SUDDILIVE || SHIVAMOGGA
ವಿಪಕ್ಷಗಳ ಅಪಪ್ರಚಾರದ ನಡುವೆಯೂ ಸಮೀಕ್ಷೆ ಯಶಸ್ವಿ-ಮಾಲ್ತೇಶ್-The survey was successful despite the opposition's propaganda
ಕರ್ನಾಟಕ ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ, ಮತ್ತು ಆರ್ಥಿಕ ಸಮೀಕ್ಷೆಯು ಸುಗಮ ಹಾದಿಯಲ್ಲಿ ಸಾಗಿದ್ದು ರಾಜ್ಯದ ಜನತೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸದಸ್ಯ ಮಾಲ್ತೇಶ್ ತಿಳಿಸಿದ್ದಾರೆ.
ಕೆಲ ರಾಜಕೀಯ ದುರುದ್ದೇಶದಿಂದ ವಿರೋಧ ಪಕ್ಷಗಳು ಅಪಪ್ರಚಾರ, ಅಸಹಕಾರಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಎಷ್ಟೇ ಪ್ರಯತ್ನಪಟ್ಟರೂ ಎಲ್ಲಾ ವಿಚಾರ ವರ್ಗದಲ್ಲೂ ವಿಫಲತೆ ಹೊಂದುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದ್ದಾರೆ.
ಪ್ರಸ್ತುತ ಸಮಾಜದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯು ಬೇಕಾಗಿರುವುದು ಮಧ್ಯಮ ವರ್ಗದವರು, ಬಡವರು, ಶೋಷಿತರು, ಮತ್ತು ಅಸಮಾನತೆಗೆ ಒಳಗಾದವರು ಇವರಿಗೆ ಯೋಜನೆ ರೂಪಿಸಲು ಸಮೀಕ್ಷೆ ಮಾನದಂಡವಾಗಿದೆ. ಆದ್ದರಿಂದ ಅನುಕೂಲಸ್ಥರ ಮಾಹಿತಿ ಅವಶ್ಯಕತೆ ಇರುವುದಿಲ್ಲ.
ಯಾರು ಸಂಕಷ್ಟದಿಂದ ಬದುಕುತ್ತಿದ್ದಾರೆ. ಅಂತವರು ಪ್ರೀತಿಯಿಂದಲೇ ಮಾಹಿತಿಯನ್ನು ನೀಡುತ್ತಿದ್ದಾರೆ. ಇಡೀ ಭಾರತ ದೇಶದ ಯಾವ ಸಮೀಕ್ಷೆಗಳು ಶೇ. ನೂರಕ್ಕೆ ನೂರರಷ್ಟು ನಡೆಯಲು ಸಾಧ್ಯವೇ ಇಲ್ಲ. ಈ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ನಡೆಸುತ್ತಿರುವ ಸಮೀಕ್ಷೆಯ ಕಾರ್ಯಕ್ರಮದಲ್ಲಿ ಶೇ.85% ರಷ್ಟು ಜನ ಭಾಗವಹಿಸಿ ತಮ್ಮ ಮಾಹಿತಿಗಳನ್ನು ನೀಡುತ್ತಿರುವುದರಿಂದ ಈ ಕಾರ್ಯಕ್ರಮ ಯಶಸ್ವಿ ಹಾದಿಯಲ್ಲಿ ಸಾಗಿದೆ ಎನ್ನುವುದರಲ್ಲಿ ಅನುಮಾನವೇ ಬೇಡ ಎಂದಿದ್ದಾರೆ.
ಮುಂದೆ ನಡೆಯುವಂತಹ ಕೇಂದ್ರ ಸರಕಾರದ ಸಮೀಕ್ಷೆಯಲ್ಲಿ ಇವರುಗಳ ರೀತಿಯಲ್ಲಿ ಸಣ್ಣತನವನ್ನು ತೋರದೆ ದೇಶದ ಹಿತದೃಷ್ಟಿಯಿಂದ ಮತ್ತು ಯೋಜನೆಗಳನ್ನು ರೂಪಿಸುವ ಮಾಹಿತಿಯ ಸಂಗ್ರಹಿಸುವ ಕಾರ್ಯಕ್ರಮವಾಗಿರುವ ಕಾರಣದಿಂದಲೂ ಎಲ್ಲರೂ ಅದರಲ್ಲಿ ಭಾಗವಹಿಸಿ ನಮ್ಮ ವಿಶಾಲತೆಯನ್ನು ತೋರಿಸೋಣ ಎಂದು ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ.
The survey was successful despite the opposition's propaganda