KSRTC ಬಸ್ ಗಳ ಜಾಹೀರಾತುಗೆ ಕಪ್ಪು ಮಸಿ ಬಳೆದು ಹಿಂದಿನ ನಟರ ಭಾವಚಿತ್ರಗಳಿಗೆ ಚಪ್ಪಲಿಯಲ್ಲಿ ಹೊಡೆದ ಸಂಘಟನೆ-The organization that smeared black ink on KSRTC bus advertisements and defaced the portraits of past actors with slippers

 SUDDILIVE || SHIVAMOGGA

KSRTC ಬಸ್ ಗಳ ಜಾಹೀರಾತುಗೆ ಕಪ್ಪು ಮಸಿ ಬಳೆದು ಹಿಂದಿನ ನಟರ ಭಾವಚಿತ್ರಗಳಿಗೆ ಚಪ್ಪಲಿಯಲ್ಲಿ ಹೊಡೆದ ಸಂಘಟನೆ-The organization that smeared black ink on KSRTC bus advertisements and defaced the portraits of past actors with slippers

KSRTC, Blackink


ಬಾಲಿವುಡ್ ನಟರುಗಳಿರುವ ಹಿಂದಿ ಜಾಹೀರಾತು ಮತ್ತು ಇತರೆ ಚಪ್ಪಲಿ, ಚಡ್ಡಿ, ಬನಿಯನ್ ಗಳ ಜಾಹೀರಾತುಗಳ ವಿರುದ್ದ ಕರ್ನಾಟಕ ರಕ್ಷಣ ವೇದಿಕೆ ಸಿಂಹಸೇನೆ ತಿರುಗಿ ಬಿದ್ದಿದ್ದು ನಗರದ ಬಸ್ ನಿಲ್ದಾಣದಲ್ಲಿ ಸಂಘಟನೆ ರಾಜ್ಯ ರಸ್ತೆ ಸಾರಿಗೆ ಬಸ್ ಗಳಿಗೆ ಕಪ್ಪು ಮಸಿ ಬಳಿದು ಹಿಂದಿ ನಟರ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆದು ಇನ್ನು ಮುಂದೆ ಬಸ್ ಗಳಲ್ಲಿ ಜಿಲ್ಲೆಯ ಪ್ರವಾಸಿ ತಾಣ ಅಥವಾ ಸಾಹಿತಿಗಳ ಫೊಟೊ ಹಾಕುವಂತೆ ಮನವಿ ಸಲ್ಲಿಸಿದೆ. 

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್ಸಿನಲ್ಲಿ ಹಿಂದಿ ನಾಮಫಲಕಗಳು ಮತ್ತು ಕೆಲವು ಜಾಹಿರಾತುಗಳು ರಾರಾಜಿಸುತ್ತಿದ್ದು, ಕರ್ನಾಟಕ ರಾಜ್ಯ ಸರ್ಕಾರ ಈಗಾಗಲೇ ಹೊರಡಿಸಿರುವ ಆದೇಶದ ಪ್ರಕಾರ 60% ಕನ್ನಡ ನಾಮಫಲಕಗಳು ಹಾಗೂ 40% ಆಂಗ್ಲ ಭಾಷೆಗಳನ್ನು ಬಳಸಬೇಕೆಂಬುದು ಈಗಾಗಲೇ ಇದು ಗೊತ್ತಿರುವ ಸಂಸಂಗತಿಯಾಗಿದ್ದರೂ ನಿಗಮದ ಬಸ್ ಗಳಲ್ಲಿ ಸರ್ಕಾರಿ ಆದೇಶ ಪಾಲನೆ ಆಗುತ್ತಿಲ್ಲವೆಂದು ದೂರಲಾಗಿದೆ. 

