SUDDILIVE || SHIVAMOGGA
ನವೆಂಬರ್ ಕ್ರಾಂತಿ ಗೊತ್ತಿಲ್ಲ. ಮಧ್ಯಾಂತರ ಆದೇಶ ಚೀಮಾರಿಯಲ್ಲ-ಶಾಸಕ ಬೇಳೂರು- I don't know about the Novembor Kranti. Interim orders are not a joke - MLA Belur
ಹೈಕಮಾಂಡ್ ಒಪ್ಪಿದರೆ ಐದು ವರ್ಷ ನಾನೇ ಸಿಎಂ ಆಗಿರುತ್ತೇನೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ವಿಚಾರ ಕುರಿತು ಶಾಸಕ ಗೋಪಾಲ ಕೃಷ್ಣ ಬೇಳೂರು ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ್ದಾರೆ.ಈ ಬಗ್ಗೆ ಯಾರೂ ಹೇಳಿಕೆ ಕೊಟ್ಟಿದ್ದಾರೆ ಅದಕ್ಕೆ ಯಾವುದಕ್ಕೂ ಸಹಮತವಿಲ್ಲ ಎಂದಿದ್ದಾರೆ.
ನಮ್ಮ ರಾಷ್ಟ್ರೀಯ ನಾಯಕರ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ. ಅವರು ಏನು ಹೇಳುತ್ತಾರೆ ಅದನ್ನೇ ನಾವು ಪಾಲನೆ ಮಾಡುತ್ತೇವೆ. ನಾನು ಸಿಎಂ ಹಾಗೂ ಮಂತ್ರಿ ಆಗೋದಕ್ಕೆ ಆಗೋದಿಲ್ಲ ರಾಷ್ಟ್ರೀಯ ನಾಯಕರು ಹೇಳಿದರೆ ಮಾತ್ರ ಆಗುತ್ತೇವೆ. ಸಿಎಂ ಹೇಳುತ್ತಿರುವುದು ಸತ್ಯವಿದೆ ಎಂದರು.
ಒಪ್ಪಂದಗಳ ಬಗ್ಗೆ ನನಗೆ ಗೊತ್ತಿಲ್ಲ. ನಾನೊಬ್ಬ ಎಂಎಲ್ಎ ಆಗಿ ರಾಷ್ಟ್ರೀಯ ನಾಯಕರ ತೀರ್ಮಾನಗಳ ಬಗ್ಗೆ ನನಗೆ ಗೊತ್ತಿಲ್ಲ. ಸಹಜವಾಗಿ ಅದನ್ನ ರಾಷ್ಟ್ರೀಯ ನಾಯಕರ ತೀರ್ಮಾನ ಮಾಡುತ್ತಾರೆ. ಮುಖ್ಯಮಂತ್ರಿಗಳ ಆಯ್ಕೆ ಸಮಯದಲ್ಲಿ ಓಬಿಸಿ ಸಿಎಂ ಎಸ್ಸಿ ದಲಿತ ಸಿಎಂ ಹಾಗೂ ಜನರಲ್ ಸಿಎಂ ಎಂಬ ಮಾತುಕತೆಗಳು ಬಂದೇ ಬರುತ್ತದೆ ಎಂದರು.
ಅವರವರು ಸಭೆ ಮಾಡುವುದು ಅವರ ವೈಯಕ್ತಿಕವಾಗಿದೆ. ಸಿಎಂ ಬದಲಾಯಿಸುವುದು ರಾಷ್ಟ್ರೀಯ ನಾಯಕರಿಗೆ ಬಿಟ್ಟಿದ್ದು. ಸಿಎಂ ಮಾಡಿ ಎಂದು ಕೇಳುವುದು ಅವರ ಹಕ್ಕಾಗಿದೆ. ಜಾರಕಿಹೊಳಿಯವರು ಮಾದೇವಪ್ಪ ಅವರು ಪರಮೇಶ್ವರ್ ಅವರು ಚರ್ಚೆ ಮಾಡಿದ್ದಾರೆ. ಚರ್ಚೆ ಮಾಡೋದಕ್ಕೆ ಅವಕಾಶ ಇದೆ. ಎರಡುವರೆ ವರ್ಷಕ್ಕೆ ಬೇರೆಯವರಿಗೂ ಸಚಿವ ಸ್ಥಾನ ಸಿಕ್ಕರೆ ಅವಕಾಶ ಸಿಗುತ್ತೆ ಎಂದು ಆಗ ಕೇಳಿದ್ದೆ. ಬೇರೆಯವರಿಗೆ ಅವಕಾಶ ಕೊಡಿ ಎಂದು ನಾನು ಕೇಳುತ್ತೇನೆ. ನಾನು ಕೂಡ ಅವಕಾಶ ಕೊಡಿ ಎಂದು ಕೇಳಿದ್ದೆ ಅದು ಸಹಜ. ಆದರೆ ಕೊಡುವುದು ಬಿಡುವುದು ಅವರಿಗೆ ಬಿಟ್ಟಿದ್ದು ಎಂದರು.
