ಚಿರತೆ ದಾಳಿ , ಸಿಸಿಟಿವಿಯಲ್ಲಿ ಚಿರತೆ ಓಡಾಟದ ದೃಶ್ಯ ಸೆರೆ -ಗ್ರಾಮಸ್ಥರಲ್ಲಿ ಮೂಡಿದ ಆತಂಕ-Leopard attack, CCTV footage of leopard running captured - panic among villagers

SUDDILIVE || HOSANAGARA

ಚಿರತೆ ದಾಳಿ , ಸಿಸಿಟಿವಿಯಲ್ಲಿ ಚಿರತೆ ಓಡಾಟದ ದೃಶ್ಯ ಸೆರೆ -ಗ್ರಾಮಸ್ಥರಲ್ಲಿ ಮೂಡಿದ ಆತಂಕ-Leopard attack, CCTV footage of leopard running captured - panic among villagers    

Leopard, attack


ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹಾರೋಹಿತ್ಲು ಗ್ರಾಮದ ಕೊಳವಂಕ ಸಮೀಪದ ಕಂಬತ್ಮನೆಯಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು ನಾಯಿಯ ಮೇಲೆ ದಾಳಿ ನಡೆಸಿದೆ. ನಾಯಿ ದಾಳಿಯ ಹಿಂದೆ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. 

ರಿಪ್ಪನ್ ಪೇಟೆ ಸಮೀಪದ ಅರಸಾಳು ಗ್ರಾಮ ಪಂಚಾಯಿತಿಯ ಹಾರೋಹಿತ್ತಲು ಗ್ರಾಮದಲ್ಲಿ ಚಿರತೆಯೊಂದು ಮನೆಯ ಅಂಗಳಕ್ಕೆ ನುಗ್ಗಿ ನಾಯಿಯ ಮೇಲೆ ದಾಳಿ ನಡೆಸಿದೆ. ಹಾರೋಹಿತ್ತಲು ಗ್ರಾಮದ ವಾಸುದೇವ ಎಂಬುವವರ ಮನೆ ಅಂಗಳದಲ್ಲಿ ಚಿರತೆ ಒಡಾಡಿದೆ. ಈ ದೃಶ್ಯ ಭಾನುವಾರ ಬೆಳಗ್ಗೆ ಸುಮಾರು 3.45ರ ಸುಮಾರಿಗೆ  ಸಿಸಿಟಿವಿಯಲ್ಲಿ ಸೆರೆಯಾಗಿದೆ. 


ಚಿರತೆ ಮನೆಯಲ್ಲಿದ್ದ ಸಾಕು ನಾಯಿಯ ಮೇಲೆ ದಾಳಿ ನಡೆಸಿದೆ. ದಾಳಿಯ ವೇಳೆ ನಾಯಿ ತಪ್ಪಿಸಿಕೊಂಡಿದೆ ಎನ್ನಲಾಗಿದೆ.ಬೆಳಿಗ್ಗೆ ನಾಯಿಯ ಸ್ಥಿತಿಯನ್ನು ಗಮನಿಸಿ ಅನುಮಾನಗೊಂಡ ಮಾಲೀಕರು ಸಿಸಿಟಿವಿ ಪರಿಶೀಲನೆ ನಡೆಸಿದಾಗ ಚಿರತೆ ಓಡಾಟದ ದೃಶ್ಯ ಬಹಿರಂಗಗೊಂಡಿದೆ. 

ಈ ಘಟನೆಯಿಂದ ಹಾರೋಹಿತ್ಲು–ಕೊಳವಂಕ–ಕಂಬತ್ಮನೆ ಸುತ್ತಮುತ್ತಲ ಗ್ರಾಮಸ್ಥರಲ್ಲಿ  ಆತಂಕ ಮೂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಜೀವ ಭಯದಲ್ಲಿ ಗ್ರಾಮಸ್ಥರು ದಿನ ಕಳೆಯುವ ಪರಿಸ್ಥಿತಿ ಎದುರಾಗಿದೆ. 

ಚಿರತೆ ಸಂಚಾರ ಹಿನ್ನೆಲೆ ಅರಣ್ಯ ಇಲಾಖೆ ತಕ್ಷಣ ಎಚ್ಚೆತ್ತು ಚಿರತೆಯನ್ನು ಹಿಡಿದು ಸುರಕ್ಷಿತವಾಗಿ ಸ್ಥಳಾಂತರಿಸಬೇಕು ಎಂದು  ಗ್ರಾಮಸ್ಥರು ಆಗ್ರಹಿಸಿದರು.

Leopard attack, CCTV footage of leopard running captured - panic among villagers

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close