ನಕಲಿ ಜೆಎಸ್ ಡಬ್ಲೂ ಎಂದು ಕಬ್ಬಿಣದ ಮೇಲೆ ಪ್ರಿಂಟ್ ಹಾಕುತ್ತಿದ್ದ ಅಡ್ಡದ ಮೇಲೆ ಪೊಲೀಸ್ ದಾಳಿ-fake JSW

SUDDILIVE || SHIVAMOGGA

ನಕಲಿ ಜೆಎಸ್ ಡಬ್ಲೂ ಎಂದು ಕಬ್ಬಿಣದ ಮೇಲೆ ಪ್ರಿಂಟ್ ಹಾಕುತ್ತಿದ್ದ ಅಡ್ಡದ ಮೇಲೆ ಪೊಲೀಸ್ ದಾಳಿ-Police raid a cross that was printing on iron saying "fake JSW"



Fake, JSW

ಜೆಎಸ್ ಡಬ್ಲೂ ಕಂಪನಿಯ ಹೆಸರನ್ನ ಬೇರೆ ಕಬ್ಬಿಣಗಳಿಗೆ ಪ್ರಿಂಟ್ ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಜಯನಗರ ಪೊಲೀಸರು ದಾಳಿ ನಡೆಸಿ ಕಂಪನಿಯ ಕಬ್ಬಿಣಗಳನ್ನ ವಶಪಡಿಸಿಕೊಳ್ಳಲಾಗಿದೆ. 

ದಿನಾಂಕ;12/11/2025 ರಂದು ಜಯನಗರದ ನಿವಾಸಿ ಪ್ರದೀಪ್  ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದು ಸುಂದರಂ ಇಂಜಿನಿಯರಿಂಗ್ ವರ್ಕ್ಸ್ ನ ನವೀನ್ ಎಂಬುವರು ಬೇರೆ ಕಂಪನಿಯ ಕಬ್ಬಿಣದ ಶೀಟ್ ಗಳಿಗೆ ಜೆ.ಎಸ್.ಡಬ್ಲೂ ಕಂಪನಿಯ ಶೀಟ್ ಎಂದು ನಕಲಿ ಪ್ರಿಂಟ್ ಮಾಡಿ ಮಾರಾಟ ಮಾಡುತ್ತಿರುವುದಾಗಿ ಪ್ರಕರಣ ದಾಖಲಾಗಿದೆ. 

ಪ್ರಕರಣದಲ್ಲಿ ಕೃತ್ಯವೆಸಗಿದ ಆರೋಪಿಗಳನ್ನು ಪತ್ತೆ ಮಾಡುವ ಬಗ್ಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಿಥುನ್ ಕುಮಾರ್ ಜಿ ಕೆ ಐಪಿಎಸ್ ರವರ ನಿರ್ದೇಶನದಂತೆ ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ. ಕಾರಿಯಪ್ಪ ಕೆಎಸ್,ಪಿ,ಎಸ್ & ಶಿವಮೊಗ್ಗ ಉಪವಿಭಾಗದ ಡಿ.ವೈಎಸ್.ಪಿ. ರವರಾದ ಶ್ರೀ ಸಂಜೀವ್ ಕುಮಾರ್  ರವರ ಮಾರ್ಗದರ್ಶನದಲ್ಲಿ ಕೆ,ಎನ್,ಹಳ್ಳಿಯವರ್ ಪಿಎಸ್ಐ ಜಯನಗರ ಠಾಣೆ ಹಾಗೂ ಶ್ರೀ ಸಿದ್ದೇಗೌಡ  ಪಿಐ ಜಯನಗರ ಪೊಲೀಸ್ ಠಾಣೆ ಶಿವಮೊಗ್ಗ ರವರು  ಸದರಿ ಪ್ರಕರಣದ ತನಿಖೆ ಕೈಗೊಂಡು ಶಿವಮೊಗ್ಗ ಎನ್,ಇ,ಎಸ್ ಶಿಕ್ಷಣ ಸಂಸ್ಥೆಗೆ ಸೇರಿದ ಸಿ.ಬಿ.ಆರ್ ಲಾ ಕಾಲೇಜ್ ನ ಟೆರೆಸ್ ಕಟ್ಟಡದ ನವೀನ್ ರವರು ರೂಪಿಂಗ್ ಮಾಡಿಸುತಿದ್ದ ಶೀಟ್ ಗಳನ್ನು ಪರಿಶೀಲಿಸಿದ್ದು  ಕಬ್ಬಿಣದ  ಶಿಟ್ ಗಳಿಗೆ ಎಸ್.ಡಬ್ಲೂ ಕಂಪನಿಯ ನಕಲಿ ಪ್ರಿಂಟ್  ಹಾಕಿರುವುದು ಕಂಡು ಬಂದಿದ್ದು ಸ್ಥಳದಲ್ಲಿದ್ದ 20 ಅಡಿ ಉದ್ದ 15  ಶೀಟ್ ಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ. 

ನಂತರ ನವೀನ್ ರವರು ಆ ಶೀಟ್ ಗಳನ್ನು ಗುರುಪುರ ದಲ್ಲಿರುವ ನಂದಿ ಟ್ರೇಡಿಂಗ್  ನಲ್ಲಿ ಖರೀದಿ ಮಾಡಿದ್ದಾಗಿ ತಿಳಿಸಿದ್ದು   ನಂದಿ ಟ್ರೇಡಿಂಗ್  ನ ಜಾಗ ಕೊಟ್ಟಿರೋದು ಯಾರು ಸಿಇಓ ಮಾಲಿಕರಾದ ಲೋಹಿತ್ ಬಿ ನಾಯ್ಕ, 34 ವರ್ಷ, ನಂದಿ ಟ್ರೇಡಿಂಗ್ ಕಂಪನಿಯ ಮಾಲೀಕರು ವಾಸ ಹೊಳೆಬೆನವಳ್ಳಿ ಗ್ರಾಮ, 02 ನೇ ಕ್ರಾಸ್, ಶಿವಮೊಗ್ಗ ತಾಲ್ಲೂಕು ರವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿರುತ್ತದೆ. ಇವರು ಕಬ್ಬಿಣದ ಶೀಟ್ ಗಳಿಗೆ ಜೆ.ಎಸ್.ಡಬ್ಲೂ ಎಂದು ಪ್ರಿಂಟ್ ಮಾಡಿ ಮಾರಾಟ ಮಾಡುತ್ತಿರುವುದು ಕಂಡು ಬಂದಿರುತ್ತದೆ. ಇವರಿಂದ ಕಬ್ಬಿಣದ ಶೀಟ್ ಗಳಿಗೆ  ಜೆ.ಎಸ್.ಡಬ್ಲೂ ಎಂದು ಪ್ರಿಂಟ್ ಮಾಡುವ ಯಂತ್ರವನ್ನು ಅಮಾನತ್ತು ಪಡಿಸಿಕೊಂಡಿದ್ದು ತನಿಖೆ ಮುಂದುವರೆದಿರುತ್ತದೆ.

fake JSW

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close