ad

ಶಿವಮೊಗ್ಗ ವಿಮಾನ ನಿಲ್ದಾಣ ತಮಿಳಿಗರಿಗೆ ಮತ್ತು ಆಂಧ್ರದವರಿಗೆ ಅನುಕೂಲವಾಗಲಿದೆ- ಬೇಳೂರು-Shivamogga airport will benefit Tamils ​​and Andhras - Belur

SUDDILIVE || SHIVAMOGGA

ಶಿವಮೊಗ್ಗ ವಿಮಾನ ನಿಲ್ದಾಣ ತಮಿಳಿಗರಿಗೆ ಮತ್ತು ಆಂಧ್ರದವರಿಗೆ ಅನುಕೂಲವಾಗಲಿದೆ- ಬೇಳೂರು-Shivamogga airport will benefit Tamils ​​and Andhras - Belur    

Shivamogga, airport


ಶಿವಮೊಗ್ಗ ವಿಮಾನ ನಿಲ್ದಾಣ ತಮಿಳರಿಗೆ, ತೆಲುಗಿನವರಿಗೆ ಗೋವಾ ಹೋಗೋರಿಗೆ ಅನುಕೂಲವಾಗಿದೆ ಅಷ್ಟೇ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಆರೋಪಿಸಿದ್ದಾರೆ. 

ಮಾಧ್ಯಮದೊಂದಿಗೆ ಮಾತನಾಡಿದ ಅವರು,  ಆದರೆ ಬೆಂಗಳೂರಿಗೆ ತೆರಳುವವರಿಗೆ ಕೇವಲ ಒಂದೇ ಒಂದು ವಿಮಾನ ಸಂಚರಿಸುತ್ತಿದೆ. ಆದರೆ ಬೇರೆ ಕಡೆಗೆ ಎರಡೆರೆಡು ವಿಮಾನಗಳು ಸಂಚರಿಸುತ್ತಿವೆ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರೋ ವಿಮಾನವೂ ಸರಿಯಾಗಿ ಬರುತ್ತಿಲ್ಲ ಎಂದು ದೂರಿದರು. 

ಇದರಿಂದ ಪ್ರಯಾಣಿಕರು ಬುಕ್ ಮಾಡಲು ಕೂಡ ಹಿಂಜರೆಯುತ್ತಿದ್ದಾರೆ. ಇದರಿಂದ ಬಹಳ ಬೇಸರವಾಗುತ್ತಿದೆ. ಇವತ್ತಿನ ಬೆಂಗಳೂರು- ಶಿವಮೊಗ್ಗ ವಿಮಾನದಲ್ಲಿ ಅರ್ಧದಷ್ಟು ಸಹ ಸೀಟುಗಳು ಭರ್ತಿಯಾಗಿಲ್ಲ. ಜನರಿಗೆ ವಿಮಾನ ಹೋಗುತ್ತೋ ಇಲ್ಲವೋ ಅಂತಾ ಗೊತ್ತಾಗ್ತಾ ಇಲ್ಲ ಎಂದರು. 

ನಿರಂತರವಾಗಿ ಬೆಂಗಳೂರಿಗೆ ಸಂಚರಿಸಲು ಎರಡು ವಿಮಾನಗಳು ನಮಗೆ ಬೇಕಿದೆ. ಈ ಬಗ್ಗೆ ಎಂಪಿ, ಮತ್ತು ನಮ್ಮ ರಾಜ್ಯ ಸರ್ಕಾರ ಕೂತು ಮಾತನಾಡಬೇಕಿದೆ. ನಾನು ಈ ಬಗ್ಗೆ ಸಚಿವರಾದ ಎಂ.ಬಿ. ಪಾಟೀಲ್ ಅವರ ಬಳಿಯೂ ಮಾತನಾಡುತ್ತೇನೆ ಎಂದರು. 

ಸಂಸದ ರಾಘವೇಂದ್ರ ಏರ್ಪೋರ್ಟ್ ಬಗ್ಗೆ ನಿಗಾ ವಹಿಸಬೇಕು. ಕೇಂದ್ರ ಸರ್ಕಾರಕ್ಕೂ ಈ ವಿಮಾನಯಾನ ಬರೋದ್ರಿಂದ ಅವರು ಸಹ ಮಾತನಾಡಬೇಕಿದೆ. ಬೆಂಗಳೂರಿಗೆ ನಮ್ಮ ರಾಜ್ಯದ ಜನರಿಗೆ ಓಡಾಡಲು ವಿಮಾನ ಇರಬೇಕಿತ್ತು. ಆದರೆ ಚೆನ್ನೈ, ಹೈದರಾಬಾದ್ ಗೆ ಎರಡೆರಡು ವಿಮಾನಗಳು ಸಂಚರಿಸುತ್ತಿವೆ. ಶಿವಮೊಗ್ಗ ವಿಮಾನ ನಿಲ್ದಾಣ ಆಂಧ್ರದವರಿಗೆ, ತಮಿಳುನಾಡಿನವರಿಗೆ ಅನುಕೂಲವಾಗಿದೆ. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಸರಿಪಡಿಸಬೇಕೆಂಬ ಎಚ್ಚರಿಕೆ ನೀಡುತ್ತಿದ್ದೆನೆ ಎಂದರು. 

Shivamogga airport will benefit Tamils ​​and Andhras - Belur

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close