SUDDILIVE || SHIVAMOGGA
ಆಜಾನ್ ವಿರುದ್ಧ ಪ್ರತಿಭಟನೆ-ಡಿ.ಎಸ್.ಅರುಣ್ ಘೋಷಣೆ- Protest against Azaan-D.S. Arun
ಮಸೀದಿಗಳಲ್ಲಿ ಅಜಾನ್ ಕೂಗುವ ಬಗ್ಗೆ ಬಿಜೆಪಿ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಡಿ. ಎಸ್ .ಅರುಣ್ ಆಕ್ಷೇಪ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಇದರ ವಿರುದ್ದ ಹೋರಾಟ ಶುರುವಾಗಲಿದೆ ಎಂದು ಎಚ್ವರಿಸಿದ್ದಾರೆ.
ಆವರು ಇಂದು ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.ರಾಜ್ಯ ಸರ್ಕಾರವು ಸಂಘ- ಸಂಸ್ಥೆಗಳ ಪಥ ಸಂಚಲನಕ್ಕೆ ವಿಧಿಸಿರುವ ನಿರ್ಬಂಧ ಹೇರಿರುವ ಸಂಗತಿ ಪಸ್ತಾಪಿಸಿ ಅವರು, ಅಜಾನ್ ವಿರುದ್ಧದ ಹೋರಾಟದ ಘೋಷಣೆ ಮಾಡಿದರು.
ಮಸೀದಿಗಳಲ್ಲಿ ಅಜಾನ್ ಕೂಗುವ ಬಗ್ಗೆ ಸುಪ್ರೀಂ ಕೊರ್ಟ್ ಸ್ಪಷ್ಟ ಸೂಚನೆ ನೀಡಿದೆ.ಆದರೂ ಕೂಡ ಮಸೀದಿಗಳಲ್ಲಿ ಸೌಂಡ್ ಲಿಮಿಟ್ ಕಡಿಮೆಆಗಿಲ್ಲ. ದಿನಕ್ಕೆ ಐದಾರು ಬಾರಿ ಅಜಾನ್ ಹಾಕಲಾಗುತ್ತದೆ.ಇದು ಮಸೀದಿ ಸುತ್ತ ಮುತ್ತಲ ಜನರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಓದು ವ ಮಕ್ಕಳಂತೂ ತೀವ್ರ. ತೊಂದರೆ ಅನುಭವಿ ಸುತ್ತಿದ್ದಾರೆ.ಮುಂದಿನ ದಿನಗಳಲ್ಲಿ ಈಬಗ್ಗೆ ಮಾತನಾಡಲು ಶುರು ಮಾಡುತ್ತೇವೆ ಎಂದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ವು ಹಿಂದೂಗಳಿಗೆ ಒಂದು ನೀತಿ, ಮುಸಲ್ಮಾನರಿಗೇ ಒಂದುನೀತಿ ಅನುಸರಿಸುತ್ತಿದೆ. ಆರ್ ಎಸ್ ಎಸ್ ಸೇರಿಹಿಂದೂಸಂಘಟನೆಗಳ ಮೇಲೆ ನಿರ್ಬಂದ ಹೇರುವುದಕ್ಕಾಗಿಯೇ ಪಥ ಸಂಚಲನಗಳಿಗೆ, ಪಾದಯಾತ್ರೆಗಳಿಗೆ ಅನುಮತಿಕಡ್ಡಾಯ ಮಾಡಿದೆ.ಆದರೆ ಸರ್ಕಾರ ನಿರ್ಬಂಧ ಹಾಕಬೇಕಿರುವುದು ನಮಗಲ್ಲ, ಅಜಾನ್ ಸೌಂಡ್ ಲಿಮಿಟ್ ಗೆ ನಿರ್ಬಂಧ ಹಾಕಲಿ, ಕೋರ್ಟ್ ಕೊಟ್ಟ ಸೂಚನೆಗಳ ನ್ನು ಅನುಷ್ಠಾನಕ್ಕೆ ತರಲು ಶ್ರಮಿಸಲಿ ಎಂದು ಕಿವಿ ಮಾತು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ನಾಯಕತ್ವದ ಕುರಿತುಕಾಂಗ್ರೆಸ್ ಎಂ ಎಲ್ಸಿ ಡಾ. ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಎಲ್ಲವೂ ನಾಟಕ. ಸರ್ಕಾರ ಹಳ್ಳ ಹಳ್ಳ ಹಿಡಿದಿದೆ . ಎಲ್ಲವೂ ಅಭಿವೃದ್ಧಿ ಕೆಲಸಗಳೇ ಇಲ್ಲ.ಜನರ ರೊಚ್ಚಿಗೆದಿದ್ದಾರೆ. ಜನರ ಗಮನ ದಿಕ್ಕುತಪ್ಪಿಸಲು ಇವರು ನಾಟಕ ಆಡುತ್ತಿದ್ದಾರೆ. ಪ್ರಿಯಾಂಕ ಖರ್ಗೆ, ಸಂತೋಷ್ ಲಾಡ್, ಮಧು ಬಂಗಾರಪ್ಪ ದಿನಕ್ಕೊಂದು ಹೇಳಿಕೆ ನೀಡಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಸಿಎಂಆಗೋದಿಲ್ಲ. ಅವರನ್ನು ಸಿಎಂ ಸ್ಥಾನದಿಂಧ ವಂಚಿಸುವುದಕ್ಕಾಗಿಯೇ ಈ ರೀತಿಯ ಹೇಳಿಕೆ ನೀಡಲಾಗುತ್ತಿದೆ.ಈ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದರು.
Protest against Azaan-D.S. Arun
