ಧುರಂದರ ಪಾಕ್ ನಲ್ಲಿ ನಡೆಯುವ ಪರಮಪಾಪಿಗಳ ನೈಜಕಥೆ, ಭಾರತದಲ್ಲಿ ಗಮನಸೆಳೆದಿದ್ದು ಹೇಗೆ? How did the true story of the ultimate sinners, set in Dhurandara Pak, gain attention in India

 SUDDILIVE || SHIVAMOGGA

ಧುರಂದರ ಪಾಕ್ ನಲ್ಲಿ ನಡೆಯುವ ಪರಮಪಾಪಿಗಳ ನೈಜಕಥೆ, ಭಾರತದಲ್ಲಿ ಗಮನಸೆಳೆದಿದ್ದು ಹೇಗೆ?How did the true story of the ultimate sinners, set in Dhurandara Pak, gain attention in India?


Dhurundara, cinema

ಶ್ರೇಷ್ಠ ವ್ಯಕ್ತಿ, ಶಿವನ ಮತ್ತೊಂದು ಹೆಸರು ಧುರಂದರ, ಆಪರೇಷನ್ ಧುರಂದರ ಹೆಸರಿನಲ್ಲಿ ಪಾಕಿಸ್ತಾನದ ಐಎಸ್ಐ ಮತ್ತು ಗ್ಯಾಂಗ್ ಸ್ಟರ್ ನಡುವಿನ ನಂಟನ್ನ ಒಡೆದುಹಾಕಿ ಇವರು ಭಾರತದ ಕಡೆ ತಿರುಗಿ ನೋಡದಂತೆ ನಡೆಯುವುದೇ ದುರಂದರ ಸಿನಿಮಾದ ಉದ್ದೇಶವಾಗಿದೆ. ಹಿಂದಿ ಸಿನಿಮಾ ಪಾಕ್ ನಲ್ಲಿ ನಡೆದ ನೈಜಕಥೆಯನ್ನ ಹೆಣೆದು ಸಿನಿಮಾ ಮಾಡಲಾಗಿದೆ. 

ಕಾಂದಹಾರ್ ವಿಮಾನ ಹಾರಾಟವಮ್ನ ಉಗ್ರರು ಹೈಜ್ಯಾಕ್ ಮಾಡಿಕೊಂಡು ಹೋದ ಮೇಲೆ ಪಾಕಿಸ್ತಾನದ ಐಎಸ್ಐ ಗೆ ಬುದ್ದಿಕಲಿಸಲು ಹೊರಟ ಭಾರತ ಆಯ್ಕೆ ಮಾಡಿಕೊಂಡ ಯೋಧನೇ ದುರಂಧರ. ಅಫಘಾನ್ ಮೂಲಕ ಪಾಕ್ ನೊಳಗೆ ಹೋಗಿ ಪಾಕ್ ನ ಗ್ಯಾಂಗ್ ಸ್ಟರ್ ನಲ್ಲಿ ಸೇರಿಕೋಂಡು ಪಾಕ್ ನ ಐಎಸ್ಐ ಗಳ ಚಟುವಟಿಕೆಯನ್ನ ಭಾರತಕ್ಕೆ ರವಾನಿಸುವುದೇ ದುರಂದರನ ಕೆಲಸ ಅದನ್ನ ಹೇಗೆ ಮಾಡ್ತಾನೆ ಎಂಬುದನ್ನ ಸಿನಿಮಾ ನೋಡಬೇಕಾಗುತ್ತದೆ.

ಗಮನ ಸೆಳೆಯುವ ರೆಹಮಾನ್ ಡೆಕಾಯಿತಿ

ದಿಗ್ದರ್ಶಕ ಆದಿತ್ಯ ಧರ್ ಅವರು ಇವರ ನಿಜ ಜೀವನವನ್ನು ಸಿನೆಮಾಕ್ಕೋಸ್ಕರ ‘ಸಿನಿಮ್ಯಾಟಿಕ್ ಟೆನ್ಷನ್ ಜತೆ ಜೋಡಿಸಿ ಪರದೆಗೆ ತಂದಿದ್ದಾರೆ. ಅಕ್ಷಯ್ ಖನ್ನಾ ಧುರಂಧರದಲ್ಲಿ ರೆಹಮಾನ್ ಡಕಾಯಿತ್ ಪಾತ್ರವನ್ನು ಜೀವಂತಗೊಳಿಸಿದ್ದರೆ, ಡ್ಯಾನಿಶ್ ಪಾಂಡೋರ್ ಉಜೈರ್ ಬಲೂಚ್ ಪಾತ್ರದಲ್ಲಿ ಪ್ರಬಲವಾಗಿ ಕಾಣಿಸಿಕೊಂಡಿದ್ದಾರೆ.

