SUDDILIVE || SHIVAMOGGA
ಹೊಸಮನೆ ಶಾಲೆಯಲ್ಲಿ ಆಯನೂರು ಮಂಜುನಾಥ್ ಹುಟ್ಟುಹಬ್ಬ ಆಚರಣೆ-Ayanur Manjunath's birthday celebration at Hosamane School
- ಮಕ್ಕಳಿಗೆ ಸಿಹಿ, ಶಾಲಾಭಿವೃದ್ದಿಗೆ ೨೫ ಸಾವಿರ ದೇಣಿಗೆ
- - ಅಭಿಮಾನಿ ಬಳಗದಿಂದ ಹುಟ್ಟು ಹಬ್ಬ ಆಯೋಜನೆ
- - ಮಾಜಿ ಸಂಸದರಿಗೆ ಬರ್ತ್ ಡೇ ವಿಶ್ ಮಾಡಿದ ಮಕ್ಕಳು
ಮಾಜಿ ಸಂಸದ ಹಾಗೂ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಅವರು ಶುಕ್ರವಾರ ತಮ್ಮ ಹುಟ್ಟುಹಬ್ಬವನ್ನು ಹೊಸಮನೆಯ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ವಿದ್ಯಾರ್ಥಿಗಳೊಂದಿಗೆ ಆಚರಿಸಿಕೊಂಡರು. ಈ ವೇಳೆ ಶಾಲೆಯ ಅಭಿವೃದ್ದಿಗೆ ಮಾಜಿ ಸಂಸದ ಆಯನೂರು ಮಂಜುನಾಥ್ ಅವರು ೨೫ ಸಾವಿರ ದೇಣಿಗೆ ನೀಡಿದರು.
ಅಭಿಮಾನ ಬಳಗದವರು ಆಯೋಜಿಸಿದ್ದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಗುಲಾಬಿ ಹೂ ಹಾಗೂ ಸಿಹಿ ನೀಡಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಮಕ್ಕಳೆ ಈ ದೇಶದ ಪ್ರಜೆಗಳು, ಅವರ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಸಮಾಜದ ಗುರಿಯಾಗಿರಬೇಕು. ಭಾರತದ ಮೊದಲ ಪ್ರಧಾನಿ ನೆಹರೂ ಅವರು ತಮ್ಮ ಹುಟ್ಟುಹಬ್ಬವನ್ನು ಮಕ್ಕಳಿಗಾಗಿ ಬಿಟ್ಟುಕೊಟ್ಟಿದ್ದಾರೆ. ಆಗಾಗಿ ನ.೧೪ರಂದು ಮಕ್ಕಳ ದಿನಾಚರಣೆಯನ್ನು ನಾವು ಆಚರಿಸುತ್ತಾ ಬಂದಿದ್ದೇವೆ. ನ.೧೪ ನನ್ನ ಹುಟ್ಟಿದ ದಿನವೂ ಆಗಿರುವುದರಿಂದ ನನಗದು ಸಂತಸ ತಂದಿದೆ ಎಂದರು.
ಹುಟ್ಟಿದ ಹಬ್ಬ ಎಂದರೆ ಕೇವಲ ಆಚರಣೆಯಾಗಬಾರದು. ಪ್ರತಿ ಹುಟ್ಟಿದ ಹಬ್ಬದ ದಿನವೂ ನನ್ನನ್ನು ನಾನು ಪ್ರಶ್ನೆ ಮಾಡಿಕೊಳ್ಳುತ್ತೇನೆ. ಇದು ನಮ್ಮ ಕರ್ತವ್ಯವನ್ನು ನೆನಪಿಸುವ ದಿನವೂ ಆಗಿದೆ. ಕಳೆದ ವರ್ಷಗಳಲ್ಲಿ ನಾನೇನು ಸಾಧನೆ ಮಾಡಿದ್ದೇನೆ. ಅಥವಾ ತಪ್ಪೇನು ಮಾಡಿದ್ದೇನೆ. ಅದನ್ನು ತಿದ್ದಿಕೊಳ್ಳುವ ಬಗೆ ಹೇಗೆ ಎಂಬುವುದನ್ನು ನೆನಪಿಸುವ ದಿನವೇ ಈ ಹುಟ್ಟುಹಬ್ಬವಾಗಿದೆ ಎಂದರು.
ಶಾಲೆಯ ಮುಖ್ಯೋಪಾಧ್ಯಾಯ ರವಿಕುಮಾರ್ ಅವರು, ಮಾಜಿ ಸಂಸದ ಆಯನೂರು ಮಂಜುನಾಥ್‌ರವರಿಗೆ ಹುಟ್ಟುಹಬ್ಬದ ಶುಭಾಷಯ ಹೇಳಿದರಲ್ಲದೆ, ತಮ್ಮ ಶಾಲೆಗೆ ದೇಣಿಗೆ ನೀಡಿದ್ದಕ್ಕೆ ಕೃತಜ್ಞತೆ ಅರ್ಪಿಸಿದರು.ಈ ಸಂದರ್ಭದಲ್ಲಿ ಪ್ರಮುಖರಾದ ವೈ.ಹೆಚ್.ನಾಗರಾಜ್, ಧೀರರಾಜ್ ಹೊನ್ನಾವಿಲೆ, ಹಿರಣ್ಣಯ್ಯ, ಶಾಮ್‌ಸುಂದರ್ ಎನ್.ಕೆ., ಪಿ.ಟಿ.ಮಂಜಪ್ಪ, ಲಕ್ಷ್ಮಣಪ್ಪ, ಲೋಕೇಶ್, ಶಿ.ಜು.ಪಾಶ, ಜಿ.ಪದ್ಮನಾಭ್, ತಿಮ್ಲಾಪುರ ಲೋಕೇಶ್, ಸಂತೋಷ್ ಆಯನೂರು ಸೇರಿದಂತೆ ಹಲವರಿದ್ದರು.
ಸಾಮಾನ್ಯವಾಗಿ ನಾನು ಎಂದು ಹುಟ್ಟುಹಬ್ಬವನ್ನು ಆಚರಿಸಿಕೊಂಡವನಲ್ಲ. ಆದರೆ ಈ ವರ್ಷ ಗೆಳೆಯರ ಮತ್ತು ಅಭಿಮಾನಿಗಳ ಒತ್ತಾಯದ ಮೇರೆಗೆ ಹುಟ್ಟುಹಬ್ಬವನ್ನು ಅರ್ಥಗರ್ಭಿತವಾಗಿ ಆಚರಿಸಿಕೊಳ್ಳಬೇಕು ಎನ್ನುವ ಹಿನ್ನಲೆಯಲ್ಲಿ ನನಗೆ ನಾನು ಸಂಕಲ್ಪ ಮಾಡಿಕೊಂಡಿದ್ದೇನೆ. ಬಡವರ ಮತ್ತು ಕಾರ್ಮಿಕರ, ಶೋಷಿತರ ಪರವಾದ ನನ್ನ ಚಿಂತನೆಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳುತ್ತೇನೆ.
KPCC SPOKESPERSON- ಆಯನೂರು ಮಂಜುನಾಥ್,
Ayanur Manjunath's birthday celebration at Hosamane School
