SUDDILIVE || HOLEHONNURU
ಚೋಟು ಮೇಲೆ ಫಹಾದ್ ಮತ್ತು ಆತನ ಸಹಚರರಿಂದ ಮಾರಕಾಸ್ತ್ರಗಳಿಂದ ದಾಳಿ-Chotu was attacked with wepons by Fahad and his associates
ಹಣಕಾಸಿನ ವಿಚಾರವಾಗಿ ಚೋಟು ಎಂಬ ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿದೆ. ದಾಳಿ ನಡೆಸಿದ ಇಬ್ಬರು ವ್ಯಕ್ತಿಗಳನ್ನ ಮತ್ತು ಕೃತ್ಯಕ್ಕೆ ಬಳಸಿದ ವಾಹನವನ್ನ ಪೊಲೀಸರು ವಶಕ್ಕೆಪಡೆದಿದ್ದಾರೆ.
ಚೋಟು ಎನ್ನುವ ವ್ಯಕ್ತಿ ಮೇಲೆ ಮಚ್ಚು ಲಾಂಗ್ ನಿಂದ ದಾಳಿ ನಡೆದಿದೆ. ಭದ್ರಾವತಿ ತಾಲೂಕಿನ ಮುಡಲ ವಿಠ್ಠಲಾಪುರ ಬಳಿ ಘಟನೆ ನಡೆದಿದೆ. ಚೋಟು ಹೊಟೇಲ್ ನಲ್ಲಿ ತಿಂಡಿ ತಿನ್ನುವ ಸಮಯದಲ್ಲಿ ಅಟ್ಯಾಕ್ ನಡೆದಿದೆ. ಚೋಟು ಮೇಲೆ 6 ಜನ ದಾಳಿ ನಡೆಸಿರುವುದಾಗಿ ತಿಳಿದುಬಂದಿದೆ.
ಚೋಟು ತನ್ನಮೇಲೆ ಫಹಾದ್, ಮುಬಾರಕ್, ಗೌತಮ್ ಯಾನೆ ಇರ್ಫಾನ್, ಮಸೂದ್ ಸುಹೇಲ್ ಸೇರಿ 6 ಜನರು ದಾಳಿ ನಡೆಸಿರುವುದಾಗಿ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ. ಆದರೆ ಯಾರು ಯಾರು ಈ ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂಬುದು ಪೊಲೀಸರ ವಿಚಾರಣೆಯಿಂದ ತಿಳಿದು ಬರಬೇಕಿದೆ. ಎಸ್ಪಿ ಮಿಥುನ್ ಕುಮಾರ್ ಘಟನೆ ಕುರಿತು ಪ್ರತಿಕ್ರಿಯಿಸಿದ್ದು, ಬೆಳಿಗ್ಗೆ ಮೂಡಲವಿಠಲಪುರದಲ್ಲಿ ಚೋಟು ಎಂಬಾತನ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಆರೋಪಿಗಳನ್ನ ಮತ್ತು ಕೃತ್ಯಕ್ಕೆ ಬಳಸಿದ ವಾಹನವನ್ನೂ ಸಹ ವಶಕ್ಕೆ ಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಾಹಿತಿಯ ಪ್ರಕಾರ ಈ ವಿಚಾರವಾಗಿ ನಿನ್ನೆ ಇಬ್ಬರ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ. ಈ ಹಿನ್ನಲೆ ಯಲ್ಲಿ ಚೋಟು ಮೇಲೆ ಇಂದು ಮಾರಕಾಸ್ತ್ರಗಳಿಂದ ದಾಳಿ ನಡೆದಿದೆ. ದಾಳಿಯಲ್ಲಿ ಚೋಟು ಗೆ ಗಾಯಗಳಾಗಿವೆ. ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಆತನನ್ನ ದಾಖಲಿಸಲಾಗಿದೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಕಾರ್ ನಲ್ಲಿ ಬಂದು ಫಹಾದ್ ಮತ್ತು ಆತನ ಸಹಚರರು ಅಟ್ಯಾಕ್ ಮಾಡಿದ್ದಾರೆ ಎನ್ನಲಾಗುತ್ತಿದೆ.
Chotu was attacked with wepons by Fahad and his associates