ನಿಗದಿತ ಸಮಯದಲ್ಲಿ ಮನೆ ಮತ್ತು‌ ಮಳಿಗೆ ಹಂಚದಿದ್ದರೆ ಪಾಲಿಕೆಗೆ ಮುತ್ತಿಗೆ-ಕಾಂತೇಶ್ ಎಚ್ಚರಿಕೆ-Kantesh warns of siege on the corporation

 SUDDILIVE || SHIVAMOGGA

ನಿಗದಿತ ಸಮಯದಲ್ಲಿ ಮನೆ ಮತ್ತು‌ ಮಳಿಗೆ ಹಂಚದಿದ್ದರೆ ಪಾಲಿಕೆಗೆ ಮುತ್ತಿಗೆ-ಕಾಂತೇಶ್ ಎಚ್ಚರಿಕೆ-Kantesh warns of siege on the corporation if houses and shops are not allotted within the stipulated time

Kantesh, warns

ಪಾಲಿಕೆ ಬಡವರ ಪಾಲಿನ ನರಕವಾಗಿದೆ ಮತ್ತು ಭ್ರಷ್ಠಾಚಾರದ ಬ್ರಹ್ಮಾಂಡವಾಗಿದೆ ಎಂದು ರಾಷ್ಟ್ರಭಕ್ತರ ಬಳದ ಕೆ.ಈ‌.ಕಾಂತೇಶ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುಮಹಡಿ ಕಟ್ಟಡದಲ್ಲಿ 118 ಮಳಿಗೆಗಳಿವೆ. ಕಟ್ಟಿ ಎರಡು ವರ್ಷಗಳಾಗಿವೆ. ಪ್ರತಿತಿಂಗಳು ಒಂದು ಮಳಿಗೆಗೆ 5ಸಾವಿರ ರೂ ಹಣ ಬಾಡಿಗೆಗೆ ನಿಗದಿ ಪಡಿಸಿ ಹಂಚಿದ್ದರು 1,41,60,000  ಬಾಡಿಗೆ ಬರಬೇಕಿತ್ತು. ಮುಂಗಡಪಾವತಿ 23 ತಿಂಗಳಿಗೆ ಎಂದು ಕಟ್ಟಿಸಿಕೊಂಡಿದ್ದರೂ 1,35,70,000 ಆಗಬೇಕಿತ್ತು. ಬಂದಿಲ್ಲ.

ಗೌರವ ಲಾಡ್ಜ್  ಬಳಿಯಿರುವ ಪಾಲಿಕೆಯ ಚಾಣಿಜ್ಯ ಸಂಕೀರ್ಣದಲ್ಲಿ 98 ಮಳಿಗೆ ಇದೆ. ಐದು ವರ್ಷವಾಗಿದೆ ಪಾಲಿಕೆಗೆ ಹಸ್ತಾಂತರವಾಗಿ, ಆದರೆ ಒಂದು ಮಳಿಗೆಯೂ ಹಂಚಿಕೆಯಾಗಿಲ್ಲ. ಐದು ವರ್ಷದಲ್ಲಿ ಬಾಡಿಗೆ ಹಂಚಿದರೆ 5 ಕೋಟಿಗೂ ಹೆಚ್ಚು ಹಣ ಬಾಡಿಗೆ ರೂಪದಲ್ಲಿ ಬರಬೇಕಿತ್ತು. ಬಂದಿಲ್ಲ.  ಗಾಂಧಿನಗರದಲ್ಲಿ 13 ವಾಣಿಜ್ಯಸಂಕೀರ್ಣವಿದೆ.  ಬಾಡಿಗೆ ನೀಡಿದ್ದರೆ  ಇದುವರೆಗೂ 11 ಕೋಟಿ 11 ಲಕ್ಷ ರೂ ಸಂಗ್ರಹಿಸಬಹುದಿತ್ತು. ಆದರೆ ಪಾಲಿಕೆಗೆ ಆಸಕ್ತಿಯೇ ಇಲ್ಲವೆಂದು ಆರೋಪಿಸಿದರು. 

ಇಷ್ಟು ಮಳಿಗೆ ಬಾಡಿಗೆ ಕೊಟ್ಟಿದ್ದರೆ 500 ಕುಟುಂಬಗಳು ಬದುಕುತ್ತಿದ್ದವು. ಪಾಲಿಕೆ ಆಯುಕ್ತರಿಗೆ ಏಜೆಂಟರ ಮುಖಾಂತರ ಇ-ಸ್ವತ್ತು ಮಾಡುವುದರಲ್ಲಿ ಬಿಸಿ ಇದ್ದಾರೆ. ಬಡವ ಇ-ಸ್ವತ್ತಿಗೆ 60 ಸಾವಿರ ಲಂಚ ನೀಡಬೇಕಿದೆ. ಜಿಲ್ಲಾಧಿಕಾರಿಗಳ ಆಟದ ಮೈದಾನದ ಬಗ್ಗೆ ಪಾಲಿಕೆ ನವೆಂಬರ್ ಒಳಗೆ ವರದಿ ನೀಡಬೇಕೆಂದು ಸಮಯ ನಿಗದಿ ಪಡಿಸಿದರೂ ಯಾವುದೇ ವರದಿಯನ್ನ‌ನ್ಯಾಯಾಲಯಕ್ಕೆ ನೀಡಿಲ್ಲ ಎಂದು ದೂರಿದರು. 

ಆಶ್ರಯ ಮನೆಗಳ ಹಂಚಿಕೆಯಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ವಸತಿ ಸಚಿವರು ಯಾವ ಮನೆಯನ್ನ‌ ಹಂಚದೆ ಭಾಷಣ ಮಾಡುತ್ತಿದ್ದಾರೆ ವಿನಃ ಮನೆಯನ್ನ‌ಬಡವರಿಗೆ ನೀಡದೆ ಕಾಲಹರಣ ಮಾಡುತ್ತಿದ್ದಾರೆ. ಪಾಲಿಕೆ ಆಯುಕ್ತರಿಗೆ ಏಜೆಂಟರನ್ನ ಅವಲಂಬಿಸಿದ ಕಾರಣ ಬಡವರಿಗೆ ಯಾವುದೇ ಯೋಜನೆ ಹಂಚಿಕೆಯಾಗುತ್ತಿಲ್ಲ. ಹಾಗಾಗಿ 15-20 ದಿನದ ಒಳಗೆ ಎಲ್ಲಾ ವಾರ್ಡ್ ನಲ್ಲಿ ಸಂಚರಿಸಿ ಅಧಿಕಾರಿಗಳಿಗೆ ಸಮಯ ನಿಗದಿ ಪಡಿಸುತ್ತೇವೆ. ನಿಗದಿತ ಸಮಯದಲ್ಲಿ ಮನೆ ಮತ್ತು ಮಳಿಗೆ ಹಂಚಿಜೆಯಾಗದಿದ್ದರೆ ಜ.2 ರಂದು ಪಾಲಿಕೆ ಮುತ್ತಿಗೆ ಮತ್ತು ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಸಿದ್ದಾರೆ. 

ಡಿ.16 ರಂದು ಸಾರ್ವಜನಿಕ ಪಡಿಪೂಜೆ ಹಾಗೂ ಶಕ್ತಿಪೂಜೆ ಕಾರ್ಯಕ್ರಮ ನಡೆಯಲಿದ್ದು, ವಿನೋಬ ನಗರದ ಶುಭಮಂಗಳದಲ್ಲಿ ಸಮುದಾಯ ಭವನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದರು. 

Kantesh warns of siege on the corporation

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close