ಇಂಜಿನಿಯರಿಂಗ್ ಸೀಟುಗಳನ್ನು ನುಂಗುತ್ತಿರುವ ಖಾಸಗಿ ವಿಶ್ವವಿದ್ಯಾಲಯಗಳು-ಡಾ.ಸರ್ಜಿ ಗಂಭೀರ ಆರೋಪ-Dr. Sarji makes serious allegations that private universities are swallowing up engineering seats

SUDDILIVE || BELAGAVI

ಇಂಜಿನಿಯರಿಂಗ್ ಸೀಟುಗಳನ್ನು ನುಂಗುತ್ತಿರುವ ಖಾಸಗಿ ವಿಶ್ವವಿದ್ಯಾಲಯಗಳು-ಡಾ.ಸರ್ಜಿ ಗಂಭೀರ ಆರೋಪ-Dr. Sarji makes serious allegations that private universities are swallowing up engineering seats

Dr.sarji, Engineer

ಕರ್ನಾಟಕ ರಾಜ್ಯದಲ್ಲಿ 229 ಇಂಜನಿಯರಿಂಗ್ ಕಾಲೇಜ್ ಗಳು ಇದೆ. ಈ ಪೈಕಿ 27 ಸರ್ಕಾರಿ  ಇಂಜನಿಯರಿಂಗ್ ಕಾಲೇಜುಗಳಿವೆ. ಸರ್ಕಾರಿ ಮತ್ತು ಖಾಸಗಿ ಸೇರಿ ರಾಜ್ಯದಲ್ಲಿ ಸರಿ ಸುಮಾರು 1,53,916 ಸೀಟುಗಳು ಇದೆ.  27 ಖಾಸಗಿ ವಿಶ್ವವಿದ್ಯಾಲಯದಲ್ಲಿ 33,000 ಇಂಜನಿಯರಿಂಗ್ ಸೀಟ್ ಇದ್ರೆ,  ಸರ್ಕಾರಿ  ಇಂಜನಿಯರಿಂಗ್ ಕಾಲೇಜುಗಳಲ್ಲಿ. ಕೇವಲ  6,495 ಸೀಟುಗಳು ಇದೆ, ಖಾಸಗಿ ಕಾಲೇಜುಗಳಿಗೆ ಹೋಲಿಸಿದರೆ ಸರ್ಕಾರಿ ಕಾಲೇಜುಗಳಲ್ಲಿ 5 ಪಟ್ಟು ಕಡಿಮೆ ಇದೆ, ಈ ತಾರತಮ್ಯ ಯಾಕೆ ಎಂದು ವಿಧಾನ ಪರಿಷತ್ ಶಾಸಕ ಡಾ.ಧನಂಜಯ ಸರ್ಜಿ ಮಂಗಳವಾರ ವಿಧಾನ ಪರಿಷತ್ ನಲ್ಲಿ ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ಅವರಿಗೆ ಪ್ರಶ್ನೆ ಕೇಳಿದರು. 

