3 ಕೆಜಿ 154 ಗ್ರಾಂ (3154 ಗ್ರಾಂ)ಗಾಂಜಾ ವಶ- 3 kg 154 grams (3154 grams) of cannabis seized

SUDDILIVE || SHIVAMOGGA

3 ಕೆಜಿ 154 ಗ್ರಾಂ (3154 ಗ್ರಾಂ)ಗಾಂಜಾ  ವಶ- 3 kg 154 grams (3154 grams) of cannabis seized   

ದಿನಾಂಕ;01.11.2025 ರಂದು ರವಿ ಎನ್.ಎಸ್ ಪೊಲೀಸ್ ನಿರೀಕ್ಷಕರವರಿಗೆ ಬಾತ್ಮಿದಾರರಿಂದ ನ್ಯಾಮತಿ ಪೊಲೀಸ್ ಠಾಣಾ ಸರಹದ್ದಿನ ಹೊನ್ನಾಳಿ-ಶಿವಮೊಗ್ಗ ರಸ್ತೆಯ ಬದಿಯಲ್ಲಿರುವ ಶ್ರೀ ಕಲ್ಬಿಗಿರಿ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಕೆಲವು ಆಸಾಮಿಗಳು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದರಿಂದ ಪೊಲೀಸ್ ಅಧೀಕ್ಷಕರವರಾದ ಶ್ರೀಮತಿ ಉಮಾ ಪ್ರಶಾಂತ ಐಪಿಎಸ್ & ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಪರಮೇಶ್ವರ ಹೆಗಡೆ ರವರ ಹಾಗೂ ಚನ್ನಗಿರಿ ಸಹಾಯಕ ಪೊಲೀಸ್ ಅಧೀಕ್ಷಕರವರಾದ ಸ್ಯಾಮ್ ವರ್ಗೀಸ್ ಐಪಿಎಸ್ ರವರ ಮಾರ್ಗದರ್ಶನದಲ್ಲಿ ರವಿ ಎನ್.ಎಸ್ ಪೊಲೀಸ್ ನಿರೀಕ್ಷಕರವರ ನೇತೃತ್ವದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡ  ಸಾಲುಬಾಳು ಕ್ರಾಸ್ ಬಳಿಯ ಕಲ್ಬಿಗಿರಿ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಹೋಗುವ ಕಚ್ಚಾ ರಸ್ತೆಯ ಎಡಭಾಗದ ಸ್ವಲ್ಪ ದೂರದ ಕಾಡಿನಲ್ಲಿ ಕೆಲವು ಆಸಾಮಿಗಳು ಬೈಕ್ ಗಳನ್ನು ನಿಲ್ಲಿಸಿಕೊಂಡು ಕುಳಿತಿರುವುದು ಕಂಡುಬಂದಿರುತ್ತದೆ. ನಂತರ ಅವರುಗಳನ್ನು ಸುತ್ತುವರೆದಿದ್ದು, ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮತ್ತು ಸಣ್ಣ ಪ್ಲಾಸ್ಟಿಕ್ ಕವರ್ ಗಳನ್ನು ನಮ್ಮಗಳ ಹಾಗೂ ಪಂಚರ ಸಮಕ್ಷಮ ಒಂದೊಂದಾಗಿ ಮೂರೂ ಕವರ್ ಗಳನ್ನು ತೆಗೆದು ಪರೀಶೀಲಿಸಿದ್ದು, ಅದರಲ್ಲಿ ಗಾಂಜಾ ಇರುವುದು ಕಂಡು ಬಂದಿರುತ್ತದೆ. ಸದರಿ ಆಸಾಮಿಗಳು ತಂದಿರುವ ಗಾಂಜಾ ಬಗ್ಗೆ ವಿಚಾರಿಸಲಾಗಿ ನಾವುಗಳು ಇದನ್ನು ಶಿವಮೊಗ್ಗದಿಂದ ತಂದಿದ್ದು, ನ್ಯಾಮತಿ, ಹೊನ್ನಾಳಿ ಭಾಗದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ತಯಾರಿ ನಡೆಸುತ್ತಿರುವದಾಗಿ ತಿಳಿಸಿರುತ್ತಾರೆ. ನಂತರ  ಸದರಿ ಆರೋಪಿತರುಗಳಾದ 1) ಅರ್ಬಾಜ್ ಖಾನ್ ತಂದೆ ರಶೀದ್ ಖಾನ್, 27 ವರ್ಷ, ಬಟ್ಟೆ ಅಂಗಡಿಯಲ್ಲಿ ಕೆಲಸ,  ವಾಸ 10 ನೇ ಕ್ರಾಸ್ ಇಲಿಯಾಜ್ ನಗರ, ಶಿವಮೊಗ್ಗ ಟೌನ್. 