ಷೇತ್ರದಿಂದ 1, ಶಿಲ್ಪಕಲೆ ಕ್ಷೇತ್ರದಿಂದ 2, ಚಿತ್ರಕಲೆ ಕ್ಷೇತ್ರದಿಂದ 1 ಹಾಗೂ ಕರಕುಶಲ ಕ್ಷೇತ್ರದಿಂದ ಒಬ್ಬರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
Three from Shimoga win Rajyotsava award
 

 
 
 
