ಗಾಂಧಿಬಜಾರ್ ನಲ್ಲಿ ಬಿತ್ತು ಬೋರ್ಡ್- Board planted in Gandhi Bazaar

 SUDDILIVE ||SHIVAMOGGA

ಗಾಂಧಿಬಜಾರ್ ನಲ್ಲಿ ಬಿತ್ತು ಬೋರ್ಡ್- Board planted in Gandhi Bazaar  

Planted, board


ಶಿವಮೊಗ್ಗ ಗಾಂಧಿ ಬಜಾರ್ ನಲ್ಲಿ ಫುಟ್ ಪಾತ್ ವ್ಯಾಪಾರಕ್ಕೆ ಕಡಿವಾಣ ಹಾಕಲಾಗಿದೆ. ಅದರ ಮುಂದುವರೆದ ಭಾಗವಾಗಿ  ಪಾರ್ಕಿಂಗ್ ಬೋರ್ಡ್ ಕೆಳಗಡೆ ಫುಟ್ ಪಾತ್ ವ್ಯಾಪಾರ ನಿಷೇಧಿಸಲಾಗಿದೆ ಎಂಬ ನಾಮಫಲಕ ಹಾಕುವ ಮೂಲಕ ಟ್ರಾಫಿಕ್ ಪೊಲೀಸ್ ಠಾಣೆಯ ಸಿಪಿಐ ದೇವರಾಜ್ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. 


ಗಾಂಧಿ ಬಜಾರ್ ನಲ್ಲಿ ಫುಟ್ ಪಾತ್ ವ್ಯಾಪರದಿಂದ ಜನಸಾಮಾನ್ಯರಿಗೆ ಓಡಾಡುವುದೇ ಕಷ್ಟಸಾಧ್ಯವಾಗಿತ್ತು. ಇಲ್ಲಿ ವ್ಯಾಪಾರ ಮಾಡುವುದೇ ಒಂದು ರೀತಿ ರಾಜಕಾರಣಕ್ಕೂ ತಿರುಗಿತ್ತು. ಮೊದಲು ಮಸೀದಿ ಪಕ್ಕದ ರಸ್ತೆ ಮತ್ತು ಬಜಾರ್ ನ ಒಳ ರಸ್ತೆಗಳಲ್ಲಿ ಫುಟ್ ಪಾತ್ ವ್ಯಾಪಾರಿಗಳಿಗೆ ಸೂಕ್ತ ಜಾಗ ಕಲ್ಪಿಸಿ ಗಾಂಧಿ ಬಜಾರ್ ನ್ನ ಮೊದಲು ಸ್ವಚ್ಚಗೊಳಿಸುವ ಕಾರ್ಯಕ್ಕೆ ಟ್ರಾಫಿಕ್ ಪೊಲೀಸರು ಮತ್ತು ಮಹಾನಗರ ಪಾಲಿಕೆ ಮುಂದಾಗಿತ್ತು. 


ಅದರ ಮುಂದುವರೆದ ಭಾಗವಾಗಿ ಇಂದು ಪಾರ್ಕಿಂಗ್ ಬೋರ್ಡ್ ನ ಕೆಳಭಾಗದಲ್ಲಿ ಫುಟ್ ಪಾತ್ ವ್ಯಾಪಾರಕ್ಕೆ ನಿಷೇಧಿಸಲಾಗಿದೆ ಎಂದು ನಾಮಫಲಕ ಹಾಕಿ ಜನಸಾಮಾನ್ಯರಿಗೆ ಓಡಾಡಲು ಅವಕಾಶ ಮಾಡಿಕೊಡಲಾಗಿದೆ. ಕಟ್ಟಡದಲ್ಲಿ ಬಾಡಿಗೆ ಹಿಡಿದು ವ್ಯಾಪಾರ ಮಾಡುವ ಉದ್ದಿಮೆದಾರರಿಗೆ ಸೆಡ್ಡು ಹೊಡೆದು ಫುಟ್ ಪಾತ್ ವ್ಯಾಪಾರಿಗಳು ಕೆಲವೊಮ್ಮೆ ವ್ಯಾಪಾರ ಮಾಡಿದ್ದನ್ನ ಇಲ್ಲಿ ನೆನಪಿಸಿಕೊಳ್ಳಬಹುದು. ಆದರೆ ಈಗ ಬ್ರೇಕ್ ಹಾಕಿರುವುದಕ್ಕೆ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ. ಇದು ಮುಂದುವರೆಯಲಿ ಎಂಬ ಆಶಯವನ್ನೂ ವ್ಯಕ್ತಪಡಿಸಿದ್ದಾರೆ. 

Board planted in Gandhi Bazaar  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close