SUDDILIVE || SAGARA
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈಬಿಡದಿದ್ದರೆ ನೇಪಾಳದ ಹೋರಾಟದ ಎಚ್ಚರಿಕೆ ನೀಡಿದ ಮಾರುತಿ ಸ್ವಾಮಿಗಳು-Maruti Swamiji warns of Nepal's struggle if Sharavati Pumped Storage project is not abandoned
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಸಾಗರದ ತಾಲೂಕು ಕಚೇರಿಯಲ್ಲಿ ಅಣಕು ಶವ ಅಂತ್ಯಕ್ರಿಯೆ ನಡೆದಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನ ಶವವಾಗಿ ಮಲಗಿಸಿ ನಂತರ ಇಂಧನ ಸಚಿವ ಕೆಜೆ ಜಾರ್ಜ್ ಅವರ ಮುಕವಾಡ ಹಾಕಿದ ವ್ಯಕ್ತಿಯಿಂದ ಅಂತ್ಯ ಕ್ರಿಯೆ ನಡೆಸಲಾಗಿದೆ. ಜಾರ್ಜ್ ಮುಖವಾಡ ಹಾಕಿದ ಭಾವಚಿತ್ರವನ್ನ ಸುಡಲು ಮುಂದಾದಾಗ ಪೊಲೀಸರು ತಡೆದಿರುವ ಘಟನೆ ನಡೆದಿದೆ.
ಕಳೆದ 12 ದಿನಗಳಿಂದ ಈ ಹೋರಾಟ ನಡೆಯುತ್ತಿದೆ. ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ದಿವ್ಯ ಸಾನಿಧ್ಯ ವಹಿಸಿದ್ದ ಬಂಗಾರುಮಕ್ಕಿ ವೀರಾಂಜನೇಯ ದೇವಸ್ಥಾನದ ಮಾರುತಿ ಸ್ವಾಮಿಗಳು ಮಾತನಾಡಿ, ಇಂದು ಶರಾವತಿ ಪಂಪ್ಡ ಸ್ಟೋರೇಜ್ ಎಂಬುದು ಭೂತವಾಗಿದೆ ಅದಕ್ಕೆ ಆಕಾರಕೊಟ್ಟಿದ್ದು ಸರ್ಕಾರ, ಅದು ಸತ್ತುಹೋಗಿದೆ. ಸುಡಲು ರಾಜಕಾರಣಿಗಳು ಬರಬೇಕಿತ್ತು. ಬರಲಿಲ್ಲ ಎಂದರೆ ಈ ಯೋಜನೆ ಕೈಬಿಟ್ಟಂತೆ ಆಗಿದೆ. ಈ ಯೋಜನೆ ಅನಾಥವಾಗಿದೆ. ಶವಯಾತ್ರೆಗೆ ಯಾರೂ ಬಾರದಿದ್ದ ಕಾರಣ ಅದು ಅನಾಥವಾಗಿದೆ. ಶವಯಾತ್ರೆಗೆ ಬಂದಿದ್ದರೂ ನಿಮ್ಮ ಮೂಲಕ ಯೋಜನೆಗೆ ಬೆಂಕಿಯಿಡುವ ಮೂಲಕ ಕೈಬಿಡಬೇಕಿತ್ತು ಎಂದರು.
ಇಂತಹ ಪಂಪ್ಡ್ ಸ್ಟೋರೇಜ್ ಎಲ್ಲೂ ಯಶಸ್ವಿಯಾಗಿರುವ ಉದಾಹರಣೆಗಳಿಲ್ಲ. ರಾಜಕಾರಣಿಗಳು ಜನರಿಗಾಗಿ ಅಧಿಕಾರದ ಕುರ್ಚಿಯಲ್ಲಿದ್ದೀರ. ನಿಮ್ಮ ತೆವಲಿಗೆ ಕುರ್ಚಿಯಲ್ಲಿ ಕೂರಬಾರದು. ಜವಬ್ದಾರಿ ಮೆರೆಯಲು ಕುರ್ಚಿಯಲ್ಲಿ ಕೂರಬೇಕು. ನಿಮಗೆ ಬಹಿರಂಗ ಚರ್ಚೆಗೆ ಸವಾಲು ಹಾಕುವೆ. ನಮ್ಮ ಹೋರಾಟ ಕಡೆಗಣಿಸಿದರೆ ನೇಪಾಳದ ಹೋರಾಟದ ಕಳೆ ಬರಲಿದೆ ಎಂದು ಎಚ್ಚರಿಸಿದರು.
