SUDDILIVE || SHIVAMOGGA
ನಾಡಗೀತೆ, ವಂದೇ ಮಾತರಂ ಗೀತೆಗಳೊಂದಿಗೆ ಆರಂಭವಾಗುತ್ತಿದ್ದ ಸರ್ಕಾರಿ ಕಾರ್ಯಕ್ರಮಗಳು ಕುರಾನ್ ಪಠಣದ ಮೂಲಕ ಆರಂಭವಾಗುತ್ತಿದೆ-ಶಾಸಕ ಚೆನ್ನಿ-Government programs that used to start with the national anthem and Vande Mataram are now starting with the recitation of the Quran - MLA Chenni
ರಾಜ್ಯದ ಕಾಂಗ್ರೆಸ್ ಸರ್ಕಾರ ಮುಸಲ್ಮಾನರ ಸರ್ಕಾರವಾಗಿ ಪರಿವರ್ತನೆ ಆಗುತ್ತಿದ್ದು, ಸಂವಿಧಾನದ ಹಕ್ಕುಗಳನ್ನೇ ಉಲ್ಲಂಘನೆ ಮಾಡಿ, ತುಷ್ಟೀಕರಣ ಅತಿರೇಖಕ್ಕೆ ಮುನ್ನಡಿ ಬರೆದಿದೆ. ಕೇವಲ ಮುಸ್ಲೀಂ ಯುವಕರಿಗೆ ಪೊಲೀಸ್ ಟ್ರೈನಿಂಗ್ ನಡೆಸುತ್ತಿದೆ. ಇದಕ್ಕೆ ಹಿಂದೂ ಸಮಾಜದ ಧಿಕ್ಕಾರವಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಕಿಡಿಕಾರಿದ್ದಾರೆ.
ಶನಿವಾರ ತಮ್ಮ ಕಚೇರಿ ಕರ್ತವ್ಯ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿಮಾತನಾಡಿದ ಅವರು, ಅಲ್ಪಸಂಖ್ಯಾತರ ಪರವಾದ ರಾಜ್ಯ ಸರ್ಕಾರದ ಧೋರಣೆಗಳನ್ನು ತೀವ್ರವಾಗಿ ಖಂಡಿಸಿದರು. ಸರ್ಕಾರದ ಕಾರ್ಯಕ್ರಮಗಳು ಈ ಮುಂಚೆ ನಾಡಗೀತೆ, ವಂದೇ ಮಾತರಂ ಗೀತೆಗಳ ಮೂಲಕ ಶುರುವಾಗುವ ಪರಿಪಾಠ ಇತ್ತು. ಆದರೆ ಈಗ ಸರ್ಕಾರಿ ಕಾರ್ಯಕ್ರಮಗಳು ಕುರಾನ್ ಪಠಣದ ಮೂಲಕ ಶುರುವಾಗುತ್ತಿದೆ. ಇಂತಹ ಕೆಟ್ಟ ಪರಿಪಾಠಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ನಾಂದಿ ಹಾಡಿದ್ದಾರೆ. ಇದು ಅತ್ಯಂತ ಖಂಡನೀಯವಾಗಿದ್ದು. ಮಾತೆತ್ತಿದ್ದರೆ ಪ್ರಧಾನಿ ಮೋದಿ ಅವರನ್ನು ಟೀಕಿಸಿ, ಭೋದನೆ ಮಾಡುವ ಮಹಾಪುರುಷ ಸಂತೋಷ್ ಲಾಡ್, ಸಂವಿಧಾನ ವಿರೋಧಿ ಕ್ರಮಕ್ಕೆ ಚಾಲನೆಕೊಟ್ಟಿದ್ದಾರೆ. ಇದಕ್ಕೆ ಹಿಂದೂ ಸಮಾಜ ಧಿಕ್ಕಾರ ಹೇಳುತ್ತದೆ ಎಂದು ಗುಡುಗಿದರು.
