alt="ad" />

ಬಿಹಾರದ ಸಿಎಂ ಆಯ್ಕೆ ಮೋದಿ ಮತ್ತು ಅಮಿತ್ ಶಾ ನಿರ್ಣಯವೇ ಅಂತಿಮ-Modi and Amit Shah's decision on Bihar CM selection is final

SUDDILIVE || SHIVAMOGGA

ಬಿಹಾರದ ಸಿಎಂ ಆಯ್ಕೆ ಮೋದಿ ಮತ್ತು ಅಮಿತ್ ಶಾ ನಿರ್ಣಯವೇ ಅಂತಿಮ-Modi and Amit Shah's decision on Bihar CM selection is final  

Bdy, Bihar



ಬಿಹಾರ ಚುನಾವಣಾ ಫಲಿತಾಂಶ ಸಂಪೂರ್ಣ ಹೊರಬೀಳಬೇಕಿದೆ. ಈ ವೇಳೆ ಎನ್ ಡಿ ಎ 200 ಸ್ಥಾನಗಳನ್ನು ಗೆಲ್ಲುತ್ತಾ ಇದೆ. ನಿರೀಕ್ಷೆಗೂ ಮೀರಿ ಫಲಿತಾಂಶ ಬಂದಿದೆ ಎಂದು ಶಿವಮೊಗ್ಗದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅಭಿಪ್ರಾಯಪಟ್ಟರು. 

ಮಾಧ್ಯಮಗಳ ಜೊತೆ ಮಾತನಾಡಿ,  ದೊಡ್ಡ ಗೆಲುವು ಆಗುತ್ತಿದೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಇದು ನಿರೀಕ್ಷೆಗೂ ಮೀರಿ ಇಷ್ಟು ದೊಡ್ಡ ಗೆಲುವಾಗುತ್ತದೆ ಎಂಬುದು ಯಾರು ಅಂದುಕೊಂಡಿರಲಿಲ್ಲ. ಪ್ರಧಾನಿ ಮೋದಿ ಹಾಗೂ ನಿತೀಶ್ ಕುಮಾರ್ ಅಮಿತ್ ಶಾ ಅವರ ನೇತೃತ್ವ ಈ ದೊಡ್ಡ ಗೆಲುವನ್ನ ತಂದುಕೊಟ್ಟಿದೆ ಎಂದರು. 


ಮೋದಿ ಮತ್ತು ಅಮಿತ್ ಶಾರವರ ನೇತೃತ್ವವನ್ನು ಮೆಚ್ಚಿ ಜನರು ಎಷ್ಟು ದೊಡ್ಡ ಗೆಲುವನ್ನ ಕೊಟ್ಟಿದ್ದಾರೆ. ಅವರಿಗೆಲ್ಲರಿಗೂ ನಾನು ಅಭಿನಂದನೆಯನ್ನು ಸಲ್ಲಿಸುತ್ತೇನೆ. ಇದರ ಪರಿಣಾಮ ಮುಂಬರುವ ದಿನಗಳಲ್ಲಿ ಬಿಜೆಪಿ ಎಲ್ಲಾ ಕ್ಷೇತ್ರಗಳಲ್ಲೂ ದೊಡ್ಡ ಸಾಧನೆ ಮಾಡಲಿದೆ ಎಂದರು. 

ಕರ್ನಾಟಕದಲ್ಲಿ ಇದೇ ರೀತಿ ದೊಡ್ಡ ಗೆಲುವನ್ನು ಕಾಣಬೇಕು ಎಂದು ಕೆಲಸ ಮಾಡುತ್ತಿದ್ದೇವೆ. ನಮ್ಮ ಪ್ರಯತ್ನವನ್ನು ನಾವು ಮುಂದುವರಿಸುತ್ತಿದ್ದೇವೆ. ಬಿಹಾರದಲ್ಲಿ ಸಿಎಂ ಆಯ್ಕೆ ವಿಚಾರದ ಬಗ್ಗೆ ಅಮಿತ್ ಶಾ ಹಾಗೂ ನರೇಂದ್ರ ಮೋದಿಯವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಅದೇ ಫೈನಲ್ ಆಗುತ್ತದೆ. ಆ ವಿಚಾರದಲ್ಲಿ ನಾನು ತಲೆ ಹಾಕುವುದಿಲ್ಲ ಎಂದರು. 

ಮೋದಿಯವರು ಅಮಿತ್ ಶಾ ಅವರು ಹಾಗೂ ನಿತೀಶ್ ಕುಮಾರ್ ಅವರ ಮೇಲೆ ಇರುವ ಗೌರವ ಈ ಫಲಿತಾಂಶಕ್ಕೆ ಕಾರಣವಾಗಿದೆ. ಬಹಳ ದೊಡ್ಡ ಗೆಲುವಾಗಿದ್ದರಿಂದ ಬಿಹಾರದ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದ ಅವರು ರಾಜ್ಯ ರಾಜಕರಣದ ಬಗ್ಗೆ ನಾನೂ ಈಗ ಮಾತನಾಡುವುದಿಲ್ಲ. ಕಬ್ಬಿನಬೆಳೆಗಾರರ ವಿಚಾರದಲ್ಲಿ ಒಂದು ನಿರ್ಧಾರಕ್ಕೆ ಬರುತ್ತಿದ್ದೇವೆ. ಎಲ್ಲ ಸಮಸ್ಯೆಗಳು ಪರಿಹಾರ ಆಗಲಿದೆ ಎಂದರು.

Modi and Amit Shah's decision on Bihar CM selection is final

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close