ಹೋರಾಟ ಕೇಳಲಿಲ್ಲ ಎಂದರೆ ಈಗ ತಾಲೂಕು ಕಚೇರಿಯಲ್ಲಿ ನಡೆಯುತ್ತಿದೆ. ನಾಳೆ ವಿಧಾನ ಸಭೆ, ನಾಡಿದ್ದು ದೆಹಲಿಯ ಜಂತರ್ ಮಂತರ್ ನಲ್ಲಿ ನಡೆಸಿ ನ ನಂತರ ಮುತ್ತಿಗೆ ಕಾರ್ಯಕ್ರಮವನ್ನೂ ಹಾಕುತ್ತೇವೆ ಎಂದು ಎಚ್ಚರಿಸಿದ ಅವರು ಶರಾವತಿ ಯೋಜನೆ ಒಂದೇ ಅಲ್ಲದೆ ಈ ಪಶ್ಚಿಮ ಘಟ್ಟದಲ್ಲಿ 22 ಯೋಜನೆಯನ್ನ ಜಾರಿಗೆ ತರಲಾಗಿದೆ. ಎಲ್ಲಾ ಯೋಜನೆಗಳು ಪ್ರಕೃತಿ ವಿರೋಧಿಯಾಗಿದೆ ಎಂದರು.
ವಿದೇಶವನ್ನ ಮಾದರಿಯಾಗುವುದಾದರೆ ಅಮೇರಿಕಾ ಒಂದರಲ್ಲೇ 80 ಅಣೆಕಟ್ಟನ್ನ ಒಡೆಯಲಾಗಿದೆ. ನಾವು ಅಣೆಕಟ್ಟು ಕಟ್ಟುವುದಲ್ಲದೆ ಭೂಗತ ಯೋಜನೆಯನ್ನ ಮಾಡುತ್ತಿದ್ದೇವೆ. ಪಂಪ್ಡ್ ಸ್ಟೋರೇಜ್ ನಾಳೆಯ ದಿನಗಳಿಗೆ ಎಂದು ಹೇಳುತ್ತಿದ್ದಾರೆ. ಇಂದಿನಭವಿಷ್ಯಕ್ಕೆ ಬೇಕಾ್ ಯೋಜನೆಯನ್ನ ಜಾರಿಗೆ ತನ್ನಿ ಬಾಳೆ ನಾಡಿದ್ದಕ್ಕೆ ಬೇಡ ಎಂದರು.
ಕೇಂದ್ರ ಸರ್ಕಾರ ಈ ಯೋಜನೆಗೆ ಅನುಮತಿ ನೀಡಿಲ್ಲ. ನೀಡಿದ್ದರೆ ಒಂದು ದಾಖಲೆಕೊಡಿ 24 ಗಂಟೆಯ ಒಳಗೆ ನ್ಯಾಯಾಲಯಕ್ಕೆ ಹೋಗುತ್ತೇವೆ. ಇಲ್ಲ ಇಲ್ಲಿ ನಡೆಸುವುದಾಗಿ ಹಿಂಬರಹ ಕೊಡಿ ಅದನ್ನೂ ನ್ಯಾಯಾಲಯದಲ್ಲಿ ಚಾಲೆಂಜ್ ಮಾಡ್ತೀವಿ ಎಂದು ಆಗ್ರಹಿಸಿದರು. ಸಾರ್ವಜನಿಕ ಅಹವಾಲು ಸಭೆಯಲ್ಲಿ ಕೇಳಿದ 48 ಪ್ರಶ್ನೆಗೆ ಈಗ ಉತ್ತರ ಕೊಡಲು ಹುಡುಕುತ್ತಿದ್ದೀರಿ. ಪೊಲೀಸ್ ಇಲಾಖೆ ಬಳಸಿಕೊಂಡು ನಮ್ಮನ್ನ ಹತ್ತಿಕ್ಕುವ ಕೆಲಸ ಮಾಡುತ್ತಿದ್ದೀರಿ. ಮುಂದಿನ ಚುನಾವಣೆಯಲ್ಲಿ ನಿಮ್ಮನ್ನ ಎಲ್ಲಿ ಕೂರಿಸಬೇಕು ಅಲ್ಲಿ ಕೂರಿಸಕುತ್ತೇವೆ. ಜನಪರ ಕೆಲಸ ಮಾಡಿಕೊಂಡು ಬನ್ನಿ ನಿಮ್ಮನ್ನೇ ಹೊತ್ತು ಮೆರವಣಿಗೆ ಮಾಡುತ್ತೇವೆ ಎಂದರು.