2) ಶಂಕರನಾಯ್ಕ ತಂದೆ ಪಾಪನಾಯ್ಕ, 29 ವರ್ಷ, ಕೂಲಿ ಕೆಲಸ, ವಾಸ ಹೋಸಜೋಗ ಗ್ರಾಮ ನ್ಯಾಮತಿ ತಾಲ್ಲೂಕ್. 3) ಮಹಮ್ಮದ್ ಹುಸ್ನೈನ್ ರಝಾ ಯಾನೆ ಮುದಾಸೀರ್ ತಂದೆ ಸಮೀರ್, 23 ವರ್ಷ, ಕೂಲಿ ಕೆಲಸ, ವಾಸ 11 ನೇ ಕ್ರಾಸ್, ಇಲಿಯಾಜ್ ನಗರ, ಶಿವಮೊಗ್ಗ ಟೌನ್ 4) ಜಾಫರ್ ಸಾದೀಖ್ ತಂದೆ ಸೈಯ್ಯದ್ ಹುಸೇನ್, 22 ವರ್ಷ, ಆಟೋ ಚಾಲಕ, ವಾಸ 4 ನೇ ಕ್ರಾಸ್ ಟ್ಯಾಂಕ್ ಮೊಹಾಲ್ಲ, ಶಿವಮೊಗ್ಗ ಟೌನ್ ಹಾಗೂ 5) ಮಹಮ್ಮದ್ ರೂಹೀತ್ ಯಾನೆ ರೋಹಿತ್ ತಂದೆ ಇಮ್ತಿಯಾಜ್ ಅಹಮ್ಮದ್, 31 ವರ್ಷ, ಕೂಲಿ ಕೆಲಸ, ವಾಸ ರಾಮನಗರ ಗ್ರಾಮ, ಶಿವಮೊಗ್ಗ ತಾಲ್ಲೂಕ್ ಇವರುಗಳನ್ನು ವಶಕ್ಕೆ ಪಡೆದು, ನಂತರ ಆರೋಪಿತರಿಂದ 3 ಕೆಜಿ 154 ಗ್ರಾಂ (3154 ಗ್ರಾಂ)ಗಾಂಜಾವನ್ನು ವಶಪಡಿಸಿಕೊಂಡಿದ್ದು,  ಆಂದಾಜು ಬೆಲೆ 3,20,000/- ರೂ ಆಗುತ್ತದೆ. ಇವರಿಂದ ಮೂರು ಮೊಬೈಲ್ ಗಳನ್ನು ಮತ್ತು  2 ಬೈಕ್ ಗಳನ್ನು ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ. ಈ ಸಂಬಂಧ ನ್ಯಾಮತಿ ಪೊಲೀಸ್ ಠಾಣೆ ಗುನ್ನೆ ನಂ 295/2025 ಕಲಂ 8(ಸಿ) 20(ಬಿ) (ii)(B) 29 NDPS ACT ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತದೆ, 

ಸದರಿ ಪ್ರಕರಣದ  ಆರೋಪಿತರು ಮತ್ತು ಮಾಲು ಪತ್ತೆ ಕಾರ್ಯದಲ್ಲಿ ರವಿ ಎನ್.ಎಸ್ ಪೊಲೀಸ್ ನಿರೀಕ್ಷಕರು, ಮತ್ತು ಹೊಳಬಸಪ್ಪ ಹೊಳಿ ಪಿಎಸ್ಐ. ನ್ಯಾಮತಿ ಪೊಲೀಸ್ ಠಾಣೆ ಸಿಬ್ಬಂದಿಯವರಾದ ಮಂಜಪ್ಪ, ಮಲ್ಲೇಶಪ್ಪ, ತೀರ್ಥಪ್ಪ, ವಿಕ್ರಮ್, ಚಂದ್ರಶೇಖರ, ನಾಗರಾಜನಾಯ್ಕ, ಶಿವರಾಜ್, ಆನಂದ, ಚನ್ನೇಶ ರವರುಗಳನ್ನು ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು ಶ್ಲಾಘಿಸಿರುತ್ತಾರೆ.

3 kg 154 grams (3154 grams) of cannabis seized

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close