ad

ಸುಬ್ಬಯ್ಯ ಮೆಡಿಕಲ್ ವತಿಯಿಂದ ರೈನ್ ಬೋ ಮತ್ತು ಹೇರ್ ಕ್ಲೀನಿಕ್ ಆರಂಭ-Rainbow and Hair Clinic launched by Subbaiah Medical

 SUDDILIVE || SHIVAMOGGA

ಸುಬ್ಬಯ್ಯ ಮೆಡಿಕಲ್ ವತಿಯಿಂದ ರೈನ್ ಬೋ ಮತ್ತು ಹೇರ್ ಕ್ಲೀನಿಕ್ ಆರಂಭ-Rainbow and Hair Clinic launched by Subbaiah Medical 

Health, clinic

ಸುಬ್ಬಯ್ಯ ಆಸ್ಪತ್ರೆಯ ಭಾಗವಾಗಿ ಆ.೧೨ರಂದು ರೈನ್‌ಬೋ ಸ್ಕಿನ್ ಮತ್ತು ಹೇರ್ ಕ್ಲಿನಿಕ್ ಎಂಬ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಕ್ಲಿನಿಕ್‌ನ್ನು ಆರಂಭಿಸಲಾಗುವುದು ಎಂದು ಆಸ್ಪತ್ರೆಯ ಶಸ್ತçಚಿಕಿತ್ಸಾ ತಜ್ಞ ಡಾ|| ಅನುಭವ್‌ಜನ್ನು ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆ.೧೨ರಂದು ಬೆಳಿಗ್ಗೆ ೧೦ ಗಂಟೆಗೆ ಕುವೆಂಪು ರಸ್ತೆಯಲ್ಲಿರುವ ಕ್ಲಿಫ್ ಎಂಬಸಿ ಪಕ್ಕದಲ್ಲಿರುವ ಋಷ್ಯಶೃಂಗ ಆರ್ಕೇಡ್‌ನಲ್ಲಿ ಈ ಕ್ಲಿನಿಕ್ ಶುಭಾರಂಭಗೊಳ್ಳಲಿದೆ. ಸುಬ್ಬಯ್ಯ ಆಸ್ಪತ್ರೆಯ ಆಡಳಿತ ಮಂಡಳಿಯ ಡಾ|| ನಾಗೇಂದ್ರ ದಂಪತಿಗಳು ಇದನ್ನು ಉದ್ಘಾಟಿಸಲಿದ್ದಾರೆ ಎಂದರು.

ಈ ಕ್ಲಿನಿಕ್‌ನಲ್ಲಿ ಚರ್ಮ ಮತ್ತು ಕೂದಲಿನ ಚಿಕಿತ್ಸೆಗೆ ಸಂಬಂಧಪಟ್ಟಂತೆ ಅನುಭವಿ ತಜ್ಞವೈದ್ಯರು ಸಲಹೆ ಮತ್ತು ಚಿಕಿತ್ಸೆ ನೀಡಲಿದ್ದಾರೆ. ಅತ್ಯಾಧುನಿಕ ಪ್ರೊಸೀಜರ್ ರೂಮ್‌ಗಳು ಹೊಂದಿವೆ. ಜಾಗತಿಕ ಮಟ್ಟದ ಅಭಿವೃದ್ಧಿ ಹೊಂದಿದ ಚರ್ಮ ಮತ್ತು ಕೇಶ ಚಿಕಿತ್ಸಾ ಸಾಧನಗಳು ಇಲ್ಲಿ ಲಭ್ಯವಿರುತ್ತವೆ. ಕ್ಲಿನಿಕ್ ಆರಂಭದ ಹಿನ್ನಲೆಯಲ್ಲಿ ಅ.೧೨ರಿಂದ ನವೆಂಬರ್ ೧೨ರ ವರೆಗೆ ಎಲ್ಲಾ ಚಿಕಿತ್ಸಾ ದರಗಳ ಮೇಲೆ ಶೇ.೧೦ರಷ್ಟು ರಿಯಾಯಿತಿ ಕೂಡ ಇರುತ್ತದೆ ಎಂದರು.

ನಮ್ಮ ಕ್ಲಿನಿಕ್‌ನಲ್ಲಿ ಕೂದಲು ಕಸಿ, ಕೂದಲು ಉದುರುವುದನ್ನು ತಡೆಗಟ್ಟುವುದು, ಹೆಡ್ ಥ್ರೆಡ್ ಚಿಕಿತ್ಸೆ, ಚರ್ಮ ಸಂಬಂಧಿತ ಚಿಕಿತ್ಸೆಗಳು ಬೊಟಾಕ್ಸ್ ಚಿಕಿತ್ಸೆ, ಲೇಸರ್ ಹೇರ್ ಚಿಕಿತ್ಸೆ, ವ್ಯಾಂಪೈರ್ ಫೇಶಿಯಲ್, ಮೊಡವೆ ಕಲೆಗಳು, ಪಿಗ್ಮೆಂಟೇಷನ್ ಮತ್ತು ಬೆಟ್ಟಿಂಗ್ ಸೇರಿದಂತೆ ಕೂದಲಿಗೆ, ದೇಹಕ್ಕೆ, ಚರ್ಮಕ್ಕೆ ಸಂಬಂಧಿಸಿದಂತೆ ಚಿಕಿತ್ಸೆಗಳು ಆಧುನಿಕ ರೀತಿಯಲ್ಲಿ ದೊರೆಯುತ್ತದೆ. ಮಹಿಳೆಯರಿಗೆ ಸಂಬಂಧಿಸಿದಂತೆ ದೇಹದ ಭಾಗಗಳ ವಿವಿಧ ರೀತಿಯ ಚಿಕಿತ್ಸೆಗಳು ಇಲ್ಲಿ ಲಭ್ಯವಿದೆ ಎಂದರು.

ಹೆಚ್ಚಿನ ವಿವರಕ್ಕೆ ಮತ್ತು ಮಾಹಿತಿಗೆ ಮೊ.೮೯೫೧೯೫೮೪೧೮ನ್ನು ಸಂಪರ್ಕಿಸಬಹುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಸುಬ್ಬಯ್ಯ ಆಸ್ಪತ್ರೆಯ ಮುಖ್ಯಸ್ಥ ಡಾ|| ನಾಗೇಂದ್ರ, ವಿಶೇಷ ತಜ್ಞರುಗಳಾದ ಡಾ|| ತೃಪ್ತಿ, ಡಾ|| ಐಶ್ವರ್ಯ ಸೇರಿದಂತೆ ಹಲವರಿದ್ದರು.

Rainbow and Hair Clinic launched by Subbaiah Medical 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close