ad

ಚಿನ್ನಯ್ಯನನ್ನ ನೋಡಿಕೊಳ್ಳಲು ನಿಯೋಜನೆಗೊಂಡಿದ್ದ ಮುಖ್ಯ ವೀಕ್ಷಕನಿಂದಲೇ ಜೈಲಿಗೆ ನುಸಳಿ ಬಂದ ಮೊಬೈಲ್?The mobile phone passed into the prison by the chief observer assigned to look after Chinnaiah?

 SUDDILIVE || SHIVAMOGGA 

ಚಿನ್ನಯ್ಯನನ್ನ ನೋಡಿಕೊಳ್ಳಲು ನಿಯೋಜನೆಗೊಂಡಿದ್ದ ಮುಖ್ಯ ವೀಕ್ಷಕನಿಂದಲೇ ಜೈಲಿಗೆ ನುಸಳಿ ಬಂದ ಮೊಬೈಲ್?The mobile phone passed into the prison by the chief observer assigned to look after Chinnaiah?

Mobile, jail


ಶಿವಮೊಗ್ಗದ ಜೈಲಿನಲ್ಲಿರುವ ಧರ್ಮಸ್ಥಳ ಪ್ರಕರಣದ ಮುಖ್ಯ ಆರೋಪಿ ಮತ್ತು ವಿಚಾರಣಾ ಬಂಧಿಯಾಗಿರುವ ಚಿನ್ನಯ್ಯ ಸಿಎನ್ ತಂದೆ ನಂಜನ್ ಇವರ ಬಿಗಿ ಭದ್ರತೆಗೆ ನೇಮಕಗೊಂಡಿದ್ದ ಮುಖ್ಯ ವೀಕ್ಷಕರಿಂದಲೇ ಶಿಕ್ಷಾರ್ಹ ಬಂದಿ ಗಳಿಗೆ ಬ್ಯಾಟರಿ ಇಲ್ಲದ ಮೊಬೈಲನ್ನು ಪಾಸ್ ಮಾಡಿರುವ ಘಟನೆ ನಡೆದಿದೆ.

ಚಿನ್ನಯ್ಯ ಅವರನ್ನು ಶಿವಮೊಗ್ಗದ ಜೈಲಿನಲ್ಲಿ ಅಕ್ಟೋಬರ್ 26 ರಿಂದ ನವಂಬರ್ 1ನೇ ತಾರೀಖಿನವರೆಗೆ ನೋಡಿಕೊಳ್ಳಲು ಹಗಲು ಪಹರಿಗೆ ನೇಮಕಗೊಂಡಿದ್ದ ಮುಖ್ಯ ವೀಕ್ಷಕ ಶಿವಮೂರ್ತಿ ಬಸವರಾಜ್ ಕಂಕನವಾಡಿ ಅವರನ್ನು ಕಾರಾಗೃಹದ ಮುಖ್ಯದ್ವಾರದಲ್ಲಿ ಇರುವ ಕೇಜಿನಲ್ಲಿ ಕರ್ತವ್ಯಕ್ಕೆ ನೇಮಿಸಲಾಗಿತ್ತು.

ಇವರುಗಳು ಜೈಲಿನಲ್ಲಿರುವ ಭದ್ರಾ ವಿಭಾಗದ ಶಿಕ್ಷಾರ್ಹ ಬಂದಿ ಫಯಾಜ್ ಎಂಬಾತನಿಗೆ ಅನುಮಾನವಾಗಿ ಪೇಪರ್ ನಲ್ಲಿ ಸುತ್ತಿ ಮೊಬೈಲ್ ರೀತಿಯ ವಸ್ತುವನ್ನು ನೀಡಿರುವುದು ಸಿಸಿ ಕ್ಯಾಮೆರಾದಲ್ಲಿ ಸರಿಯಾಗಿತ್ತು. ಸಿಸಿಟಿವಿ ಫೂಟೇಜ್ ನ್ನ ಪರಿಶೀಲಿಸಿದಾಗ ಶಿವಮೂರ್ತಿ ಬಸವರಾಜ್ ಕಂಕಣವಾಡಿ ಕರ್ತವ್ಯ ಸ್ಥಳದಿಂದ ಕಾರ್ಯಗ್ರಹದ 'ಬಿ'ಗೇಟಿಗೆ ಬಂದು ಭದ್ರ ವಿಭಾಗದ ಶಿಕ್ಷಾರ್ಹ ಬಂದಿ ಪಯಾಜಿಗೆ ಮೊಬೈಲ್ ರೀತಿಯ ವಸ್ತುವನ್ನು ಪಾಸ್ ಮಾಡಿರುವುದು ತಿಳಿದು ಬಂದಿದೆ.

