ad

RSS ಬಗ್ಗೆ ಮಾತನಾಡುವ ಪ್ರಿಯಾಂಕ ಖರ್ಗೆ ಹರಿಪ್ರಸಾದ್ ಗಳೆಲ್ಲ ಕುನ್ನಿಗಳು-ಈಶ್ವರಪ್ಪ-Priyanka Kharge and Hariprasad who talk about RSS are all scoundrels

SUDDILIVE || SHIVAMOGGA

RSS  ಬಗ್ಗೆ ಮಾತನಾಡುವ ಪ್ರಿಯಾಂಕ  ಖರ್ಗೆ ಹರಿಪ್ರಸಾದ್ ಗಳೆಲ್ಲ ಕುನ್ನಿಗಳು-ಈಶ್ವರಪ್ಪ-Priyanka Kharge and Hariprasad who talk about RSS are all scoundrels - Eshwarappa


ಎಲ್ಲ ಮನೆಗಳಲ್ಲಿ ಗೋವು ಇರಲು ಸಾಧ್ಯವಿಲ್ಲ. ಆದ್ದರಿಂದ ಸಾಮೂಹಿಕವಾಗಿ ಗೋಪೂಜೆ ಮಾಡಬೇಕೆಂದು ನಿರ್ಧರಿಸಿದ್ದೇವೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದ 05 ಕಡೆ ಗೋವು ಪೂಜೆಗಳನ್ನು ಹಮ್ಮಿಕೊಂಡಿದ್ದೇವೆ. ಅಕ್ಟೋಬರ್ 22 ರಂದು  ಶಿವಮೊಗ್ಗದ ಶಿವಾಲಯದಲ್ಲಿ  03 ಜನ ಸ್ವಾಮೀಜಿಗಳು ಆಗಮಿಸಲಿದ್ದಾರೆ. ವಾಸವಿ ಶಾಲೆಯ ಆವರಣದಲ್ಲಿ  ಗೋಪಾಳದ ನಾಗ ಸುಬ್ರಹ್ಮಣ್ಯ ದೇವಾಲಯದಲ್ಲಿ ಶಿವಮೊಗ್ಗದ ರವೀಂದ್ರ ನಗರದ ಗಣಪತಿ ದೇವಸ್ಥಾನದಲ್ಲಿ   ಶಾಂತಿನಗರದ ಶನಿದೇವ ಪೂಜೆ ಹಮ್ಮಿಕೊಂಡಿದ್ದೇವೆ ಎಂದರು.

ಪೂಜೆ ಮಾಡುವವರು  ಗೋವುಗಳಿಗೆ ಅಕ್ಕಿ ಬೆಲ್ಲಗಳನ್ನು  ತರುವುದನ್ನು ನಿಲ್ಲಿಸಬೇಕು. ಭದ್ರತಾ ವಾಹನವನ್ನು ವಾಪಸ್ ಪಡೆದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರದ ಭದ್ರತೆ ಯನ್ನೂ ವಾಪಸ್ ತೆಗೆದುಕೊಂಡಿದೆ. ಯಾಕೆ ಕೊಟ್ರು ಯಾಕೆ ವಾಪಸ್ ತೆಗೆದುಕೊಂಡರು ಅಂತ ನಾನು ಕೇಳಿಲ್ಲ. ಕರ್ನಾಟಕ ರಾಜ್ಯ ಸಾಕಾರ ಪಾಪರ್ ಆಗಿದೆ ಎಂಬುದಕ್ಕೆ  ನೀರುಗಂಟಿಗೂ ಸಂಬಳ ಕೊಟ್ಟಿಲ್ಲ ಎಂಬುವುದೇ ಸಾಕ್ಷಿ ಎಂದರು. 

ರಾಜ್ಯ ಸರ್ಕಾರ 80 ಪರ್ಸೆಂಟ್ ವರೆಗೂ ಕಂಟ್ರಾಕ್ಟರ್ ಗಳಿಂದ ಕಮಿಷನ್ ತೆಗೆದು ಕೊಂಡಿದ್ದಾರೆ. ಕಂಟ್ರಾಕ್ಟರ್. ಗಳಿಗೆ 33 ಸಾವಿರ ಹಣ ನೀಡಬೇಕು. ಅದನ್ನು ಕೇಳಿದಾಗ  ಕೋರ್ಟ್ ಗೆ ಹೋಗಿ ಎಂದು ಹೇಳುತ್ತಾರೆ ಎಂದರು. 