ತಂದೆಯ ಸಾವಿಗೆ ಪ್ರತಿಕಾರ

1970 ಜನವರಿ 11ರಂದು ಕರಾಚಿಯ ಲಿಯಾರಿಯಲ್ಲಿ ಜನಿಸಿದ ಉಜೈರ್ ಬಲೂಚ್, ಸಾಗಣೆದಾರ ಫೈಜ್ ಮುಹಮ್ಮದ್ ಅವರ ಪುತ್ರ. ರಾಜಕೀಯಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಕಾಲಿಟ್ಟರೂ, ಅವನ ಜೀವನ ತಿರುವು ಪಡೆದದ್ದು 2003ರಲ್ಲಿ ಅವನ ತಂದೆಯ ಹತ್ಯೆಯ ಬಳಿಕ. ಲಿಯಾರಿ ಡ್ರಗ್ ಲಾರ್ಡ್ ಹಾಜಿ ಲಾಲು ಅವರ ಮಗ ಅರ್ಷದ್ ಪಪ್ಪು ಉಜೈರ್ ತಂದೆಯನ್ನು ಕ್ರೂರವಾಗಿ ಹತ್ಯೆ ಮಾಡಿದನು. ತಂದೆಯ ಸಾವಿಗೆ ಪ್ರತೀಕಾರ ತೀರಿಸಲು, ಉಜೈರ್ ತನ್ನ ಸೋದರಸಂಬಂಧಿ ರೆಹಮಾನ್ ಡಕಾಯಿತ್ ನೇತೃತ್ವದ ಗ್ಯಾಂಗ್‌ಗೆ ಸೇರಿಕೊಂಡನು. ನಂತರ ಆತ ಲಿಯಾರಿಯ ಅಂಡರ್ವರ್ಲ್ಡ್‌ನ ಪ್ರಮುಖ ಮುಖವೀರನಾಗಿ ಹೊರಹೊಮ್ಮಿದ. ಇಂದಿಗೂ ಉಜೈರ್ ಬಲೂಚ್ ಪಾಕಿಸ್ತಾನದ ಪೊಲೀಸ್ ವಶದಲ್ಲಿದ್ದಾನೆ ಮತ್ತು ಅನೇಕ ಕೊಲೆ, ದರೋಡೆ, ಅಪಹರಣ, ದಂಧೆ ಪ್ರಕರಣಗಳಲ್ಲಿ ಆರೋಪಿತ.

ಪರಮ ಪೌರಾಣಿಕನಾಗಿ ಉಳಿದ ವ್ಯಕ್ತಿ ರೆಹಮಾನ್

ಅಬ್ದುಲ್ ರೆಹಮಾನ್ ಬಲೂಚ್, ಲಿಯಾರಿಯ ಭೂಗತ ಜಗತ್ತಿನ ಅತ್ಯಂತ ಭಯಾನಕ, ದಿಟ್ಟ ಮತ್ತು ಕ್ರೂರ ಗ್ಯಾಂಗ್ ಲೀಡರ್. ಪೀಪಲ್ಸ್ ಅಮನ್ ಕಮಿಟಿ ಸ್ಥಾಪಿಸಿ, ಕರಾಚಿಯ ದೊಡ್ಡ ಭಾಗವನ್ನು ತನ್ನ ನಿಯಂತ್ರಣಕ್ಕೆ ತಂದು ಲಿಯಾರಿ ಕಿಂಗ್ ಆಗಿದ್ದನು. ಡಕಾಯಿತ್‌ನ ಗುಂಪು ಪಾಕಿಸ್ತಾನದ ರಾಜಕೀಯ, ಕಾನೂನು ವ್ಯವಸ್ಥೆ, ಭ್ರಷ್ಟ ಪೊಲೀಸ್ ಅಧಿಕಾರಿಗಳ ಜೊತೆಗೂ ಡೀಪ್ ನೆಟ್‌ವರ್ಕ್ ಹೊಂದಿತ್ತು. ಅವನ ಹೆಸರು ಕರಾಚಿಯ ಸಾಮಾನ್ಯ ನಾಗರಿಕರಿಗೂ ಭೀತಿಯ ಪದ. ಉಜೈರ್ ಬಲೂಚ್ ಅವನ ಸೋದರ ಸಂಬಂಧಿ. ಈ ಇಬ್ಬರು ಸೇರಿ ಕರಾಚಿಯಲ್ಲಿ ಅಳವಡಿಸಿದ ಭೂಗತ ಸಾಮ್ರಾಜ್ಯವೇ ಈಗ “ಧುರಂಧರ” ಚಿತ್ರದ ಪ್ರಮುಖ ಹಿನ್ನಲೆ. ರೆಹಮಾನ್ ಡಕಾಯಿತ್ 2009ರಲ್ಲಿ ಪಾಕಿಸ್ತಾನಿ ಪೊಲೀಸರ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ. ಆದರೆ ಅವನ ಕಥೆ ಪಾಕಿಸ್ತಾನದ ಡಾನ್ ಕಲ್ಚರ್‌ನಲ್ಲಿ “ಪರಮಪೌರಾಣಿಕ ವ್ಯಕ್ತಿ” ಆಗಿಯೇ ಉಳಿದಿದೆ.