ಫಯಾಜ್ ನನ್ನ ವಿಚಾರಿಸಿದಾಗ ಮೊಬೈಲ್ ಪಡೆದಿರುವುದನ್ನು ಖಚಿತಪಡಿಸಿದ್ದು ಈ ಮೊಬೈಲ್ ಅನ್ನು ಭದ್ರ ವಿಭಾಗದ ಶಿಕ್ಷಣ ಬಂದಿ ಅನಿಲ್ ಕುಮಾರ್ ಕೆ ಇವರಿಗೆ  ನೀಡಿರುವುದಾಗಿ ತಿಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಕಾರ್ಯಗ್ರಹದ ಅಧೀಕ್ಷಕ ರಂಗನಾಥ್ ರವರು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಜೈಲಿನಲ್ಲಿ ಮೊಬೈಲ್ ನಿಷೇಧಿತ ವಸ್ತುವಾಗಿದ್ದು ಜೈಲಿನ ಒಳಗೆ ಮೊಬೈಲ್ ನುಸಳಿ ಬಂದಿದ್ದರ ಬಗ್ಗೆ ಕೂಲಕುಂಶ ತನಿಖೆ ನಡೆಸುವಂತೆ ಮತ್ತು ಮುಖ್ಯವೀಕ್ಷಕ ಶಿವಮೂರ್ತಿ ಬಸವರಾಜ್ ಕಂಕಣವಾಡಿ ಶಿಕ್ಷಾರ್ಹಬಂದಿಗಳಾದ ಫಯಾಜ್  ಮತ್ತು ಅನಿಲ್ ಕುಮಾರ್ ಇವರ ವಿರುದ್ಧ ಅಧೀಕ್ಷಕ ರಂಗನಾಥ್ ಕಾನೂನು ಕ್ರಮ ಜರುಗಿಸುವಂತೆ ದೂರುನೀಡಿದ್ದಾರೆ. 

ಈ ವರ್ಷ ಜೈಲಿನಲ್ಲಿ ನಡೆದ ಪ್ರಮುಖ ಘಟನೆಗಳು

ಈ ವರ್ಷ ಜೈಲಿನಲ್ಲಿ  ಖೈದಿಗಳು ಆತ್ಮಹತ್ಯೆ ನಡೆದಿದೆ. ಮತ್ತೋರ್ವ ಆತ್ಮಹತ್ಯೆಗೆ ಯತ್ನ ನಡೆಸಿದ್ದಾನೆ.  ಈ ತಿಂಗಳಲ್ಲೇ ನಾಲ್ಕು ಎಫ್ಐಆರ್ ದಾಖಲಾದಂತಾಗಿದೆ. ಒಂದು ನ್ಯಾಯಾಲಯಕ್ಕೆ ಹೋಗಿ ಬಂದ ಆರೋಪಿ ಬಳಿ ಮೊಬೈಲ್ ಪತ್ತೆಯಾದರೆ, ಇನ್ನೊಂದು ಬಿಸ್ಕಟ್ ಪ್ಯಾಕ್ ನಲ್ಲಿ ಗಾಂಜಾ ಇಟ್ಟು ಜೈಲು ಖೈದಿಗಳಿಗೆ ಸಾಗಿಸಲು ಯತ್ನಿಸಿದ ಪ್ರಕರಣ ದಾಖಲಾಗಿದೆ. ಅ.19 ರಂದು ವಿಚಾರಣಾ ಬಂದಿ ಬಳಿ ಬ್ಲೇಡ್ ಪತ್ತೆಯಾಗಿತ್ತು.  ಈಗ ಮುಖ್ಯ ವೀಕ್ಷಕನಿಂದಲೇ ಜೈಲಿನ ಶಿಕ್ಷಾರ್ಹ ಬಂದಿಗೆ ಮೊಬೈಲ್ ಪಾಸ್ ಮಾಡಿದ ಘಟನೆ ದಾಖಲಾಗಿದೆ. ಆದರೆ ಪೊಲೀಸ್ ದಾಳಿ ನಡೆದಾಗ ಇಂತಹ ಯಾವುದೇ ನಿಷೇಧ ವಸ್ತುಗಳು ಪತ್ತೆಯಾಗದೆ ಇರುವುದು ಅಚ್ಚರಿ ಎನಿಸಿದೆ. 

The mobile phone passed into the prison by the chief observer assigned to look after Chinnaiah?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close