ad

RSS ಶತಾಬ್ದಿ ಕಾರ್ಯಕ್ರಮಕ್ಕೆ ನಗರದಲ್ಲಿ ಅಲಂಕಾರ ಮತ್ತು ಭರದ ಸಿದ್ದತೆ- Decorations and preparations in full swing in the city for the RSS centenary program

SUDDILIVE || SHIVAMOGGA

RSS ಶತಾಬ್ದಿ ಕಾರ್ಯಕ್ರಮಕ್ಕೆ ನಗರದಲ್ಲಿ ಅಲಂಕಾರ ಮತ್ತು ಭರದ ಸಿದ್ದತೆ- Decorations and preparations in full swing in the city for the RSS centenary program    

Rss, decoration


ರಾಷ್ಟ್ರೀಯ ಸ್ವಯಂಸೇವಕ ಸಂಘ,   ಶತಾಬ್ದಿ ವರ್ಷದ  ವಿಜಯದಶಮಿ ಉತ್ಸವದ ಅಂಗವಾಗಿ  ಶಿವಮೊಗ್ಗ ನಗರದಲ್ಲಿ  ಅಕ್ಟೋಬರ್ 12 ರ ಭಾನುವಾರ ಸಂಜೆ 4 ಗಂಟೆಗೆ  ರಾಮಣ್ಣ ಶ್ರೇಷ್ಠಿ ಪಾರ್ಕ್ ಆವರಣದಿಂದ ಸಾವಿರಾರು ಗಣವೇಷಧಾರಿ ಸ್ವಯಂಸೇವಕರಿಂದ  ಪಥಸಂಚಲನ ನಡೆಯಲಿದೆ. ಇದಕ್ಕಾಗಿ ನಗರದಲ್ಲಿ ಹಲವು ಸಿದ್ದತೆಗಳನ್ನ ಮಾಡಲಾಗಿದೆ. 

ರಾಷ್ಟ್ರೀಯ ಸ್ವಯಂ ಸೇವಕ ಸಂಘದ 100 ವರ್ಷ ಪೂರೈಕೆಯ ಹಿನ್ನಲೆಯಲ್ಲಿ ನಗರದಲ್ಲಿ ಹಲವು ಅಲಂಕಾರಗಳು ಮಹಾದ್ವಾರಗಳನ್ನ ನಿರ್ಮಿಸಲಾಗಿದೆ. ಪಥಸಂಚಲನವು ರಾಮಣ್ಣ ಶ್ರೇಷ್ಟಿ ಪಾರ್ಕ್, ಗಾಂಧಿಬಜಾರ್ ಮುಖ್ಯ ರಸ್ತೆ, ಶಿವಪ್ಪ ನಾಯಕ ವೃತ್ತ, ಅಮೀರ್ ಅಹ್ಮದ್ ವೃತ್ತ (ಎಎ ವೃತ್ತ), ನೆಹರು ರಸ್ತೆ, ಟಿ. ಸೀನಪ್ಪ ಶೆಟ್ಟಿ ವೃತ್ತ,  ದುರ್ಗಿಗುಡಿ ಮುಖ್ಯ ರಸ್ತೆ, ಜೈಲ್ ವೃತ್ತ, ಜೈಲ್ ರಸ್ತೆ ಮೂಲಕ ಅಲ್ಲಮಪ್ರಭು ಮೈದಾನ ತಲುಪಲಿದೆ.

ಸಂಘದ ಕ್ಷೇತ್ರೀಯ ಕಾರ್ಯವಾಹರಾದ ಶ್ರೀ ನಾ ತಿಪ್ಪೇಸ್ವಾಮಿ ರವರು ಸ್ವಯಂಸೇವಕರನ್ನು ಕುರಿತು ಮಾರ್ಗದರ್ಶನ ಮಾಡಲಿದ್ದಾರೆ. 

ಅಮೀರ್ ಅಹ್ಮದ್ ವೃತ್ತದಲ್ಲಿ ಪ್ರತಿಮೆಗೆ ಆಕ್ಷೇಪಣೆ

RSS ನ ಶತಾಬ್ದಿ ವರ್ಷ ಆಚರಣೆ ಹಿನ್ನಲೆಯಲ್ಲಿ ಅಮೀರ್ ಸರ್ಕಲ್  ಎಎ ವೃತ್ತ ಯಾವುದೇ ವ್ಯಕ್ತಿಗಳ ಪ್ರತಿಮೆಗಳನ್ನ ಪ್ರತಿಷ್ಠಾಪಿಸಲು ಆಕ್ಷೇಪಿಸಲಾಗಿದೆ ಎನ್ನಲಾಗಿದೆ. ಹೆಡ್ಗೇವಾರ್ ಪ್ರತಿಮೆಗೆ ಆಕ್ಷೇಪಿಸಲಾಗಿದೆ. ನಂತರ ಭಾರತ ಮಾತೆಯ ಪ್ರತಿಮೆ ಪ್ರತಿಷ್ಠಾಪಿಸಲು ಸಮ್ಮತಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇಂದು ಮಧ್ಯಾಹ್ನದ ಒಳಗೆ ಭಾರತ ಮಾತೆಯ ಮೂರ್ತಿ ಪ್ರತಿಷ್ಠಾಪಿಸುವ ಸಾಧ್ಯತೆಯಿದೆ. 

Decorations and preparations in full swing in the city for the RSS centenary program

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close