ಚಿತ್ರ ಬಿಡುಗಡೆಯಾದ ದಿನದಿಂದಲೇ ಪ್ರೇಕ್ಷಕರು ಯಾರು ಈ ರೆಹಮಾನ್ ಡಕಾಯಿತ್?, ಇವನು ನಿಜವಾಗಿ ಅಷ್ಟು ಭಯಂಕರನಾ? ಎಂದು ಗೂಗಲ್‌ನಲ್ಲಿ ಹುಡುಕಾಟ ಶುರು ಮಾಡಿದ್ದರು. ಚಿತ್ರದಲ್ಲಿ ಅಕ್ಷಯ್ ಖನ್ನಾ ನೀಡಿರುವ ಭೀತಿಕರ ಅಭಿನಯ ಈ ಪಾತ್ರದ ಬಗ್ಗೆ ಕುತೂಹಲವನ್ನು ದ್ವಿಗುಣಗೊಳಿಸಿದೆ.

ಗಮನ ಸೆಳೆದ ಅಕ್ಷಯ್ ಖನ್ನಾ

ಆಕ್ಚನ್ ಹೀರೋ ಆಗಿ ರಣ್ಬೀರ್ ಸಿಂಗ್, ಅರ್ಜುನ್ ರಾಮ್ ಪಾಲ್, ಅಕ್ಷಯ್ ಖನ್ನಾ, ಆರ್ ಮಾಧವನ್, ಸಂಜಯ್ ದತ್, ಸಾರಾ ಅರ್ಜುನ್, ರಾಕೇಶ್ ಬೇಡಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ತಾರೆ.
ರೆಹಮಾನ್ ಡಕಾಯಿತಿ ಪಾತ್ರದಲ್ಲಿ  ಅಕ್ಷಯ್ ಖನ್ನಾ...
ಧುರಂಧರ್ ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಹೀರೋಗಿಂತ ವಿಲನ್ ಆಗಿರುವ ಅಕ್ಷಯ್ ಖನ್ನಾ ಡಕಾಯಿತಿ ಪಾತ್ರಕ್ಕೆ ಭರ್ಜರಿ ಜೀವ ತುಂಬಿ ಪ್ರೇಕ್ಷಕರನ್ನ ಗಮನ ಸೆಳೆದಿದ್ದಾರೆ.

ಒಂದು ಕಾಲದಲ್ಲಿ ಕರಾಚಿಯ ಲಿಯಾರಿ‌ ಸೇರಿದಂತೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯವನ್ನು ತನ್ನ ಕಪಿಮುಷ್ಠಿಯೊಳಗಿಟ್ಟುಕೊಂಡು ಸಾರ್ವಭೌಮನಂತೆ ಮೆರೆದಿದ್ದ ನರರಾಕ್ಷಸ ರೆಹಮಾನ್ ಡಕಾಯಿತ್ ಎಂಬ ಪರಮಪಾಪಿಯೊಬ್ವನ ಪಾತ್ರದಲ್ಲಿ ಅದ್ಯಾವ್ ರೇಂಜಿಗೆ ಪಾತ್ರವೇ ಅಕ್ಷಯ್ ಆಗಿದ್ದಾರೆ, ಇಡೀ ಮೂವಿಯ ಪಾತ್ರಗಳೆಲ್ಲಾ ಒಂದ್ಕಡೆ ಇದ್ರೆ,
ಈ ಮೂವೀಲಿ ತನ್ನ ಲುಕ್, ನಗು, ಡೈಲಾಗ್ ಡೆಲಿವರಿಗಳಿಂದ
ಈ ಅಕ್ಷಯ್ ಖನ್ನಾ ಒಬ್ಬರೆ ಮತ್ತೊಂದ್ಕಡೆ ಒಂದ್ ಮುಷ್ಠಿ ಹೆಚ್ಚಿಗೇ ತೂಗ್ತಿರ್ತಾನೆ.

ನೋಡಿ ಒಮ್ಮೆ...
ಧುರಂಧರ್ ನೋಡಿ ಬಂದು ದಿನವಾದ್ಮೇಲೂ ಇವ್ರೆಲ್ಲಾ ಕಾಡದಿದ್ರೆ ಹೇಳಿ.

How did the true story of the ultimate sinners, set in Dhurandara Pak, gain attention in India?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close