Rapido ಗೆ ಬ್ರೇಕ್ ಹಾಕಲು ಸೂಚನೆ, ಆಟೋಗಳ ದಾಖಲಾತಿಗಳನ್ನ ಸರಿಯಾಗಿ ಇಟ್ಟುಕೊಳ್ಳಲು ಸೂಚನೆ- Instructions to brakes to Rapido, instructions to maintain proper records of autos

 SUDDILIVE || SHIVAMOGGA

Rapido ಗೆ ಬ್ರೇಕ್ ಹಾಕಲು ಸೂಚನೆ, ಆಟೋಗಳ ದಾಖಲಾತಿಗಳನ್ನ ಸರಿಯಾಗಿ ಇಟ್ಟುಕೊಳ್ಳಲು ಸೂಚನೆ-Instructions to brakes to Rapido, instructions to maintain proper records of autos

Rapido, brakes

ಇಂದು ಮಧ್ಯಾಹ್ನ  01-30 ಗಂಟೆಗೆ ಶಿವಮೊಗ್ಗ ಸಂಚಾರ ವೃತ್ತ ಕಛೇರಿಯಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಮತ್ತು ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಇಲಾಖೆಯು (RTO) ಜಂಟಿಯಾಗಿ ಆಟೋ ಚಾಲಕರ ಮತ್ತು   Rapido ಬೈಕ್ ಟ್ಯಾಕ್ಸಿ  ಸವಾರರ ಸಭೆ ನಡೆದಿದೆ. ಸಭೆಯಲ್ಲಿ ಮಹತ್ತರ ನಿರ್ಧಾರ ಕೈಗೊಳ್ಳಲಾಗಿದೆ.  

ಸಭೆಯಲ್ಲಿ ಕುರಿತು ಈ ಕೆಳಕಂಡಂತೆ ನಿರ್ಧಾರ ಕೈಕೊಳ್ಳಲಾಗಿದೆ.1. Rapido ಬೈಕ್ ಟ್ಯಾಕ್ಸಿ  ಸವಾರರು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶವನ್ನು  ಕಡ್ಡಾಯವಾಗಿ ಪಾಲನೆ  ಮಾಡಬೇಕು. ನ್ಯಾಯಾಲಯದ ಆದೇಶದ ಪ್ರಕಾರ ರ‌್ಯಾಪಿಡೋ ರಸ್ತೆಗೆ ಇಳಿಸುವಂತಿಲ್ಲ. 

2. ಆಟೋ ಚಾಲಕರು ತಮ್ಮ ವಾಹನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಚಾಲ್ತಿಯಲ್ಲಿ  ಇರುವಂತೆ ನೋಡಿಕೊಳ್ಳಬೇಕು. 3. ಶಿವಮೊಗ್ಗ ನಗರದಲ್ಲಿ ಬಾಡಿಗೆ ಮಾಡುತ್ತಿರುವ ಕೆಲವು ಆಟೋ ರಿಕ್ಷಾಗಳ ಎಫ್.ಸಿ ಅವಧಿ ಮುಕ್ತಾಯವಾಗಿದ್ದು, ಶೀಘ್ರವಾಗಿ RTO ಕಛೇರಿಗೆ ಬೇಟಿ ನೀಡಿ ತಮ್ಮ ಆಟೋ ರಿಕ್ಷಾಗಳ    ಎಫ್,ಸಿ  ನವೀಕರಣ ಮಾಡಿಸಿಕೊಳ್ಳುವುದು.

4. ಕಡ್ಡಾಯವಾಗಿ ರಸ್ತೆ ಸಂಚಾರ ನಿಯಮಗಳನ್ನು ಪಾಲನೆ ಮಾಡುವಂತೆ ಸೂಚಿಸಲಾಯಿತು. ಸಭೆಯಲ್ಲಿ, ಶ್ರೀ ಸಂಜೀವ್ ಕುಮಾರ್ ಮಾನ್ಯ ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಬಿ ಉಪವಿಭಾಗ, ಶ್ರೀ ಮುರಗೇಂದ್ರ ಬಿ ಶಿರೋಳ್ಕರ್, ಕಾರ್ಯದರ್ಶಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಶಿವಮೊಗ್ಗ, ಶ್ರೀ ದೇವರಾಜ್, ಸಿಪಿಐ ಶಿವಮೊಗ್ಗ ಸಂಚಾರ ವೃತ್ತ,  ಶ್ರೀಮತಿ ಸ್ವಪ್ನಾ.ಎಲ್ ಪಿಎಸ್ಐ ಪಶ್ಚಿಮ ಸಂಚಾರ ಪೊಲೀಸ್ ಠಾಣೆ, ಶ್ರೀ ಅಕ್ಬರ್ ಮುಲ್ಲಾ ಪಿಎಸ್ಐ, ಪೂರ್ವ ಸಂಚಾರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯವರು ಉಪಸ್ಥತರಿದ್ದರು.

Instructions to brakes to Rapido, instructions to maintain proper records of autos

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close