SUDDILIVE || SHIVAMOGGA
ಹಳೆಯ ವಿದ್ಯುತ್ ಕಂಬಗಳನ್ನು ಹಾಗೂ ಓವರ್ ರೆಡ್ ವಿದ್ಯುತ್ ಮಾರ್ಗಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಡಿಸಿಗೆ ಮನವಿ-Appeal to the District Collector demanding removal of old electric poles and overhead power lines
ನಗರದಾದ್ಯಂತ ಭೂಗತ ಕೇಬಲ್‌ಗಳನ್ನು ಅಳವಡಿಸಿದ್ದರೂ ವಿದ್ಯುತ್ ಕಂಬಗಳನ್ನು ತೆರವು ಮಾಡದೇ ಇರುವುದನ್ನು ಖಂಡಿಸಿ ತಕ್ಷಣವೇ ತೆರವು ಮಾಡುವಂತೆ ಒತ್ತಾಯಿಸಿ ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಿದರು.
ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಮೇಸ್ಕಾಂ ಅಧಿಕಾರಿಗಳ ಸಭೆ ಕರೆಯದಿರುವುದನ್ನು ಖಂಡಿಸಿ ತಕ್ಷಣ ಸಭೆ ಕರೆಯಲು ಈ ಪ್ರತಿಭಟನೆ ಮಾಡಲಾಯಿತು. ಮೆಸ್ಕಾಂ ಹಾಗೂ ಸ್ಮಾರ್ಟ್ಸಿಟಿ ವತಿಯಿಂದ ಸುಮಾರು ೩೦೦ ಕೋಟಿ ರೂ. ವೆಚ್ಚದಲ್ಲಿ ಶಿವಮೊಗ್ಗ ನಗರದಾದ್ಯಂತ ಭೂಗತ ಕೇಬಲ್‌ಗಳನ್ನು ಅಳವಡಿಸಿ ಹಳೆಯ ವಿದ್ಯುತ್ ಕಂಬಗಳನ್ನು ತೆಗೆದು ಹಾಕದೆ ಹಾಗೆಯೇ ಬಿಟ್ಟಿರುವುದರಿಂದ ರಸ್ತೆಗಳ ಎರಡು ಬದಿಗಳಲ್ಲಿ ವಿದ್ಯುತ್ ಕಂಬಗಳಿದ್ದು ವಾಹನ ಸಂಚಾರಕ್ಕೆ ಮತ್ತು ಪಾರ್ಕಿಂಗ್ ವ್ಯವಸ್ಥೆಗೆ ತೀವ್ರ ತೊಂದರೆಯಾಗಿದೆ ಎಂದು ಆರೋಪಿಸಿದರು.
ಕೂಡಲೇ ಈ ವಿಷಯದ ಬಗ್ಗೆ ಸಭೆಗೆ ದಿನಾಂಕ ನಿಗಧಿಪಡಿಸಬೇಕು, ಇಲಾಖೆಯು ಹಳೆಯ ವಿದ್ಯುತ್ ಕಂಬಗಳನ್ನು ತೆಗೆದು ಹಾಕಲು ಸಂಪೂರ್ಣ ವೇಳಾಪಟ್ಟಿಯನ್ನು ನೀಡುವಂತೆ ಒತ್ತಾಯಿಸಲಾಯಿತು. ಸಮಸ್ಯೆ ಬಗೆಹರಿಯುವವರೆಗೆ ನಾಗರೀಕ ವೇದಿಕೆಯಿಂದ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯ ಪ್ರಮುಖರಾದ ಕೆ.ವಿ. ವಸಂತ್‌ಕುಮಾರ್, ಸತೀಶ್‌ಕುಮಾರ್‌ಶೆಟ್ಟಿ, ಎಸ್.ಬಿ. ಅಶೋಕ್‌ಕುಮಾರ್, ಸೀತಾರಾಮ್, ಜನಮೇಜಿರಾವ್, ಡಾ. ಶ್ರೀನಿವಾಸ್, ಸ್ವಾಮಿ, ನಾಗರಾಜ್, ಚನ್ನವೀರಪ್ಪ ಗಾಮನಗಟ್ಟಿ, ಪುಷ್ಪಾಶೆಟ್ಟಿ, ವಿಜಯಾಶೆಟ್ಟಿ, ವಾತ್ಸಲ್ಯ ಶೆಟ್ಟಿ, ಪ್ರೊ. ಸತ್ಯನಾರಾಯಣ್ ಮತ್ತಿತರರಿದ್ದರು.
removal of old electric poles and overhead power lines