SUDDILIVE || SHIVAMOGGA
ಒಂದುವರೆಕೋಟಿ ವ್ಯವಹಾರದಲ್ಲಿ ದೋಖಾ, 11 ಜನರ ವಿರುದ್ಧ ದೂರು-Fraud in a transaction worth Rs 1.5 crore, complaint against 11 people
ಒಂದುವರೆ ಕೋಟಿ ಹಣದ ವಿಚಾರದಲ್ಲಿ ಮಹಿಳೆಯೋರ್ವರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದನೆ, ಜಾತಿ ನಿಂದನೆ ಮತ್ತು ಪೆಟ್ರೋಲ್ ಸುರಿದು ಬೆಂಕಿಹಚ್ಚುವ ಬೆದರಿಕೆ ಹಾಕಲಾಗಿದ್ದು, ಮಂದಾರ ಶಾಲೆಯ ಮಾಲಕಿ ಸೇರಿದಂತೆ 11 ಜನರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಣದ ವ್ಯವಹಾರವನ್ನ ಬಗೆಹರಿಸಿಕೊಳ್ಳಲು ಶಾಲೆಯ ಮಾಲಕಿಯು ಸುನೀತ ಬಿ ಎಂಬ ಸೋಷಿಯಲ್ ವರ್ಕರ್ ನ್ನ ವೆಂಕಟೇಶ ನಗರದಲ್ಲಿರುವ ಮನೆಗೆ ಕರೆದಿದ್ದರು. ಮನೆಗೆ ಹೋದ ಸುನೀತ ಮತ್ತು ಅವರ ಕಡೆಯವರಿಗೆ ಜಾತಿ ನಿಂದನೆ ಮಾಡಿ ಪೆಟ್ರೋಲ್ ಸುರಿದು ಹತ್ಯೆ ನಡೆಸುವ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ಪೊಲೀಸ್ ದೂರು ನೀಡಲಾಗಿದೆ.
ಮಾಹಿತಿ ಪ್ರಕಾರ ಅನುಪಿನಕಟ್ಟೆಯಲ್ಲಿರುವ ಖಾಸಗಿ ಶಾಲೆ ಅಭಿವೃದ್ಧಿ ವಿಚಾರದಲ್ಲಿ ನಡೆದ ವ್ಯವಹಾರ ಎರಡೂ ಪಾರ್ಟಿಯವರ ಕಡೆ ಸರಿಬಾರದ ಹಿನ್ನಲೆಯಲ್ಲಿ ಹಣದ ವಿಚಾರದಲ್ಲಿ ಜಟಾಪಟಿ ನಡೆಯುತ್ತಿದೆ. ಶಾಲೆ ಅಭಿವೃದ್ಧಿಯ ವಿಚಾರದಲ್ಲಿ ಕೋಟ್ಯಾಂತರ ರೂ ಹಣ ವ್ಯಯ ಮಾಡಲಾಗಿದೆ ಎಂದು ಒಂದಿಷ್ಟು ಜನ ಹೇಳುತ್ತಿದ್ದಾರೆ. ಆದರೆ ಶಾಲೆಯ ಮಾಲಕಿಯವರು ನಾನು ಹಣಕರ್ಚು ಮಾಡಲು ಹೇಳಿಲ್ಲ ಎಂಬುದು ಅವರವಾದವಾಗಿದೆ. ವ್ಯವಹಾರ ಸರಿಬಾರದ ಕಾರಣ ಈಗ ಶಾಲೆಯ ಮಾಲಕಿಯ ವಿರುದ್ಧ ಜಾತಿ ನಿಂದನೆ, ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ಬೆದರಿಕೆ ದೂರು ದಾಖಲಾಗಿದೆ.
Fraud in a transaction worth Rs 1.5 crore, complaint against 11 people