ad

ಬಿಜೆಪಿಯಲ್ಲೇ ಮುಂದಿನ ಮೂರು ತಿಂಗಳಲ್ಲಿ ಕ್ರಾಂತಿ ನಡೆಯಲಿದೆ- There will be a revolution within the BJP in the next three months

SUDDILIVE || SHIVAMOGGA

ಬಿಜೆಪಿಯಲ್ಲೇ ಮುಂದಿನ ಮೂರು ತಿಂಗಳಲ್ಲಿ ಕ್ರಾಂತಿ ನಡೆಯಲಿದೆ-There will be a revolution within the BJP in the next three months.

Revolution, bjp

ನವೆಂಬರ್ ಕ್ರಾಂತಿ ಎಲ್ಲೂ ಕಾಣ್ತಾಯಿಲ್ಲ.  ಶಾಂತಿಯುತ  ನಡೆಯಲಿದೆ. ಸಿಎಂ ಪಾರ್ಟಿಕೊಡೋದು ತಪ್ಪಲ್ಲ. ಬೇರೆ ರೀತಿ ಬಿಂಬಿಸೋದು ಬೇಡ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು. 

ಮಾಧ್ಯಮಗಳ ಜೊತೆ ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನಾನು ಪ್ರಬಲವಾದ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಸಚಿವ ಸ್ಥಾನ ಸಿಗಲಿಲ್ಲ ಎಂದರೆ ಭಿನ್ನಮತ ಮಾಡೊಲ್ಲ. ಹೈಕಮಾಂಡ್ ಮತ್ತು ಸಿಎಂ ಹೇಳಿದಂತೆ ಕೇಳುವೆ. ಕ್ರಾಂತಿ ನಮ್ಮ ಪಕ್ಷದಲ್ಲಿ ಇಲ್ಲ ಬಿಜೆಪಿಯಲ್ಲಿ ನಡೆಯಲಿದೆ. ಇನ್ನೊಂದು ಮೂರು ತಿಂಗಳಲ್ಲಿ ಕ್ರಾಂತಿ ನಡೆಯಲಿದೆ ಎಂದರು. 


ನಾನು ಸನ್ಯಾಸಿ ಅಲ್ಲ ಹಿಂದುಳಿದ ವರ್ಗಕ್ಕೆ ಸೇರಿದವನು ನಾನು ಸ್ಥಾನ ಕೊಡುವುದು ಬಿಡುವುದು ನಾಯಕರಿಗೆ ಬಿಟ್ಟ ವಿಷಯ. ನಾನು ಸಹ ಮೂರು ಬಾರಿ ಶಾಸಕರಾಗಿದ್ದಾರೆ. ಕೊಡೋದು ಬಿಡೋದು ಸಿಎಂ, ಡಿಸಿಎಂ ನಾಯಕರಿಗೆ ಬಿಟ್ಟಿದ್ದು  ಎಂದರು. 