RSS ಬಗ್ಗೆ ಸರ್ಕಾರಕ್ಕೆ  ಭಯ ವಿದೆ 


ಇಂದಿರಾ ಗಾಂಧಿ  ಸೇರಿದಂತೆ ಅನೇಕರು RSS ಅನ್ನು ಬ್ಯಾನ್ ಮಾಡಿದ್ದರು ಯಾರು ಬ್ಯಾನ್ ಮಾಡಿದ್ದರು ಅವರೇ. ನಾಶವಾದರು, ಇಂದು RSS ದೇಶಕ್ಕೆ ಪ್ರಧಾನ ಮಂತ್ರಿಗಳನ್ನು ನೀಡಿದೆ. RSS  ಬಗ್ಗೆ ಮಾತನಾಡುವ ಪ್ರಿಯಾಂಕ  ಖರ್ಗೆ ಹರಿಪ್ರಸಾದ್ ಗಳೆಲ್ಲ ಕುನ್ನಿಗಳು ಎಂದು ಆರೋಪಿಸಿದರು. 

ಕನ್ನೇರಿ ಸ್ವಾಮಿಗಳಿಗೆ ಬಾಗಲಕೋಟೆ ಹಾಗೂ ಬಿಜಾಪುರ ಜಿಲ್ಲೆಗೆ ಬಾರದಂತೆ ನಿಷೇಧಿಸಲಾಗಿದೆ.ಈ ಕಾಂಗ್ರೆಸ್ ಸರ್ಕಾರಕ್ಕೆ ಹಿಂದೂ ಸ್ವಾಮೀಜಿಗಳ ಮೇಲೆ ಗೌರವ ಇಲ್ಲ. 24 ರಂದು ಬಿಜಾಪುರಕ್ಕೆ ಹೋಗಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುತ್ತಿದ್ದೇನೆ. ಅವರನ್ನು ಬ್ಯಾನ್ ಮಾಡಿದ್ದನ್ನು ವಾಪಸ್ ತೆಗೆದುಕೊಳ್ಳಬೇಕೆಂದು ಹೇಳುತ್ತೇನೆ

ನಾನು ಬಿಜೆಪಿಗೆ ಹೋಗುವೆ

ನನಗೆ ನೀಡಿದ್ದ ಭದ್ರತೆ ರಾಜ್ಯ ಸರ್ಕಾರ ವಾಪಾಸ್ ಪಡೆದಿದೆ. ನಾನು ವಾಪಾಸ್ ಯಾಕೆ ಅಂತಾನೂ ಕೇಳಿಲ್ಲ. ನನಗೆ ಭದ್ರತೆ ನೀಡಿದ್ದಾಗಲೂ ಯಾಕೆ ಅಂತಾ ಕೇಳಿಲ್ಲ. ನನಗೆ ಬೆದರಿಕೆ ಕರೆ ಬಂದಾಗ ಭದ್ರತೆ ಕೊಟ್ಟಿದ್ರು ನೀವು ನನಗೆ ದುಬೈನಿಂದ ಕರೆ ಬರಲಿ ಅಂತಾ ಕಾಯ್ತಾ ಇದ್ದಿರಾ ನನ್ನ ಭದ್ರತೆ ಯಾಕೆ ವಾಪಾಸ್ ಪಡೆದರು ಅಂತಾ ನನಗೆ ಗೊತ್ತಿಲ್ಲ ಎಂದರು.

ಯತ್ನಾಳ್ ಹೊಸ ಪಕ್ಷ ಕಟ್ಟುತ್ತಿರೋದು ಗೊತ್ತಿಲ್ಲ ಎಂದ ಅವರು ನಾನು ಬಿಜೆಪಿ ಪಕ್ಷಕ್ಕೆ ಮಾತ್ರ ಹೋಗುತ್ತೆನೆಅದು ಕೂಡ ಬಿಜೆಪಿ ಪಕ್ಷ ಶುದ್ಧಿಕರಣವಾದಾಗ ಮಾತ್ರ ಹೋಗುವೆ ನಾನು ಸತ್ರು ಕೂಡ ಬೇರೆ ಯಾವ ಪಕ್ಷಕ್ಕೂ ಹೋಗಲ್ಲ ಹೋದರೆ ಬಿಜೆಪಿ ಪಕ್ಷಕ್ಕೆ ಮಾತ್ರ ಹೋಗೋದು ಎಂದರು.

Priyanka Kharge and Hariprasad who talk about RSS are all scoundrels

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close