ಆತ್ಮಹತ್ಯೆಯ ಹಾಟ್ ಸ್ಪಾಟ್ ಆಗುತ್ತಿದೆಯಾ ಸಿಗಂದೂರು ಸೇತುವೆ, ಇಂಜಿನಿಯರ್ ಮತ್ತು ಪೊಲೀಸರ ಕಾರ್ಯಕ್ಕೆ ಶ್ಲಾಘನೀಯ ಮಹಾಪೂರ-Is Sigandur Bridge becoming a suicide hotspot

 SUDDILIVE || SAGARA

ಆತ್ಮಹತ್ಯೆಯ ಹಾಟ್ ಸ್ಪಾಟ್ ಆಗುತ್ತಿದೆಯಾ ಸಿಗಂದೂರು ಸೇತುವೆ, ಇಂಜಿನಿಯರ್ ಮತ್ತು ಪೊಲೀಸರ ಕಾರ್ಯಕ್ಕೆ ಶ್ಲಾಘನೀಯ ಮಹಾಪೂರ-Is Sigandur Bridge becoming a suicide hotspot? The work of the engineers and police is commendable

Siganduru, bridge
ಆಂಜನೇಯ                       ಇಂಜಿನೀಯರ್ ರಂಜೇಶ್ 


ಸಿಗಂದೂರು ಸೇತುವೆ ಮೇಲಿಂದ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನ ಸೇತುವೆ ಇಂಜಿನಿಯರ್ ಹಾಗೂ 112 ಪೊಲಿಸರ ಸಮಯಪ್ರಜ್ಞೆಯಿಂದ ಜೀವ ಉಳಿಸಿದ್ದಾರೆ. 

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರಿನ ಸೇತುವೆಯಲ್ಲಿ  ಮೈಸೂರು ಮೂಲದ ಆಂಜನೇಯ ಎಂಬುವರು ಆತ್ಮಹತ್ಯೆಗೆ ಯತ್ನಿಸಿದ್ದು ಇಂಜಿನಿಯರ್ ಹಾಗೂ ಪೊಲೀಸರ ಸಮಯಪ್ರಜ್ಞೆಯಿಂದ ಲೆಕ್ಕಪರಿಶೋಧಕ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆಂಜನೇಯರ ಜೀವ ಉಳಿದಿದೆ. 

ಸುಂದರವಾದ ಶರಾವತಿ ಹಿನ್ನೀರಿಗೆ ಸೇತುವೆ ಕಟ್ಟಿ ಇಲ್ಲಿನ ದ್ವೀಪದ ಜನರ ಬದಕನ್ನ ಉಳಿಸುವ ಕೆಲಸ ಒಂದು ಕಡೆ ನಡೆದರೆ ಮತ್ತೊಂದು ಕಡೆ ಅದೇ ಜೀವನಾಡಿಯಾದ ಶರಾವತಿ ಹಿನ್ನೀರಿನ ಸೇತುವೆಯಿಂದ ಆತ್ಮಹತ್ಯೆಗೆ ಯತ್ನ ನಡೆಯುತ್ತಿರುವುದು ದುಖಕರವಾದ ಸಂಗತಿಯಾಗಿದೆ. ಆಂಜನೇಯ ವಯಕ್ತಿಕ ವಿಚಾರಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. 


ಈವೇಳೆ ಗಮನಿಸಿದ ಸೇತುವೆ ಇಂಜಿನಿಯರ್ ರಂಜೆಶ್ ಕುಮಾರ್ ಆಂಜನೇಯರನ್ನ ತಡೆದು ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನ ತಪ್ಪಿಸಲು ಯತ್ನಿಸಿದ್ದಾರೆ. ತಕ್ಷಣವೇ  112 ಪೊಲೀಸರಿಗೆ ಕರೆಮಾಡಿದ್ದಾರೆ. ಪೊಲೀಸರು ಬರುವವರೆಗೂ ಅಂಜನೇಯನನ್ನು ಮನವಲಿಸಲು ರಂಜೇಶ್ ಯತ್ನಿಸಿದ್ದಾರೆ.

ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಆಂಜನೇಯ ನ್ನು ರಕ್ಷಣೆ ಮಾಡಲಾಗಿದ್ದರೂ ಆಂಜನೇಯ ನೀವು ನನ್ನನ್ನ ಸಾವಿನಿಂದ ಬಜಾಬ್ ಮಾಡಲು ಸಾಧ್ಯವಿಲ್ಲ ಕಾರಣ ನಾನು ಸ್ಲೀಪಿಂಗ್ ಟಾಬ್ಲೆಟ್ ತೆಗೆದುಕೊಂಡಿರುವುದಾಗಿ ಹೇಳಿದ್ದಾನೆ. ಇಷ್ಟಕ್ಕೆ ಕೈಬಿಡದ ಪೊಲೀಸರು 

ತಕ್ಷಣವೇ ಅಸ್ಪತ್ರೆಗೆ ಸೇರಿದ ಬ್ಯಾಕೋಡಿನ ಆಂಬುಲೆಸ್ಸ್  ಚಾಲಕ ರುದ್ರೇಶ್ ನಿಗೆ ಕರೆದು ಆಂಜನೇಯಙ್ನ‌ಸಾಗರ ಆಸ್ಪತ್ರೆಗೆ ಸಾಗಿಸಿದ್ದಾರೆ. ಸಾಗರದ ಉಪವಿಭಾಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸಧ್ಯಕ್ಕೆ ಆಂಜನೇಯ ಬದುಕುಳಿದಿದ್ದಾರೆ ರಂಜೇಶ್ ಕುಮಾರ್ ಹಾಗೂ ಪೊಲೀಸರಾದ ಎ ಎಸ್ ಐ ರಾಜೇಶ್‌ , ಗಿರೀಶ್ ಶೆಟ್ಟಿ ಕಾರ್ಯಕ್ಕೆ ಶ್ಲಾಘನೆಯ ಮಹಾಪೂರ ಹರಿದು ಬಂದಿದೆ. 

Is Sigandur Bridge becoming a suicide hotspot    

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close