ಒಂದೆಡೆ ಸಚಿವ ಸಂತೋಷ್ ಲಾಡ್ ಅವರ ಮುಸ್ಲೀಂ ತುಷ್ಟೀಕರಣದ ಕಥೆ ಇದಾದರೆ, ಇನ್ನು ಸರ್ಕಾರ ತುಷ್ಟೀಕರಣ ನೀತಿಗೆ ಇನ್ನಷ್ಟು ಇಂಬು ನೀಡಿ, ಮುಸ್ಲೀಂ ಸಮಾಜದವರಿಗೆ ಇನ್ನಷ್ಟು ಸೌಲಭ್ಯಗಳನ್ನು ನೀಡುವ ಕೆಲಸ ಮಾಡುತ್ತಿದೆ. ಹಿಂದೂ ಸಮಾಜದ ಯುವಜನರಿಗೆ ಕಾಲೇಜುಗಳ ಕೊರತೆ ಇದ್ದಾಗ್ಯೂ ಮುಸ್ಲೀಂ ಬಾಲಕಿಯರಿಗೆ ಪ್ರತ್ಯೇಕ ಕಾಲೇಜುಗಳನ್ನು ತೆರೆಯುವ ಯೋಚನೆ ಮಾಡುತ್ತದೆ. ಈಗ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮುಸ್ಲೀಂ ಯುವಜನರಿಗೆ ಅನುಕೂಲ ಮಾಡಿಕೊಡಲು ಸಬ್ ಇನ್ಸೆಪೆಕ್ಟರ್ ಹುದ್ದೆ ಗಳಿಗೆ ನೇಮಕಾತಿಗೆ ತರಬೇತಿ ನೀಡಲಾಗುತ್ತಿದೆ. ಈ ರೀತಿ ತಾರಾತಮ್ಯ ಯಾಕೆ ಎಂದು ಪ್ರಶ್ನಿಸಿದರು.
ಮುಸ್ಲೀಂ ಸಮಾಜವೇನು ಪ್ರತ್ಯೇಕವಾಗಿಲ್ಲ, ಒಬಿಸಿಯಲ್ಲೂ ಅವರಿಗೆ ಅವಕಾಶವಿದೆ. ವಿವಿಧ ವಿಭಾಗಗಳಲ್ಲೂ ಅವರಿಗೆ ನೇಮಕಾತಿ ಅವಕಾಶವಿದೆ. ಹೀಗಿದ್ದೂ ಅವರಿಗೆ ಪ್ರತ್ಯೇಕ ಅನುದಾನದ ಮೂಲಜ ತರಬೇತಿ ನೀಡುವುದೇಕೆ? ಇವತ್ತು ದೇಶವನ್ನು ಉದ್ವಂಸ ಗೊಳಿಸುವ ಅಪರಾಧ ಕೃತ್ಯಗಳಲ್ಲಿ ಮುಸ್ಲಿಂ ಸಮಾಜದ ಯುವಕರೇ ಹೆಚ್ಚಾಗಿರುವುದನ್ನು ಕ್ರೆöÊಮ್ ಬ್ಯೂರೋ ಅಂಕೆ ಸಂಖ್ಯೆಗಳೇ ಹೇಳುತ್ತಿವೆ. ಹೀಗಿದ್ದೂ ಮುಸ್ಲೀಂ ಯುವಕರಿಗೆ ಹೆಚ್ಚು ಆದ್ಯತೆ ನೀಡುತ್ತೀರಿ, ಇದರ ಉದ್ದೇಶವೇನು ? ಒಂದು ರೀತಿ ಮುಸ್ಲಿಂ ಯುವಕರ ಕಾನೂನುಬಾಹಿರ ಚಟುವಟಿಕೆಗಳಿಗೆ ಕಾನೂನಾತ್ಮಕ ಅವಕಾಶ ನೀಡುವ ಹುನ್ನಾರ ಇದರ ಹಿಂದೆ ಇದೆಯಾ ಎಂದು ದೂರಿದರು.
ಇದು ದೇಶದ ಭದ್ರತೆಯ ಪ್ರಶ್ನೆ. ಇಲ್ಲಿ ಹುಡುಗಾಟಿಕೆ ಮಾಡಬೇಡಿ, ವಿಧ್ವಂಸಕ ಕೃತ್ಯ ಮನಸ್ಥಿತಿಗೆ ಬೆಂಬಲ ನೀಡಬೇಡಿ, ಈ ಬಗೆಯ ತುಷ್ಟೀಕರಣದಿಂದಲೇ ದೇಶವನ್ನೇ ಇಬ್ಬಾಗ ಮಾಡಲಾಗಿದೆ. ಇನ್ನೇಷ್ಟು ಅವರಿಗೆ ಅವಕಾಶ ಕೊಡುತ್ತೀರಿ? ಕಾಂಗ್ರೆಸ್ ಮನಸ್ಥಿತಿಯೇ ದೇಶವನ್ನು ಒಡೆಯುವುದಾಗಿದೆ. ಅವರದು ವೋಟ್ ಬ್ಯಾಂಕ್ ರಾಜಕಾರಣ. ಇದಕ್ಕೆ ಹಿಂದೂಸಮಾಜ ಧಿಕ್ಕಾರವಿದೆ ಎಂದರು.