ಸಂಪುಟ ಪುನರಚನೆ ಅಥವಾ ವಿಸ್ತರಣೆ ಎರಡನ್ನು ಕೂಡ ಮಾಡಬಹುದು. ಸಂಪುಟ ವಿಸ್ತರಣೆ ಆಗಬಹುದು ಅಥವಾ ಪುನರಚಣೆ ಕೂಡ ಆಗಬಹುದು. ಯಾವುದು ಆಗುತ್ತದೆ ಎಂದು ನನಗೆ ಗೊತ್ತಿಲ್ಲ. ನವಂಬರ್ ನಲ್ಲಿ ರಾಹುಲ್ ಗಾಂಧಿಯವರು ಕರ್ನಾಟಕ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಇಡೀ ರಾಜ್ಯದಲ್ಲಿ ನೀವುಗಳು ನಂಬರ್ ಕ್ರಾಂತಿ ಕ್ರಾಂತಿ ಎಂದು ಹೇಳುತ್ತಿದ್ದೀರಿ. ಅದನ್ನ ಶಾಂತಿ ಗೊಳಿಸಲು ರಾಹುಲ್ ಗಾಂಧಿಯವರು ಬರಲೇಬೇಕು. ನಮ್ಮ ರಾಷ್ಟ್ರೀಯ ನಾಯಕರು ಬರುತ್ತಾರೆ
ನೀವು ಹೇಳುವ ಕ್ರಾಂತಿ ಯಾವುದು ನಡೆಯುತ್ತಿಲ್ಲ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಬಿಹಾರದ ಚುನಾವಣೆ ನಂತರ ಎಲ್ಲವೂ ಸರಿ ಹೋಗುತ್ತದೆ. ಸಿಎಂ ಆಗಬೇಕೆಂಬ ಬಯಕೆಯನ್ನು ಹಿರಿಯ ನಾಯಕರುಗಳು ಕೇಳೋದು ಸಹಜ. ನಾನು ಕೂಡ ಮಂತ್ರಿ ಆಗಬೇಕೆಂದು ಕೇಳುತ್ತಿದ್ದೇನೆ. ನಾನು ಒಬ್ಬ ಹಿರಿಯ ನಾಯಕ ಮೂರು ಬಾರಿ ಶಾಸಕನಾಗಿದ್ದೇನೆ. ಸಚಿವ ಸ್ಥಾನ ಕೇಳುವುದರಲ್ಲಿ ಏನು ತಪ್ಪಿದೆ ಎಂದು ಪ್ರಶ್ನಿಸಿದರು.
ಆರ್ ಎಸ್ ಎಸ್ ಪತಸಂಚಲನ ವಿಚಾರದಲ್ಲಿ ಸರ್ಕಾರಕ್ಕೆ ಹಿನ್ನಡೆಯಾದ ವಿಚಾರದ ಬಗ್ಗೆ ಸಾಫ್ ಆದ ಶಾಸಕ ಗೋಪಾಲ ಕೃಷ್ಣ ಬೇಳೂರು, ನ್ಯಾಯಾಲಯದ ಆದೇಶಗಳನ್ನು ಪಾಲನೆ ಮಾಡುವುದು ನಮ್ಮ ಕರ್ತವ್ಯ ಅದರ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಸರ್ಕಾರಿ ಶಾಲೆಗಳಲ್ಲಿ ಸಭೆಗಳನ್ನು ಮಾಡಬೇಡಿ ಎಂದು ಹೇಳಿದ್ವಿ. ಅದಕ್ಕೆ ಅವರು ನ್ಯಾಯಾಲಯಕ್ಕೆ ಹೋಗಿದ್ದರು. ಕೋರ್ಟ್ನ ನ ಮಧ್ಯಾಂತರ ಆದೇಶ ತಿರಸ್ಕಾರ ಮಾಡಲು ಆಗುವುದಿಲ್ಲ. ಅದಕ್ಕೆ ಚಿಮಾರಿ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ. ಬೇರೆ ಸಂಘಟನೆಗಳು ಕೂಡ ನಮಗೆ ಅವಕಾಶ ಕೊಡಿ ಎಂದು ಹೇಳುತ್ತಾರೆ. ಆಗ ಘರ್ಷಣೆ ಆಗಬಹುದು ಎಂಬುದನ್ನ ಹೇಳುವುದಕ್ಕೆ ಆಗುವುದಿಲ್ಲ. ಘರ್ಷಣೆಯನ್ನು ತಪ್ಪಿಸುವುದು ಸರ್ಕಾರದ ಕೆಲಸ ಎಂದರು.
I don't know about the Naveen Kranti. Interim orders are not a joke - MLA Belur
