ad

ಷರತ್ತು ವಿಧಿಸಿ ಈಶ್ವರಪ್ಪನವರ ಪಾಸ್ ಪೋರ್ಟ್ ನವೀಕರಣಕ್ಕೆ ಹೈ ಅಸ್ತು-High Court orders renewal of Eshwarappa's passport with conditions

SUDDILIVE || SHIVAMOGGA

ಷರತ್ತು ವಿಧಿಸಿ ಈಶ್ವರಪ್ಪನವರ ಪಾಸ್ ಪೋರ್ಟ್ ನವೀಕರಣಕ್ಕೆ ಹೈ ಅಸ್ತು-High Court orders renewal of Eshwarappa's passport with conditions

Eshwarappa, passport


ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಪಾಸ್‌ಪೋರ್ಟ್ ನ್ನು ಕೆಲವು ಷರತ್ತುಗಳಿಗೆ ಒಳಪಡಿಸಿ ನವೀಕರಿಸುವಂತೆ ನ್ಯಾಯಾಲಯ ಆದೇಶಿಸಿದೆ. 

ಷರತ್ತುಗೊಳಪಡಿಸಿ ನವೀಕರಣ ಮಾಡುವಂತೆ ಹೈಕೋರ್ಟ್ ಆದೇಶ ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿಗೆ ಆದೇಶಿಸಿದೆ. ತಮ್ಮ ಪಾಸ್‌ಪೋರ್ಟ್ ನವೀಕರಿಸಲು ನಿರ್ದೇಶನ ನೀಡಬೇಕೆಂದು ಕೋರಿ ಮಾಹಿ ಡಿಸಿಎಂ ಅರ್ಜಿ ಸಲ್ಲಿಸಿದ್ದರು. 

ಈಶ್ವರಪ್ಪ ಅರ್ಜಿ ಕುರಿತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ, ವಿಚಾರಣೆ ನಡೆಸಿ ಕೆಲವು ಷರತ್ತುಗಳನ್ನು ವಿಧಿಸಿ ಪಾಸ್‌ಪೋರ್ಟ್ ನವೀಕರಿಸಲು ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿಗೆ ಆದೇಶಿಸಿದೆ. ದೇಶದಿಂದ ಹೊರಗೆ ಹೋಗುವಾಗ ಪ್ರವಾಸದ ವಿವರವನ್ನು ಕೋರ್ಟ್‌ಗೆ ಮತ್ತು ಸ್ಥಳೀಯ ಸಕ್ಷಮ ಪ್ರಾಧಿಕಾರಕ್ಕೆ ಒದಗಿಸಲು ಸೂಚನೆ ನೀಡಿದೆ. 

ವಿದೇಶದಿಂದ ಬಂದ ಬಳಿಕವೂ ಕೋರ್ಟ್‌ಗೆ ಮಾಹಿತಿ ನೀಡಲು ಈಶ್ವರಪ್ಪಗೆ  ಹೈಕೋರ್ಟ್ ಸೂಚಿಸಿದೆ.

High Court orders renewal of Eshwarappa's passport with conditions

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close