SUDDILIVE || SHIVAMOGGA
ಮಂಗಳವಾರ ಸಫಾರಿ ಬಂದ್ ಇರೊಲ್ಲ-There is no safari bandh on Tuesday
ದೀಪಾವಳಿ ಹಬ್ಬದ ದಿನವಾದ ಮಂಗಳವಾರದಂದು ಹುಲಿ-ಸಿಂಹಧಾಮ, ತ್ಯಾವರೆಕೊಪ್ಪದ ವೀಕ್ಷಣೆಗೆ ಅವಕಾಶ ನೀಡಲಾಗಿದೆ.
ಹುಲಿ-ಸಿಂಹಧಾಮ, ತ್ಯಾವರೆಕೊಪ್ಪದಲ್ಲಿ ಸಾಮಾನ್ಯವಾಗಿ ಮಂಗಳವಾರದಂದು ವಾರದ ರಜೆಯಾಗಿರುತ್ತದೆ. ಈ ದಿನದಂದು ಪ್ರವಾಸಿಗರ ವೀಕ್ಷಣೆಗೆ ಅವಕಾಶವಿರುವುದಿಲ್ಲ.
ಆದರೆ ಪ್ರಸ್ತುತ ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಸಾರ್ವಜನಿಕರು ಮೃಗಾಲಯ ವೀಕ್ಷಣೆಗೆ ಹಾಗೂ ಶಾಲಾ/ಕಾಲೇಜು ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಕಾರಣ ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಪ್ರಕೃತಿ ಶಿಕ್ಷಣ ನೀಡುವ ಸಲುವಾಗಿ ಹುಲಿ-ಸಿಂಹಧಾಮದಲ್ಲಿನ ಜೂ ಹಾಗೂ ಸಫಾರಿ ವೀಕ್ಷಣೆಗೆ ಅವಕಾಶ ನೀಡಲಾಗಿದೆ.
ದಿನಾಂಕ:21.10.2025ರ ಮಂಗಳವಾರವೂ ಸಹತೆರೆದಿರುತ್ತದೆ ಸಿಂಹ ಮತ್ತು ಹುಲಿ ಸಿಂಹಧಾಮ ತೆರೆದಿಡಲಾಗಿದೆ. ಇದರ ಸದುಪಯೋಗವನ್ನು ಪ್ರವಾಸಿಗರು ಪಡೆದುಕೊಳ್ಳಲು ಕೋರಲಾಗಿದೆ.
There is no safari bandh on Tuesday