SUDDILIVE || SHIVAMOGGA
ಲಂಚ್ ಬ್ರೇಕ್ ನಂತರ ಹಾವಳಿಯಿಟ್ಟ ಅರ್ಜುನ್ ತೆಂಡೂಲ್ಕರ್-A troubled Arjun Tendulkar
ನವಲೆಯ ಕೆ ಎಸ್ ಸಿ ಎ ಗ್ರೌಂಡ್ ನಲ್ಲಿ ನಡೆಯುತ್ತಿರುವ ಗೋವಾ vs ಕರ್ನಾಟಕ ರಾಜ್ಯಗಳ ರಣಜಿ ಪಂದ್ಯವು ಲಂಚ್ ಬ್ರೇಕ್ ನಂತರ ತಿರುವುಪಡೆದುಕೊಂಡಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡಕ್ಕೆ ಅರ್ಜುನ್ ತೆಂಡೂಲ್ಕರ್ ಹಾವಳಿಯಿಟ್ಟಿದ್ದಾರೆ.
ಲಂಚ್ ಬ್ರೇಕ್ ವರೆಗೆ ಯಾವುದೇ ವಿಕೆಟ್ ಕಳೆದುಕೊಳ್ಳದ ಕರ್ನಾಟಕ ತಂಡ 12 ಓವರ್ ಗೆ 15 ರನ್ ಗೆ ನೋಲಾಸ್ ಆಗಿತ್ತು. ಲಂಚ್ ಬ್ರೇಕ್ ನಂತರ ಬ್ಯಾಟ್ ಮಾಡಲು ಬಂದ ಕರ್ನಾಟಕ ತಂಡಕ್ಜೆ ಅರ್ಜುನ್ ತೆಂಡೂಲ್ಕರ್ ಅಕ್ಷರಶಃ ಹಾವಳಿಯಿಟ್ಟಿದ್ದಾರೆ.
22 ಓವರ್ ಗೆ 3 ವಿಕೆಟ್ ನಷ್ಟಕ್ಕೆ 47 ರನ್ ಗಳಿಸಿತ್ತು. ಮಾಯಾಂಕ್ ಅಗರ್ ವಾಲ್ 68 ಬಾಲಗೆ 28 ರನ್ ಹೊಡೆದು ಔಟಾಗಿದ್ದಾರೆ. ಕರುಣ್ ನಯ್ಯರ್ 17 ಬಾಲ್ ಗೆ 12 ರನ್ ಹೊಡೆದು ಸ್ಕ್ರೀಜ್ ನಲ್ಲಿ ಇದ್ದರು. ನಿಕಿನ್ ಜೋಸೆ 3 ರನ್ ಹೊಡೆದು ಮತ್ತು ಶ್ರೀಜಿತ್ ಸೊನ್ನೆಗೆ ಅರ್ಜುನ್ ತೆಂಡೂಲ್ಕರ್ ಬೌಲಿಂಗ್ ಗೆ ಔಟಾಗಿದ್ದಾರೆ.
ಕರುಣ್ ನಯ್ಯರ್ ಮತ್ತು ಮಾಯಾಂಕ್ ಅಗರ್ ವಾಲ್ ನಡುವೆ 21 ರನ್ ಗಳ ಜೊತೆಯಾಟ ಬಂದಿದೆ ಒಪನರ್ ಆಗಿ ಬಂದಿದ್ದ ಮಯಾಂಕ್ ಮತ್ತು ನಿಕಿನ್ ಜೋಸೆ ನಡುವೆ 18 ರನ್ ಬಂದಿತ್ತು. ನಿಖಿನ್ ಔಟಾದ ನಂತರ ಶ್ರೀಜಿತ್ ಜೊತೆ ಅಗರ್ ವಾಲ್ 8 ರನ್ ಜೊತೆಯಾಡಿದ್ದರು. ಕೌಶಿಕ್ ವಿ ಬೌಲಿಂಗ್ ಗೆ ಮಾಯಾಂಕ್ ಸ್ಲಿಪ್ ನಲ್ಲಿ ಕ್ಯಾಚಿತ್ತು ಔಟಾದರು.
A troubled Arjun Tendulkar
