SUDDILIVE || SHIVAMOGGA
ಮೆಗ್ಗಾನ್ ಅವ್ಯವಸ್ಥೆ ವಿರುದ್ಧ ಕರವೇ ಅಹೋರಾತ್ರಿ ಧರಣಿ- Karave holds overnight sit-in against Meggan chaos
ಮೆಗ್ಗಾನ್ ಅವ್ಯವವಸ್ಥೆ ಕುರಿತು ಮತ್ತು ಸಿಮ್ಸ್ ನಿಂದ ಜಿಲ್ಲಾ ಆಸ್ಪತ್ರೆಯನ್ನ ಬೇರ್ಪಡಿಸಿ ಪ್ರತ್ಯೇಕ ಸಾರ್ವಜನಿಕ ಆಸ್ಪತ್ರೆ ಮಾಡುವಂತೆ ಆಗ್ರಹಿಸಿ ಕರವೇ ನಾರಾಯಣ ಗೌಡರ ಬಣ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದೆ.
ಅಹೋರಾತ್ರಿ ಧರಣಿಯನ್ನ ಕರವೇ ನಾರಾಯಣಗೌಡರ ಬಣದ ಜಿಲ್ಲಾಧ್ಯಕ್ಷ ಮಂಜು ನೇತೃತ್ವದಲ್ಲಿ ಸಿಮ್ಸ್ ಮುಂಭಾಗದಲ್ಲಿ ಟೆಂಟ್ ಹಾಕಿಕೊಂಡು ಪ್ರತಿಭಟನೆ ನಡೆಸಲಾಗುತ್ತಿದೆ. ಆಸ್ಪತ್ರೆಯಲ್ಲಿ, ರೋಗಿಗಳಿಗೆ ಸರಿಯಾದ ಮೆಡಿಸಿನ್ ಸಿಗುತ್ತಿಲ್ಲ. ವೈದ್ಯರ ಅಲಭ್ಯತೆ, ವಾಸನೆಗಳ ಆಗರ, ಸ್ವಚ್ಛತೆಗಳ ಕೊರತೆಯನ್ನ ವಿರೋಧಿಸಿ ಪ್ರತಿಭಟಿಸಲಾಗುತ್ತಿದೆ.
ಅ. 15 ರ ಇಂದಿನಿಂದ ನಾಳೆ ಸಂಜೆಯ ವರೆಗೆ ಪ್ರಯಿಭಟಿಸಲಾಗುವುದು. ಮೆಗ್ಗಾನ್ ಅವ್ಯವಸ್ಥೆ ಸರಿಯಾಗದಿದ್ದರೆ ಸಂಘಟನೆ ಉಗ್ರಹೋರಾಟ ನಡೆಯಲಿದೆ ಎಂದು ಎಚ್ಚರಿಸಿದೆ. ಎಂಎಲ್ ಎ, ಎಂಎಲ್ ಸಿ ಗಳ ಮೂಲಕ ಸರ್ಕಾರಕ್ಕೆ ಮನವಿ ಮೂಲಕ ಆಸ್ಪತ್ರೆಯನ್ನ ಸರಿಪಡಿಸುವಂತೆ ಒತ್ತಾಯಿಸಲಾಗುವುದು ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ವೈದ್ಯರು ಖಾಸಗಿ ಆಸ್ಪತ್ರೆಗೆ ಹೋಗುವುದರಿಂದ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳ ಬಗ್ಗೆ ನಿರ್ಲಕ್ಷ ಹೆಚ್ಚಾಗಿದೆ. ಹೆರಿಗೆ ಆಸ್ಪತ್ರೆಯಲ್ಲಿ ಮಕ್ಕಳ ಹುಟ್ಟಿನ ಮೇಲೆ ಲಂಚ ನಿಗದಿಯಾಗಿದೆ, ಗಂಡು ಮಕ್ಕಳಿಗೆ ಒಂದು ರೀತಿಯ ಹಣ ನಿಗದಿಯಾಗಿದ್ದರೆ ಹೆಣ್ಣು ಮಗು ಹುಟ್ಟಿದರೆ ಒಂದು ರೇಟು ಲಂಚ ನಿಗದಿಯಾಗಿದೆ. ಸಿಜರಿಯನ್ ಮಾಡುದ್ರೆ 10 ಸಾವಿರ ಲಂಚ ನೀಡಬೇಕಿದೆ. ಸಿಬ್ಬಂದಿಗಳ ಕುಂದುಕೊರತೆ ವಿರುದ್ಧ ಪ್ರತಿಭಟಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
Karave holds overnight sit-in against Meggan chaos