ಕಸವಿಲೇವಾರಿ ಘಟಕ ವಿರೋಧಿಸಿ ಪ್ರತಿಭಟನೆ-Protest against garbage disposal unit

SUDDILIVE || SHIVAMOGGA

ಕಸವಿಲೇವಾರಿ ಘಟಕ ವಿರೋಧಿಸಿ ಪ್ರತಿಭಟನೆ-Protest against garbage disposal unit 

Protest, garbage

ಹೊಳೆಬೆನವಳ್ಳಿಯಲ್ಲಿ ಕಸವಿಲೇವಾರಿ ಘಟಕ ಸ್ಥಾಪನೆಯನ್ನ ವಿರೋಧಿಸಿ ಪ್ರತಿಭಟನೆ ನಡೆದಿದೆ. 64 ಹಳ್ಳಿಗಳ ಕಸ ವಿಲೇವಾರಿ ಘಟಕ ಇದಾಗಿದ್ದು ನಮ್ಮ ಹಳ್ಳಿಗೆ ಬೇಡ ಎಂಬುದು ಹೊಳೆಹೊನ್ನೂರು ಗ್ರಾಮಸ್ಥರ ಆಗ್ರಹವಾಗಿದೆ. 

ಹೊಳೆಬೆನವಳ್ಳಿ ಗ್ರಾಮದ ಹಳೆ ಗ್ರಾಮ ಠಾಣಾ ಜಾಗದಲ್ಲಿ, ಗ್ರಾಮ ಪಂಚಾಯತಿ ವತಿಯಿಂದ 64 ಹಳ್ಳಿಗಳ ಕಸ ವಿಲೇವಾರಿ ಘಟಕ ಆರಂಭಿಸಲು ಅನುಮೋದನೆ ನೀಡಲಾಗಿದೆ.  ಗ್ರಾಮಸ್ಥರ ಆರೋಗ್ಯ, ಆರ್ಥಿಕ , ಸಾಮಾಜಿಕ ಹಿತದೃಷ್ಟಿಯಿಂದ ನೀಡಿರುವ ಅನುಮೋದನೆಯನ್ನು ಹಿಂಪಡೆಯುವಂತೆ ಹೋರಾಟಗಾರರು ಹೊಳೆಬೆನವಳ್ಳಿ ಗ್ರಾಮಪಂಚಾಯಿತಿ ಕಾರ್ಯಾಲಯದ ಮುಂದೆ ಪ್ರತಿಭಟನೆಗೆ ಇಳಿದಿದ್ದಾರೆ.  

ಹಲವಾರು ಬಾರಿ ಗ್ರಾಮ ಪಂಚಾಯಿತಿ ಆಡಳಿತಕ್ಕೆ ಮನವಿ ಮಾಡಿಕೊಂಡರು ಇದುವರೆಗೂ ಸಕಾರಾತ್ಮಕ ಸ್ಪಂದನೆ ನೀಡದ ಕಾರಣ ಇಂದು ಮಧ್ಯಾಹ್ನ 12ಗಂಟೆಗೆ  ಗ್ರಾಮಸ್ಥರೆಲ್ಲ ಸೇರಿ ಬೃಹತ್ ಹೋರಾಟ ಆರಂಭಿಸಿದ್ದಾರೆ.   64 ಹಳ್ಳಿ ಗಳ ಕಸ ವಿಲೇವಾರಿ ಘಟಕ holebenavalli ಯಲ್ಲಿ ಬೇಡ ಎಂದು ಸಹಮತ ವ್ಯಕ್ತ ಪಡಿಸಿದ್ದಾರೆ.

Protest against garbage disposal unit 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close