SUDDILIVE || SHIVAMOGGA
ಇನ್ಮುಂದೆ ಕಾರ್ಕಳದ ಕ್ರಿಯೇಟಿವ್ ವಿದ್ಯಾಸಂಸ್ಥೆ ಶಿವಮೊಗ್ಗದಲ್ಲಿ ಲಭ್ಯ-ಕೆ.ಬಿ.ಅಶೋಕ ನಾಯ್ಕ್-From now on, Karkala's Creative Education Institute will be available in Shivamogga - K.B. Ashoka Naik
ನಗರದ ಸವಳಂಗ ರಸ್ತೆಯಲ್ಲಿರುವ ಅಕ್ಷರ ಸಂಯುಕ್ತ ಪದವಿಪೂರ್ವ ಕಾಲೇಜನ್ನ ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯೊಂದಿಗೆ ಸಂಯೋಜಿಸಿಕೊಂಡಿದೆ ಎಂದು ಮಾಜಿ ಶಾಸಕ ಕೆ.ಬಿ.ಅಶೋಕ ನಾಯ್ಕ್ ತಿಳಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2014 ರಲ್ಲಿ ಸ್ಪರ್ಧಾತ್ಮಕ ರೀತಿಯಲ್ಲಿ ಉತ್ತಮ ಶಿಕ್ಷಣ ನೀಡು ಮಹರ್ಷಿ ಹಾರಿರಾಮ್ ಅವರ ಹೆಸರಿನಲ್ಲಿ ಅಕ್ಷರ ವಿದ್ಯಾಸಂಸ್ಥೆಯನ್ನ ಆರಂಭಿಸಲಾಗಿತ್ತು. ಮಲೆನಾಡುಭಾಗದಲ್ಲಿ ವಿದ್ಯಾಭ್ಯಾಸ ಮುಗಿಸಿ ಉನ್ನತ ಶಿಕ್ಷಣಕ್ಕಾಗಿ ಮಂಗಳೂರು ಮತ್ತು ಉಡುಪಿ ಜಿಲ್ಲೆಗೆ ಹೋಗುತ್ತಿದ್ದರು.
ಇದಕ್ಕಾಗಿ ಅಲ್ಲಿನ ಗುಣಮಟ್ಟದ ಶಿಕ್ಷಣ ಇಲ್ಲಿ ಆರಂಭಿಸಲು ಅಕ್ಷರ ವಿದ್ಯಾಸಂಸ್ಥೆ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯೊಂದಿಗೆ ಶೈಕ್ಷಣಿಕ ಸಹಭಾಗಿತ್ವ ಪಡೆದುಕೊಂಡಿದೆ. ನಮ್ಮ ಮಲೆನಾಡಿನಲ್ಲಿರುವ ಸಂಸ್ಥೆಯಿಂದ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿದ್ದಾರೆ. ಆದರೆ ನೀಟ್ ನತ್ತು ಜೆಇಇ ನಲ್ಲಿ ಮಲೆನಾಡಿಗರು ಪಾಸ್ ಕಡಿಮೆಯಾಗಿದೆ. ಹಾಗಾಗಿ ಈ ಶಿಕ್ಷಣ ಪಡೆಯಲು ಕರಾವಳಿಗೆ ಹೋಗುತ್ತಿರುವುದರಿಂದ ಅದನ್ನ ಶಿವಮೊಗ್ಗದಲ್ಲಿಯೇ ನೀಡಲು ಚಿಂತಿಸಲಾಗಿದೆ. ಇದರ ಫೀ ಸ್ಟ್ರಕ್ಚರ್ ಕ್ರಿಯೇಟಿವ್ ಸಂಸ್ಥೆಯ ಶುಲ್ಕದ ರೀತಿಯಲ್ಲಿಯೇ ಇರಲಿದೆ ಎಂದರು.
ಡಾಕ್ಟರ್, ಐಐಟಿ ಆಗಲು ಕ್ರಿಯೇಟಿವ್ ಸಂಸ್ಥೆಯಲ್ಲಿ ದೊರೆಯಲಿದೆ. ನಮ್ಮಲ್ಲಿ ಓದಿದವರು ಏಮ್ಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ನಾಲ್ಕುವರ್ಷ ಔಟ್ ಪುಟ್ ಆಗಿದ್ದಾರೆ. ಕಡಿಮೆ ಅಂಕ ಪಡೆದು ಪಿಯುಸಿಯಿಂದ ಬಂದವರು ಉತ್ತಮ ಅಂಕ ಪಡೆದ ಉದಾಹರಣೆ ನಮ್ಮಲ್ಲಿದೆ ಉಡುಪಿ, ಹಾಸನ್ ನಲ್ಲಿ ಕ್ರಿಯೇಟಿವ್ ಸಂಸ್ಥೆಯಿದೆ. ಈಗ ಅಕ್ಷರ ಸಂಸ್ಥಯೊಂದಿಗೆ ನಡೆಯಲಿದೆ ಎಂದು ಕ್ರಿಯೇಟಿವ್ ಸಂಸ್ಥೆ ಮುಖ್ಯಸ್ಥ ಶ್ರೇಯಸ್ ತಿಳಿಸಿದರು.
From now on, Karkala's Creative Education Institute will be available in Shivamogga