ಅತ್ಯಾಚಾರಿಗಳು ಆರ್ ಎಸ್ ಎಸ್ ಗೆ ಬಂದಿದ್ದಾರೆ

ಆರ್ ಎಸ್ ಎಸ್ ಗೆ ಸರ್ಕಾರಿ ಜಾಗ ಬಳಕೆಗೆ ನಿಷೇಧ ವಿಷಯಕ್ಕೆ ಸಂಭಂಧಿಸಿದಂತೆ ಮಾತನಾಡಿದ ಬೇಳೂರು ಆರ್ ಎಸ್ ಎಸ್ ಬಗ್ಗೆ ನಮಗೆ ಆತಂಕವೂ ಇಲ್ಲ. ಹಿಂದೆ ಆರ್ ಎಸ್ ಎಸ್ ಭಾವನೆಗಳಿಗೆ ತಕ್ಕಂತೆ ಕೆಲಸ ಮಾಡುತ್ತಿದ್ದರು. ಈಗ ಅಲ್ಲಿ ಅತ್ಯಾಚಾರಿಗಳೆಲ್ಲಾ ಸೇರಿಕೊಂಡ ಕಾರಣ ನಿರ್ಬಂಧ ಬೇಕಿದೆ. ಪಟ್ಟಾಭಿಯವರು ಇದ್ದಾಗ ಆರ್ ಎಸ್ ಎಸ್ ಚೆನ್ನಾಗಿತ್ತು. ಈಗ ಸಮಸ್ಯೆಯಿದೆ. ಬಿಜೆಪಿ ಸಂಘನೆಯಾಗಿದೆ. ಗಣಪತಿ ಹಬ್ಬಕ್ಕೆ, ಶಾಲೆ ಕಾರ್ಯಕ್ರಮಕ್ಕೆ ಪರ್ಮಿಷನ್ ಬೇಕಾಗಿದೆ ಸಂಘಟನೆಗೆ ಅನುಮತಿ ಬೇಕಿದೆ. ಶಾಲೆಯಾಕೆ ಬೇಕು ನಿಮಗೆ. ಸೇವಾದಳದವರು ಮಾಡಬಹುದು ಆರ್ ಎಸ್ ಎಸ್ ಗೆ ಅವಕಾಶವಿಲ್ಲ.  ಅನುಮತಿ ಪಡೆದು ಶಾಖೆ ನಡೆಸಲಿ. ತಮಿಳುನಾಡಿನಲ್ಲಿ ಮತ್ತು ಕೇರಳದಲ್ಲಿ ನಿರ್ಬಂಧಿಸಿದೆ. 

ಆರ್ ಎಸ್ ಎಸ್ ಗೆ ಹಿಂದೆ ಕಟ್ಟಡಕಟ್ಟಲು ನಾನು ಹಣಕೊಟ್ಟಿರುವೆ.  ಶಾಲೆ ಗ್ರೌಂಡ್ ಗಳನ್ನ ಬಳಕೆಗೆ ನಿರ್ಬಂಧ ಬೇಕಿದೆ. ನಾಳೆ ಬೇರೆಯೊಂದು ಸಂಘಗಳು ಜಾಗ ಕೊಡಿ ಎಂದರೆ ಹೇಗೆ ಹಾಗಾಗಿ ನಿರ್ಬಂಧ ಬೇಕಿದೆ. ಲಾಠಿ ಬಳಕೆಯಿದೆ ಲಾಠಿ ಹಿಡಿದವರ ಬಾಯಿಯಲ್ಲಿ ಕೆಲವರು ಕತ್ತಿಹಿಡಿಯಿರಿ ಎನ್ನುತ್ತಾರೆ. ಅವರ ಹೋರಾಟ ನಡೆಯುತ್ತಿದೆ ಎಂದರು. 


ಮುಂದಿನ ಪೀಳಿಗೆಯ ಯೋಜನೆ


ಶರಾವತಿ ಪಂಪ್ಡ್ ಸ್ಟೋರೇಜ್ ವಿಚಾರದಲ್ಲಿ ನಡೆಯುತ್ತಿರುವ ಪ್ರತಿಭಟನೆ ಸಂವಿಧಾನ ಹಕ್ಕು, ಮುಂದಿನ ದಿನಗಳಲ್ಲಿ ಜನರಿಗೆ ವಿದ್ಯುತ್ ಅಭಾವವಾಗಲಿದೆ. ಹಿಂದೆ ಲಿಂಗನಮಕ್ಕಿ ಡ್ಯಾಂ ಕಟ್ಟಲಾಯಿತು. ಈಗ ಸಾಧ್ಯನಾ? 2000 ಮೆಗಾವ್ಯಾಟ್ ಉತ್ಪತ್ತಿ ಮಾಡಲಾಗುತ್ತಿದೆ. ಕೆಲವರು ಹೋರಾಟ ಮಾಡುವರು ಉದ್ಧಟತನದಿಂದ ವರ್ತಿಸುತ್ತಾರೆ. ಕೇಂದ್ರ ಇದಕ್ಕೆ ಅನುಮತಿ ನೀಡಿದೆ. ಅವರು ಕೊಟ್ಟ ಮೇಲೆ ನಾವು ಯೋಜನೆ ಮಾಡುತ್ತಿದ್ದೇವೆ. ಬೇಕಾದರೆ ಎಂಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಲಿ. ಬಿಜೆಪಿಯವರೆ ಇಲ್ಲಿ ಆಕ್ಷೇಪಿಸುತ್ತಿದ್ದಾರೆ. ಹಾಗಾಗಿ ಹೋರಾಟ ರಾಜಕೀಯ ದಿಕ್ಕು ತಪ್ಪುವುದು ಬೇಡ ಎಂದರು. 