ಎಲ್ಲದಕ್ಕೂ ನ್ಯಾಯಾಲಯಕ್ಕೆಹೋಗುವುದಾದರೆ ಕಾರ್ಯಾಂಗ ಮತ್ತು ಶಾಸಕಾಂಗ ವಜಾಗೊಳಿಸಿ. ಅದರ ಅವಶ್ಯಕತೆ ಮತ್ತೇನುಕ್ಕೆ ಎಂದು ಪ್ರಶ್ನಿಸಿದ ಅವರು ಕಾನೂನು ಬಲವಿಲ್ಲದೆ ಬಂಡತನದಿಂದ ಮೆರೆಯಬೇಡಿ. ಬಂಡತನಬಿಟ್ಟು ಗೆಜೆಟ್ ನೋಟಿಫಿಕೇಷನ್ ಹೊರಡಿಸಿ. ಇಲ್ಲವಾದಲ್ಲಿ ನಿಮ್ಮನ್ನ ಯೋಜನೆಯಂತೆ ಸುಟ್ಟುಹಾಕುತ್ತೇವೆ. ಉಓಜನೆಯನ್ನ ಕೈಬಿಡದಿದ್ದರೆ ಇದರ ಪರವಾಗಿರುವವರು ರಾಜೀನಾಮೆ ಕೊಡಬೇಕಾಗುತ್ತದೆ ಎಂದರು.
ಮಾಜಿ ಶಾಸಕ ಮಹಿಮಾ ಪಟೇಲ್ ಶಿಕ್ಷಣ, ಕೃಷಿ, ಪರಿಸರ, ಆರೋಗ್ಯ ಬದಲಾಗಬೇಕಿದೆ ಎಂದು ತಿಳಿಸಿದರು. ಇವಿಷ್ಟು ಬದಲಾಗಬೇಕು. ವ್ಯವಸ್ಥೆಯಲ್ಲೇ ಪರಿವರ್ತನೆ ಬರುವಂತಹ ಚಳುವಳಿಯಾಗಿ ಪಂಪ್ಡ್ ಸ್ಟೋರೇಜ್ ಆಗಬೇಕಿದೆ.
ಸ್ವಾಮಿರಾವ್ ಮಾತನಾಡಿ, ಪ್ರತಿಭಟನೆಯ ಅಂಗವಾಗಿ ಅಣಕು ಶವ ಅಂತ್ಯಕ್ರಿಯೆಯನ್ನ ಅರಣ್ಯ ಇಲಾಖೆಯ ಬಳಿ ಮಾಡೋಣ. ಸಿಎಂ ಸಿದ್ದರಾಮಯ್ಯ, ಡಿಕೆಶಿ ಅವರೆ ಈ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜಬೆಯನ್ನ ನಿಲ್ಲಿಸಿ ಎಂದು ಆಗ್ರಹಿಸಿದರು. ಕಾರ್ಯಕ್ರಮದ ದಿವ್ಯವಸಾನಿಧ್ಯವನ್ನ ವಹಿಸಿದ್ದ ಬಂಗಾರಮಕ್ಕಿ ದೇವಸ್ಥಾನದ
ಇಂಚಗಿರಿ ಮಠದ ಶಶಿಕಾಂತ್ ಪಡಸಲಗಿ ಮಾತನಾಡಿ, ಬೆಳಗಾವಿ ಅಧಿವೇಶನದ ಒಳಗೆ ಈ ಯೋಜನೆ ರದ್ದಾಗದಿದ್ದರೆ ಅಧಿವೇಶನಕ್ಕೆ ಇಲ್ಲಿನ ಶಾಸಕರು, ಸಚಿವರು ಬರಬೇಡಿ. ಇಲ್ಲಿ ಭ್ರಷ್ಠಚಾರದ ಮೂಲಕ ಯೋಜನೆಯನ್ನ ಜಾರಿಗೆ ತಂದು ಕಿತ್ತೂರು ನೆಲಕ್ಕೆ ಬರಬೇಡಿ ಎಂದು ಸವಾಲು ಹಾಕಿದರು.
Maruti Swamiji warns of Nepal's struggle