alt="ad" />

ಶಿವಮೊಗ್ಗ ಏರ್ ಪೋರ್ಟ್ ನಲ್ಲಿ ಬೆಳಗ್ಗಿಂದ ಕರೆಂಟ್ ಇಲ್ಲ?No power at Shivamogga Airport since morning?

 SUDDILIVE || SHIVAMOGGA

ಶಿವಮೊಗ್ಗ ಏರ್ ಪೋರ್ಟ್ ನಲ್ಲಿ ಬೆಳಗ್ಗಿಂದ ಕರೆಂಟ್ ಇಲ್ಲ?No power at Shivamogga Airport since morning?

Airport, power

ವಿಮಾನ ನಿಲ್ದಾಣದಲ್ಲಿ ವಿದ್ಯುತ್ ಇಲ್ಲದಂತಾಗಿ ಪ್ರಯಾಣಿಕರು ಪರದಾಡುವಂತಾಗಿದೆ. ಬೆಳಿಗ್ಗೆಯಿಂದಲೇ ವಿದ್ಯುತ್ ಕಟ್ ಆಗಿ ಸಾರ್ವಜನಿಕರ ಪರದಾಟ ಮುಂದುವರೆದಿದೆ.

ಬೆಳಿಗ್ಗೆ 7 ಗಂಟೆಯಿಂದಲೇ ಈ ವಿದ್ಯುತ್ ಅಭಾವ ಉಂಟಾಗಿ ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಸರಿಪಡಿಸುತ್ತಿದ್ದಾರೆ. ವಿಮಾನ ನಿಲ್ದಾಣದ ಸಿಬ್ಬಂದಿಗಳು ಸರಕರಿಸುತ್ತಿದ್ದಾರೆ. ಈ ನಡುವೆ ಬಿಸಿಲಿನಲ್ಲಿ ಬರುವ ಪ್ರಯಾಣಿಕರಿಗೆ ವಿದ್ಯುತ್ ಅಭಾವದಿಂದ ಪರದಾಡುತ್ತಿರುವುದಾಗಿ ಹೆಸರು ಹೇಳಲು ಇಚ್ಚಿಸದ ಪ್ರಯಾಣಿಕರು ಸುದ್ದಿಲೈವ್ ಗೆ ತಿಳಿಸಿದ್ದಾರೆ. 

ಈ ಬಗ್ಗೆ ಪ್ರತಿಕ್ರಿಯಿಸಿದ ಏರ್ ಪೋರ್ಟ್ ನ ನಿರ್ದೇಶಕರು ಬೆಳಗ್ಗೆ ಎರಡು ತಾಸು ವಿದ್ಯುತ್ ಇಲ್ಲದಂತಾಗಿತ್ತು.‌ಮೆಸ್ಕಾಂ ಇಲಾಖೆಯವರು ಸರಿಪಡಿಸಿದ್ದಾರೆ. ಈಗ ಏರ್ ಪೋರ್ಟ್ ನಲ್ಲಿ ವಿದ್ಯುತ್ ಇದೆ ಎಂದು ಸ್ಪಷ್ಟಪಡಿಸಿದ್ದಾರೆ. 

ಆದರೆ ಪ್ರಯಾಣಿಕರು ಮಾತ್ರ ಈ ವರೆಗೂ ಏಸಿ ಆನ್ ಮಾಡಿಲ್ಲ. ಬಿಸಿಲಿನಿಂದ ಬರುವವರಿಗೆ ಇದು ತೊಂದರೆಯಾಗುತ್ತಿದೆ ಎಂಬುದು ಅವರ ಆರೋಪವಾಗಿದೆ. ವಿಮಾನ ನಿಲ್ದಾಣ ಆರಂಭಗೊಂಡು ಎರಡು ವರ್ಷ ಕಳೆದಿದೆ. ನೈಟ್ ಲ್ಯಾಂಡಿಂಗ್  ಕುರಿತುಒಂದು ಕಡೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಸದರ ನಡುವೆ ಬಿಗ್ ವಾರೇ ನಡೆದಿತ್ತು. 

ಶಾಸಕ ಗೋಪಾಲಕೃಷ್ಣ ಬೇಳೂರು ವಿಮಾನ ಹಾರಟ ಸರಿಯಿಲ್ಲದೆ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಈ ಬೆಳವಣಿಗೆ ವಿಮಾನ ನಿಲ್ದಾಣ ಮುಚ್ಚಲು ಕಾರಣವಾದರೂ ಆಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದರು.‌ ಈ ನುಡುವೆ ಏರ್ ಪೋರ್ಟ್ ನಲ್ಲಿ ವಿದ್ಯುತ್ ಅಭಾವದ ಸುದ್ದಿ ಇನ್ನೂ ಪ್ರಯಾಣಿಕರನ್ನ ಬೆಚ್ಚಿ ಬೀಳಿಸಿದೆ. ವಿದ್ಯುತ್ ಅಭಾವದ ಸುದ್ದಿ ಸಣ್ಣದೆನಿಸಬಹುದು. ಅದಕ್ಕೆ ಸ್ಪಂಧನೆ ಹೇಗೆ ನಡೆಯುತ್ತೆ ಎಂಬುದು ಮುಖ್ಯವಾಗಿದೆ. 

No power at Shivamogga Airport since morning?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close