ರಾಜ್ಯದ ಒಂದು ಖಾಸಗಿ ವಿಶ್ವವಿದ್ಯಾಲಯದಲ್ಲಿ 4,320  ಇಂಜನಿಯರಿಂಗ್ ಸೀಟುಗಳು ಇದ್ರೆ ಈ ಪೈಕಿ 4.020 ಅಂದರೆ ಶೇ 90% ರಷ್ಟು ಸೀಟುಗಳು  ಕೇವಲ ಕಂಪ್ಯೂಟರ್ ಸೈನ್ಸ್ ಗೆ ಸಂಬಂದಿಸಿದ ಕೋರ್ಸ್ ಗಳಿಗೆ ಮೀಸಲಿದೆ. ಇದೆ ಸರ್ಕಾರಿ ಇಂಜನಿಯರಿಂಗ್ 6,500 ಸೀಟುಗಳು ಇದ್ರೆ ಕೇವಲ 10% ಮಾತ್ರ ಕಂಪ್ಯೂಟರ್ ಸೈನ್ಸ್ ಗೆ ಸಂಬಂದಿಸಿದ ಕೋರ್ಸ್ ಗಳಿಗೆ ಇಟ್ಟಿದ್ದಾರೆ ಇದು ಯಾವ ರೀತಿ ನ್ಯಾಯ ? ಹೇಗೆ ಅನುಮತಿ ನೀಡಿದ್ದೀರಿ ?ಇದು ಹೇಗೆ ಸಾಧ್ಯ ? ಸರ್ಕಾರಿ ಇಂಜನಿಯರಿಂಗ್ ಕಾಲೇಜುಗಳಲ್ಲಿ 20 ವಿದ್ಯಾರ್ಥಿಗಳಿಗೆ ಒಬ್ಬ ಅಸಿಸ್ಟೆಂಟ್ ಪ್ರೊಫೆಸರ್ ಇದ್ರೆ ಖಾಸಗಿ ಇಂಜನಿಯರಿಂಗ್ ಕಾಲೇಜ್ ನಲ್ಲಿ 4,320 ವಿದ್ಯಾರ್ಥಿಗಳಿಗೆ 864 ಅಸಿಸ್ಟೆಂಟ್ ಪ್ರೊಫೆಸರ್, 192 ಅಸೋಸಿಯೇಟ್ ಪ್ರೊಫೆಸರ್, 96 ಪ್ರೊಫೆಸರ್ ಬೇಕು .ಇದು  ಹೇಗೆ  ಸಾಧ್ಯ . ಅಷ್ಟೊಂದು  ಎಂ -ಟೆಕ್, ಪಿ.ಹೆಚ್.ಡಿ ಪಡೆದವರು ಎಲ್ಲಿದ್ದಾರೆ ಇದು ಸರಿಯಲ್ಲ ಸರ್ಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ದಯವಿಟ್ಟು ಈ ಪದ್ಧತಿ ಸರಿ ಪಡಿಸಿ ಎಂದು ಆಗ್ರಹಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಸರ್ಜಿ ಅವರು ಕೇಳಿದ ಪ್ರಶ್ನೆ ವಾಸ್ತಿವಿಕವಾಗಿದೆ, ನಾನು ಒಪ್ಪುತ್ತೇನೆ. ಇತ್ತೀಚಿಗೆ ಮಾನದಂಡಗಳನ್ನು ಎ.ಐ.ಸಿ.ಟಿ.ಇ ಅವರು ಬದಲಾವಣೆ ಮಾಡಿದ್ದಾರೆ. ಹಿಂದೆ 1 : 4 ಇತ್ತು ಅಂದರೆ 4 ಜನ ವಿದ್ಯಾರ್ಥಿಗಳಿಗೆ 1 ಕಂಪ್ಯೂಟರ್ ಇತ್ತು ಈಗ ಬದಲಾವಣೆ  ಮಾಡಿ 1 : 10 ಮಾಡಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಯೋಚನೆ ಮಾಡಿದ್ದೆ. ಯಥೇಚ್ಛವಾಗಿ ಸೀಟುಗಳನ್ನು ತೆಗೆದುಕೊಳ್ಳುವುದಕ್ಕೆ ನಿರ್ಬಂಧ ಹಾಕಬೇಕು ಎಂದು ತೀರ್ಮಾನ ಮಾಡಿದ್ದೇವೆ. ಎಲ್ಲೆಲ್ಲಿ ಸೀಟುಗಳು ಹೆಚ್ಚಿದೆ, ಒಂದು ವಿಷಯಕ್ಕೆ ಹೆಚ್ಚು ಸೀಟುಗಳನ್ನು ತೆಗದುಕೊಳ್ಳುವುದಕ್ಕೆ ಅಲ್ಲೇ ಅದನ್ನು ಸ್ಥಗಿತ ಮಾಡುವ ಕ್ರಮ ಕೈ ಗೊಳ್ಳುತ್ತೇವೆ ಮುಂದಿನ ದಿನಗಳಲ್ಲಿ  ಆದೇಶ ಮಾಡುತ್ತೇವೆ ಎಂದು ಹೇಳಿದರು.

Dr. Sarji makes serious allegations that private universities are swallowing up engineering seats

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close