ಕೂಡಲೇ ರಾಜ್ಯ ಸರ್ಕಾರದ ಸಾರಿಕೆ ಸಚಿವರಾಗಿರುವ ರಾಮಲಿಂಗರೆಡ್ಡಿಯವರು ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕು ಹಿಂದಿ ಭಾಷೆಯ ಚಿತ್ರಗಳನ್ನು ಬಳಸುತ್ತಿದ್ದು ವಿಮಲ್ ಗುಟ್ಕದ ಜಾಹಿರಾತುಗಳು, ಚಪ್ಪಲಿಗಳ ಜಾಹಿರಾತುಗಳು, ಚಡ್ಡಿ ಬನಿಯನ್‌ಗಳ ಜಾಹಿರಾತುಗಳು ಮತ್ತು ಇತರೆ ವಸ್ತುಗಳ ಜಾಹಿರಾತುಗಳುನ್ನು ಹಾಕುವುದನ್ನು ತತಕ್ಷಣದಲ್ಲಿ ನಿಲ್ಲಿಸಬೇಕೆಂದು ಕ.ರಾ.ವೇ ಸಿಂಹ ಸೇನೆ ಆಗ್ರಹಿಸಿದೆ. 


ಇದರೆಲ್ಲದರ ಬದಲಾಗಿ ರಾಜ್ಯದ ಪ್ರತಿ ಜಿಲ್ಲೆಯ ಪ್ರವಾಸಿ ತಾಣಗಳನ್ನು ಬಿಂಬಿಸುವ ಚಿತ್ರಗಳನ್ನು, ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಸೇರಿಸುವಂತೆ ಪೋಷಕರಲ್ಲಿ ಉತ್ತೇಜಿಸುವ ಚಿತ್ರಗಳನ್ನು ಹಾಕಲು ಮತ್ತು ದೇಶದ ಸೈನಿಕರ ಮತ್ತು ವೀರರ ದೇಶ ಪ್ರೇಮಿಗಳ ಭಾವಚಿತ್ರಗಳನ್ನು ಅವರ ಇತಿಹಾಸಗಳೊಂದಿಗೆ ಹಾಕಬೇಕಾಗಿ ಪ್ರತಿಭಟನಾಕಾರರು ವಿನಂತಿಸಿರುತ್ತಾರೆ. 

ಕರವೇ ಸಿಂಹ ಸೇನೆಯ ರಾಜ್ಯಾಧ್ಯಕ್ಷರಾದ ರವಿಪ್ರಸಾದ್ ಎಂ. ಜಿಲ್ಲಾ ಅಧ್ಯಕ್ಷರಾದ ಮಧುಸುದನ್ ಎಸ್.ಎಂ, ಜಿಲ್ಲಾ ಉಪಾಧ್ಯಕ್ಷರಾದ ನಯಾಜ್ ಎಂ, ನಗರ ಘಟಕ ಅಧ್ಯಕ್ಷರಾದ ಕಾರ್ತಿಕ್ ಆರ್. ಪೂಜಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಭಿಜಿತ್ ನವುಲೆ,ಕಾರ್ಯದರ್ಶಿ ನೂರುಲ್ಲಾ, ಪ್ರಶಾಂತ ರೆಡ್ಡಿ ಪಿ.ಆರ್. ರಾಘವೇಂದ್ರ ಕೆ. ನಗರ ಘಟಕದ ಸಂಘಟನಾ ಕಾರ್ಯದರ್ಶಿ, ವಿನಯ ಕುಮಾರ್ ಜೆ. ಸುರೇಶ್, ಶರತ್, ಸುರಜ್, ಅರುಣ್, ವೆಂಕಟೇಶ್, ಮುಕುಂದ ಕುಮಾರ್, ವೆಂಕಟೇಶ್, ಮಧು, ಶಶಿ, ಲಿಂಗರ್ಲ್ಸ್ ಮಟ್ಟು ರವಿಕುಮಾರ, ಜಿ. ಭರತ, ಕೋಟಿಲೋ, ಮೊದಲಾದವರು ಉಪಸ್ಥಿತರಿದ್ದರು. 

The organization that smeared black ink on KSRTC bus advertisements and defaced the portraits of past actors with slippers

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close