ಇದೇ ವೇಳೆ ಅವರು ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತುಮಾತನಾಡಿ, ರಾಜ್ಯದ ರಸ್ತೆಗಳಲ್ಲಿ ಮಾತ್ರ ಗುಂಡಿ ಗೊಟರು ಬಿದ್ದಿಲ್ಲ, ಕಾನಾನೂಸುವ್ಯವಸ್ಥೆ ಕೂಡ ಹಳ್ಳ ಹಿಡಿದಿದೆ. ಸಮಾಜದ ವಿರೋಧಿಶಕ್ತಿಗಳಿಗೆ ಸರ್ಕಾರ ಬೆಂಬಲನೀಡುತ್ತಿದೆ ಎನ್ನುವ ಆತಂಕ ಶುರುವಾಗಿದೆ ಎಂದು ಆರೋಪಿಸಿದ ಅವರು, ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ದಾಖಲಾದ ಅಪರಾಧ ಪ್ರಕರಣಗಳ ವಿವರ ನೀಡಿದರು.
೨೦೨೪ರ ಒಂಭತ್ತು ತಿಂಗಳಲ್ಲಿ ಕೊಲೆ, ದರೋಡೆ, ಅತ್ಯಾಚಾರ, ಗಲಭೆ, ವಂಚನೆಗಳು ಒಟ್ಟು ೧.೫೪, ೧೫೭ ಪ್ರಕರಣಗಳು ದಾಖಲಾದರೆ, ೨೦೨೫ರ ಎಂಟು ತಿಂಗಳಲ್ಲಿ ೮೪, ೩೮೬ ಪ್ತಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಗೂಂಡಾ ರಾಜ್ಯವಿದೆಯೇ ಎನ್ನುವ ಆತಂಕವಿದೆ.ಈ ಬಗ್ಗೆ ಗೃಹ ಸಚಿವರನ್ನು ಕೇಳಿದರೆ ಎಲ್ಲೋ ಒಂದು ನಡೆದ ಘಟನೆ ಹೇಳುತ್ತೀರಿ ಎಂದು ಉಡಾಪೆಯ ಉತ್ತರ ನೀಡುತ್ತಾರೆಂದು ಗುಡುಗಿದರು.
ರಾಜ್ಯ ದಲ್ಲೂ ಐ ಲವ್ ಮೊಹಮ್ಮದ್ ಕೃತ್ಯನಡೆದಿದೆ. ಕೆಲವು ಮುಸ್ಲಿಂ ಅಂತರಿಕ ಭಯೋತ್ಪಾದಕರು, ಇದನ್ನು ಶುರು ಮಾಡಿದ್ದಾರೆ. ಉತ್ತರ ಪ್ರದೇಶದ ಮೌಲನಾ ತೌಫಿಕ್ ರಾಹ್ ಖಾನ್ ಎಂಬಾತ, ಈ ರೀತಿಯ ಕೇತ್ಯಕ್ಕೆ ಸೂತ್ರದಾರನಾಗಿದ್ದು, ಬೆಳಗಾವಿ, ಮೈಸೂರಿನಲ್ಲಿ ಈ ಪ್ರಕರಣಗಳ ಬಯಲಾಗಿವೆ.ಇದರ ನಡುವೆ ಬೆಳಗಾವಿಯಲ್ಲೇ ಮುಸ್ಲಿಂ ಯುವಕರಿಗೆ ಪೊಲೀಸ್ ಸಬ್ ಇನ್ಸೆಪೆಕ್ಟರ್ ಹುದ್ದೆಗಳ ನೇಮಕಾತಿಯ ತರಬೇತಿ ನಡೆದಿದ್ದು ಗುಮಾನಿ ಹುಟ್ಟಿಸಿದೆ. ಈ ಕೃತ್ಯಗಳಿಗೆ ಆಮ್ ಆದ್ಮಿ ಪಕ್ಷ, ಎಸ್‌ಡಿಪಿಐ ಪಕ್ಷದ ಕುಮ್ಮಕ್ಕು ಇದೆ ಎಂದು ಆರೋಪಿಸಿದರಲ್ಲದೆ, ಐ ಲವ್ ಮೊಹಮ್ಮದ್ ಕೃತ್ಯಕ್ಕೆ ಬೆಂಬಲಿಸುವ ಮುಸ್ಲಿಂ ಸಮಾಜ ತಾಕತ್ತಿದ್ದರೆ ತಮ್ಮ ಅಂಗಡಿ ಮುಂಗಟ್ಟುಗಳ ಮೇಲೆ ಐ ಲವ್ ಮೊಹಮ್ಮದ್ ಎಂದು ನಾಮಫಲಕ ಹಾಕಿಕೊಂಡು ವ್ಯಾಪಾರ ಮಾಡಲಿ ಎಂದು ಸವಾಲು ಹಾಕಿದರು.
ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಮುಖಂಡರಾದ ಎಸ್. ಜ್ಣಾನೇಶ್ವರ್, ದೀನ್ ದಯಾಳ್, ಶ್ರೀನಾಗ್ ಇದ್ದರು.
Government programs that used to start with the national anthem and Vande Mataram are now starting with the recitation of the Quran - MLA Chenni