ಯಟಿಯೂರಪ್ಪ ಸಿಎಂ ಆಗಿದ್ದಾಗ 3700 ಕೋಟಿ ರೂ ಹಣಕೊಟ್ಟು ಖರೀದಿಸಲಾಗಿದೆ. ಅಷ್ಟೊಂದು ಹಣ ಕರ್ಚಾಗುವಾಗ ನಾವೇ ಉತ್ಪಾದಿಸಿದರೆ ಸರಿ ಎಂಬುದು ನಮ್ಮ‌ವಾದ. ಒಂದು ವರ್ಷದಲ್ಲಿ ಹಣ ವೇಸ್ಟಾಗಿಲ್ವಾ?  ಶರಾವತಿ ಪಂಪ್ಡ್ ಸ್ಟೋರೇಜ್ ಗೆ 8000 ಕೋಟಿ ರೂ. ಹಣ ವ್ಯಯಮಾಡಿದರೆ ಮುಂದಿನ‌ಪೀಳಿಗೆಗೆ ಅನುಕೂಲವಾಗಲಿದೆ. ನಮ್ಮ ಪರವೂ ಬಲ ತೋರಿಸಲು ನಮಗೆ ತಾಕತ್ತಿದೆ. ಕೇಂದ್ರ ಬಂದ್ ಮಾಡಲು ಹೇಳಿದರೆ ಬಂದ್ ಮಾಡುತ್ತೇವೆ. 


ಪರಿಸರ ವಾದಿಗಳಿಂದ ಯಾವುದೆ ಯೋಜನೆ ಬಂದ್ ಆಗಿದ್ದು ಇದೆಯಾ?

ಪರಿಸರವಾದಿಗಳಿಂದ ಯಾವ ಯೋಜನೆ ಬಂದ್ ಆಗಿದೆ ಹೇಳಿ ಎಂದು ಸವಾಲು ಹಾಕಿದ ಬೇಳೂರು ಒಂದು ಯೋಜನೆ ಅವರ ಪ್ರತಿಭಟನೆಯಿಂದ ಬಂದ್ ಆಗಿದ್ದು ಇದೆಯಾ? ಶಿವಮೊಗ್ಗದಿಂದ ಸಾಗರದವರೆಗೆ ಹೈವೆಯಾಗಲಿದೆ ಅಲ್ಲಿ ಎಷ್ಟು ಮರ ಹೋಗಲಿದೆ ಎಂಬುದು ಅವರಿಗೆ ಗೊತ್ತಿದೆಯಾ? ಶರಾವತಿ ಪಂಪ್ಡ್ ಸ್ಟೋರೇಜ್ ಸರ್ಕಾರದ ಯೋಜನೆಯಾಗಿದೆ. ಹಾಗಾಗಿ ಯೋಜನೆಯ ಪರವಾಗಿ ಇದ್ದೇನೆ ಎಂದರು. 

ಸಿಎಂ ಡಿಸಿಎಂ ಡಿನ್ನರ್ ಯೋಜನೆ ಸಹಜವಾಗಿದೆ. ರಾಜ್ಯಸರ್ಕಾರದ ಯೋಜನೆ ಏನಾಗಲಿದೆ. ನವೆಂಬರ್ ಕ್ರಾಂತಿಯೇನಿಲ್ಲ. ರಾಜ್ಯ ಮತ್ತುರಾಷ್ಟ್ರ ನಾಯಕರು ತೀರ್ಮಾನವು ರಾಜ್ಯದಲ್ಲಿ ಗೊಂದಲ ಇಲ್ಲದಂತೆ ನಡೆದುಕೊಂಡು ಹೋಗಲಿವೆ ಎಂದರು. 

There will be a revolution within the BJP in the next three months   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close