ಮುಂಜಾಗ್ರತೆ ವಹಿಸದೆ ಹಂಪ್ ಗಳ ನಿರ್ಮಾಣ, ಒಂದೇ ಸ್ಥಳದಲ್ಲಿ ಐದು ಅಪಘಾತ- Construction of humps without taking precautions, five accidents at one place

SUDDILIVE || SHIVAMOGGA

ಮುಂಜಾಗ್ರತೆ ವಹಿಸದೆ ಹಂಪ್ ಗಳ ನಿರ್ಮಾಣ, ಒಂದೇ ಸ್ಥಳದಲ್ಲಿ ಐದು ಅಪಘಾತ- Construction of humps without taking precautions, five accidents at one place     

Construction, humps

ರೈಲ್ವೆ ನಿಲ್ದಾಣದಿಂದ ಉಷಾ ನರ್ಸಿಂಗ್ ಹೋಂಗೆ ಹೋಗುವರಸ್ತೆಯಲ್ಲಿ ಹಾಕಲಾಗುತ್ತಿರುವ ಹಂಪ್ ಗಳಿಂದ ರಾತ್ರಿ ಹೊತ್ತು ಚಲಿಸುವ ದ್ವಿಚಕ್ರವಾನ ಸವಾರರಿಗೆ ಅನಾನುಕೂಲವಾಗಿದ್ದು ಇದುವರೆಗೂ ಐದು ಜನರು ಹಂಪುಗಳಿಗೆ ಯಾವುದೇ ಫಲಕ ಹಾಕದ ಹಿನ್ನಲೆಯಲ್ಲಿ ಬಿದ್ದು ಗಾಯಗೊಂಡಿದ್ದಾರದ. 

ನವ್ಯಶ್ರೀ ಸಭಾಂಗಣದ ಮುಂದೆ ಒಂದು ದೊಡ್ಡ ಹಂಪನ್ನು ಹಾಕಲಾಗಿದ್ದು, ಅದೇ ರೀತಿ ಡಿಎಸ್ ಅರುಣ್ ರವರ ಮನೆಯ ಬಳಿ ಸಹ ಹಾಕಲಾಗಿದೆ. ಇದರ ಜೊತೆಯಲ್ಲಿ ಶರಾವತಿ ನಗರ ಮತ್ತೆ ನಗರದ ಇತರ ಭಾಗಗಳಲ್ಲಿ ಕೂಡ ಹಾಕಲಾಗುತ್ತಿದೆ. ಹಂಪುಗಳಿಗೆ ಅದಕ್ಕೆ ರೆಫ್ಲೆಕ್ಟರ್ಗಳು ಆಗಲಿ ಅಥವಾ ಬಿಳಿ ಬಣ್ಣದ ದೊಡ್ಡ ದೊಡ್ಡ ರೀತಿಯ ಪಟ್ಟಿಗಳನ್ನು ಆಗಲಿ ಹಾಕದೆ ಇರೋದ್ರಿಂದ 5 ಜನರು ಅಪಘಾತದಲ್ಲಿ ತೊಂದರೆ ಉಂಟಾಗಿದೆ.  


ಅದರಲ್ಲಿ ರಾತ್ರಿ 10:30 ರಲ್ಲಿ ಹೋಟೆಲ್ ನಿಂದ ವಾಪಸ್ ಬರ್ತಾ ಇದ್ದ ಯಶವಂತ್ ಎಂಬಾತ ಹಂಪ್ ತಿಳಿಯದೆ ಬೈಕ್ ಹಾರಿಸಿದ ಪರಿಣಾಮ ಗಾಯಗೊಂಡಿದ್ದಾನೆ. ಸ್ಥಳಕ್ಕೆ ಕರವೇ ಸಿಂಹ ಸೇನೆಯವರಾದ ರವಿಪ್ರಸಾದ್ ಎಂ ಭರತ್ ಎಸ್ ಶರತ್ ರಘು ಶಿವಣ್ಣ ಲಿಂಗಣ್ಣ ನಾವೇ ಭೇಟಿ ಮಾಡಿ ಪೊಲೀಸ್ ಇಲಾಖೆಯವರನ್ನು ಕರೆಸಿ ಬ್ಯಾರಿಕೇಡ್ ಗಳನ್ನ ಅಲ್ಲೆಲ್ಲ ಹಾಕಿಸಿದ್ದಾರೆ.  ರಾತ್ರಿ 12:30 ತನಕ  ಕೊನೆ ರೈಲು  ಆ ರೈಲು ಬಂದ ಆದ ನಂತರ ನಾವೆಲ್ಲರೂ ಕೂಡ ನಿವಾಸಿಗಳು  ಎಲ್ಲರೂ ಕೂಡ ಮನೆಗೆ ತೆರಳುವ ತನಕ ಟ್ರಾಫಿಕ್ ಕೆಲಸ ಮಾಡಿ ಮನೆಗೆ ತೆರಳಿದ್ದಾರೆ.

ನಗರದಲ್ಲಿ ರಸ್ತೆ ಗುಂಡಿಗಳನ್ನ ಮುಚ್ಚುವ ಕೆಲಸ ಮಾಡಿ ಎಂಬ ಕೂಗು ಹೆಚ್ಚಾದ ಬೆನ್ನಲ್ಲೇ ಗುಂಡಿಗಳನ್ನ ಮುಚ್ಚುವ ಬದಲು ಹಂಪ್ ಗಳನ್ನ ನಿರ್ಮಿಸುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂಬುದು ತಿಳಿಯಬೇಕಿದೆ.

Construction of humps without taking precautions, five accidents at one place

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close