SUDDILIVE || SHIVAMOGGA
ಮೀಟರ್ ರೀಡಿಂಗ್ ಗೆ ತೆರಳಿದ್ದ ಮೆಸ್ಕಾಂ ಸಿಬ್ಬಂದಿಗೆ ಹಲ್ಲೆ, ಜೀವಬೆದರಿಕೆ, ಕರ್ತವ್ಯಕ್ಕೆ ಅಡ್ಡಿ-Mescom staff who went for meter reading were attacked, threatened with death, and obstructed in their duties.
ಮನೆ ವಿದ್ಯುತ್ ಮೀಟರ್ ರೀಡಿಂಗ್‌ಗೆ ತೆರಳಿದ್ದ ಮೆಸ್ಕಾಂ ಸಿಬ್ಬಂದಿ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನೆಡೆಸಿದ್ದಾರೆ. ‘ದೀಪಾವಳಿಗು ಮೊದಲು ನಿನಗೆ ದೀಪ ಹಿಡಿಸುತ್ತೇನೆʼ ಎಂದು ಆತ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.
ಮೆಸ್ಕಾಂನ ಮೀಟರ್ ರೀಡಿಂಗ್ ಕೆಲಸ ಮಾಡುತ್ತಿರುವ ಅಶ್ವಥ್.ಹೆಚ್.ಟಿ ಮೇಲೆ ಹಲ್ಲೆಯಾಗಿದೆ. ಅಶ್ವಥ್ ವೆಂಕಟೇಶನಗರದ ಮನೆಯೊಂದರ ಗೇಟ್ ತೆಗೆದು ಒಳಗೆ ಹೋಗಿ ಮೀಟರ್ ರೀಡಿಂಗ್ ಮಾಡುತ್ತಿದ್ದರು. ಮನೆ ಒಳಗಿಂದ ಬಂದ ವ್ಯಕ್ತಿಯೊಬ್ಬ ಅನುಮತಿ ಇಲ್ಲದೆ ಒಳಗೆ ಗೇಟ್ ಒಳಗೆ ಬಂದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಅಶ್ವಥ್ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
obstructed in their duties