ಗಾಂಜಾ ಮಾರುತಿದ್ದ ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ-Court announces sentence for accused of selling marijuana

SUDDILIVE || SHIVAMOGGA

ಗಾಂಜಾ ಮಾರುತಿದ್ದ ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ-Court announces sentence for accused of selling marijuana

Accused, court

ಗಾಂಜ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳಿಗೆ ಗಣ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪುನುಡಿದೆ ಮೂರು ವರ್ಷ ಕಠಿಣ ಸಜೆ ಹಾಗೂ ತಲಾ 25,000 ದಂಡ ಕಟ್ಟುವಂತೆ ಆದೇಶಿಸಿ ತೀರ್ಪು ನೀಡಿದೆ.

ದಿನಾಂಕ: 04-08-2021 ರಂದು ಅಶೊಕ್ ಕುಮಾರ್ ಪಿಐ  ಸಾಗರ ಟೌನ್ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಸಾಗರದ ಬಿಹೆಚ್ ರಸ್ತೆಯ ಸದ್ಗುರು ಲೇ ಔಟ್ ಹತ್ತಿರ ಗಾಂಜಾ ಮಾರಾಟ  ಮಾಡುತ್ತಿದ್ದವರ   ಮೇಲೆ ದಾಳಿ ಮಾಡಿ ಅವರಿಂದ  1 ಕೆ.ಜಿ 60 ಗ್ರಾಂ ಒಣ ಗಾಂಜಾ ಪದಾರ್ಥ ಮತ್ತು  800/- ರೂ ನಗದು ಹಣ ಮತ್ತು  ಗಾಂಜಾ ಮಾರಾಟ ಮಾಡಲು ಬಳಸಿದ  ಮಾರುತಿ ಓಮಿನಿ ಕಾರ್ ಅನ್ನು ಅಮಾನತ್ತು ಪಡಿಸಿಕೊಂಡಿದ್ದು, ಆರೋಪಿತರ ವಿರುದ್ಧ ಸಾಗರ ಟೌನ್ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0148/2021 ಕಲಂ NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ಆಗಿನ ತನಿಖಾಧಿಕಾರಿಗಳಾದ  ಸಾಗರ್ ಕರ್ ಪಿಎಸ್ಐ ಸಾಗರ ಟೌನ್ ಪೊಲೀಸ್ ಠಾಣೆ ರವರು ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ

ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸುರೇಶ್ ಕುಮಾರ್ ಎ.ಎಂ ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದು ಘನ ಪ್ರಧಾನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿರ ವಿರುದ್ಧ  ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ಶ್ರೀ ಮಂಜುನಾಥ ನಾಯಕ  ರವರು ದಿನಾಂಕ: 08-10-2025 ರಂದು ಆರೋಪಿತರಾದ 1) ಇಮ್ರಾನ್ ಖಾನ್, 25 ವರ್ಷ, ಸಾಗರ ಟೌನ್ ಮತ್ತು 2) ಇಮ್ತಿಯಾಜ್, 28 ವರ್ಷ,  ಸಾಗರ ಟೌನ್ ರವರುಗಳಿಗೆ 3 ವರ್ಷ ಕಠಿಣ ಕಾರಾವಾಸ  ಶಿಕ್ಷೆ ಮತ್ತು 25,000/- ರೂ ದಂಡ ವಿಧಿಸಿ, ಆದೇಶಿಸಿರುತ್ತಾರೆ.

Court announces sentence for accused of selling marijuana

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close