SUDDILIVE || SHIVAMOGGA
ನಿರ್ಬಂಧದ ನಡುವೆಯೂ ಶಿವಮೊಗ್ಗದಲ್ಲಿ RSS ಯಶಸ್ವಿ ಪಥಸಂಚಲನ-RSS holds successful march in Shivamogga despite restrictions
RSS ಗೆ ಸರ್ಕಾರಿ ಭೂಮಿ ನಿಷೇಧಗೊಳಿಸುವ ನಿಟ್ಟಿನಲ್ಲಿ ಕಳೆದ 6 ದಿನಗಳಿಂದ ರಾಜ್ಯಾದ್ಯಂತ ಚರ್ಚೆ ನಡೆಯುತ್ತಿದ್ದು ನಂತರ ಸಂಘದ ಶಾಖೆ ನಡೆಸಲು ಸರ್ಕಾರಿ ಶಾಲೆ ಮತ್ತಿತರ ಜಾಗದಲ್ಲಿ ಅನುಮತಿ ಪಡೆಯುವಂತೆ ನಿರ್ಬಂಧ ಹೇರಿಸಿದ ಬೆನ್ನಲ್ಲೇ ಹೊಳೆಹೊನ್ನೂರು ಮತ್ತು ಹಸೂಡಿಯಲ್ಲಿ RSS ಇಂದು ಶತಮಾನೋತ್ಸವದ ಪಥಸಂಚಲನ ನಡೆಸಿದೆ.
ಹಸೂಡಿ ವೃತ್ತದಿಂದ ಗಣವೇಶದಾರಿಗಳು ದಂಡ ಹಿಡಿದು, ಎಸ್ಆರ್ ಕೆ ಮಾಡೆಲ್ ಶಾಲೆಯ ಮುಂಭಾಗದ ಖಾಸಗಿ ಮೈದಾನದಲ್ಲಿ ಸಭೆ ನಡೆಸಿದ್ದಾರೆ. ಸಮಾರು 40 ನಿಮಿಷ ನಡೆದ ಪಥಸಂಚಲನದಲ್ಲಿ ಪಟ್ಟಾಭಿರಾಮ್ ಮತ್ತು ಶಾಸಕ ಎಂ ಎಲ್ ಎ ಚೆನ್ನಬಸಪ್ಪ ಭಾಗಿಯಾಗಿದ್ದರು.
ಅದರಂತೆ ಹೊಳೆಹೊನ್ನೂರಿನಲ್ಲಿ ರಾಷ್ಟ್ರೋತ್ಥಾನ ಶಾಲೆ, ಎಕೆ ಕಾಲೋನಿ, ನೃಪತುಂಗ ಸರ್ಕಲ್, ಕರಿಯಮ್ಮನ ಬೀದಿ, ವೀರಭದ್ರ ದೇವಸ್ಥಾನ ರಸ್ತೆ, ಭಗೀರಥ ಸರ್ಕಲ್, ಆಂಜನೇಯ ಸ್ವಾಮಿ ದೇವಸ್ಥಾನ ಬ್ರಾಹ್ಮಣರ ಬೀದಿ ಹೊನ್ನೂರಮ್ಮ ದೇವಸ್ಥಾನ ಗಾಂಧಿ ಸರ್ಕಲ್ ಮೂಲಕ ಮತ್ತೆ ಭಗೀರಥ ಸರ್ಕಲ್ ನಿಂದ ರಾಷ್ಟ್ರೋತ್ಥಾನ ಶಾಲೆಯಲ್ಲಿ ಪತಸಂಚಲನ ಮುಕ್ತಾಯಗೊಂಡಿದೆ ಪತ ಸಂಚಲನ ಸರ್ಕಾರದ ನಿರ್ಬಂಧದ ನಡುವೆಯೂ ಯಶಸ್ವಿಯಾಗಿ ನಡೆದಿದೆ.
RSS holds successful march in Shivamogga despite restrictions