ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಇದೆಂತಹ ಸಾಮಾಜಿಕ ಬಹಿಷ್ಕಾರ, ಸ್ವಾಭಿಮಾನ‌ಬಳಗ ಪ್ರತಿಭಟನೆ- Social boycott

 SUDDILIVE || SHIVAMOGGA

ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಇದೆಂತಹ ಸಾಮಾಜಿಕ ಬಹಿಷ್ಕಾರ, ಸ್ವಾಭಿಮಾನ‌ಬಳಗ ಪ್ರತಿಭಟನೆ-Social boycott, Karave swabhimani balaga protests taking place within the constituency of the district in-charge minister

Social, boycott


ಶಿಕ್ಷಣ ಸಚಿವರ ತರವರು ಜಿಲ್ಲೆಯಲ್ಲೇ ಸಾಮಾಜಿಕ ಬಹುಷ್ಕಾರಕ್ಕೆ ಒಳಗಾದ ಜನ ಇಂದು ಶಿವಮೊಗ್ಗದ ಗೋಪಿ ವೃತ್ತದಿಂದ ಡಿಸಿ ಕಚೇರಿಯ ವರೆಗೆ ಪ್ರತಿಭಟಬೆ ನಡೆಸಿ ಸಾಮಾಜಿಕ ಬಹಿಷ್ಕಾರ ಹಿಂಪಡೆಯುವಂತೆ ಆಗ್ರಹಿಸಿದ್ದಾರೆ. ಕರ್ನಾಟಕ ರಕ್ಷಣ ವೇದಿಕೆ ಸ್ವಾಭಿಮಾನಿ ಬಣ ಆ ಪ್ರತಿಭಟನೆಯ ನೇತೃತ್ವ ವಹಿಸಿತ್ತು. 

ಊರಿನ ಗ್ರಾಮದ ಒಳಗೆ ರಚಿಸಲಾದ ಸಮಿತಿಯಿಂದ ಈ ವ್ಯಕ್ತಿಗಳು ಬಹಿಷ್ಕಾರಕ್ಕೆ ಒಳಗಾಗಿದ್ದಾರೆ. ಬಸವಣ್ಯಪ್ಪ,ಮಂಜಪ್ಪ ಮೊದಲಾದ 25 ಕ್ಕೂ ಹೆಚ್ಚು ವ್ಯಕ್ತಿಗಳು ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿ ಕೆಲವರು 10 ವರ್ಷಕ್ಕೂ ಹೆಚ್ಚು ಅವಧಿಗೆ ಬಹಿಷ್ಕಾರಕ್ಕೆ ಒಳಗಾದರೆ ಕೆಲವರು ಐದು ವರ್ಷಗಳಿಗಿಂತ ಕಡಿಮೆ ಅವಧಿ ಒಳಗೆ ಇರುವವರು ಭಾಗಿಯಾಗಿದ್ದರು. ಆದರೆ ಯಾವ ಕಾನೂನುಗಳು ಇವರನ್ನ ಬಹಿಷ್ಕಾರದಿಂದ ಬಜಾವ್ ಮಾಡಲು ಸಾಧ್ಯವಾಗದೆ ಇರುವುದು ನಮ್ಮ ಕಾನೂನಿನ ದೌರ್ಭಾಗ್ಯವೂ ಹೌದು 

ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೂ ಸಹಯಾವುದೇ ಕ್ರಮ ಜರುಗಿಸಿಲ್ಲ. ದೂರು ನೀಡಿದರ ಮೇಲೆ  ಡಬ್ಬಲ ಬಹಿಷ್ಕಾರವಾಗುವುದಾಗಿ ಸಂತ್ರಸ್ತರು ಸುದ್ದಿಲೈವ್ ಗೆ ಮಾಹಿತಿ ನೀಡಿದ್ದಾರೆ. ಮಲ್ಲೇಶಪ್ಪ ಎಂಬುವರು ಟ್ರ್ಯಾಕ್ಟರ್ ನ ಈ ಸಮಿತಿಯು ನಿಗದಿ ಪಡಿಸಿದ ಅವಧಿಯ ಒಳಗೆ ಸಾಲವನ್ನ ಕಟ್ಟದಿದ್ದಕ್ಕೆ ಬಹಿಷ್ಕಾರಿಸಲಾಗಿದೆ. 2014 ರಿಂದ ಇದುವರೆಗೂ ಸೊರಬ ತಾಲೂಕು ಕುಳುವಳ್ಳಿಯಲ್ಲಿ ಯಾರನ್ನೂ ಮಾತನಾಡಿಸದ ಪರಿಸ್ಥಿತಿಯಲ್ಲಿ ಕಳೆದ 11 ವರ್ಷದಿಂದ ಬದುಕುತ್ತಿದ್ದಾರೆ. ಈ ಸಣ್ಣ ಉದಾಹರಣೆ ಓದುಗರ ಮುಂದೆ ಇಡಲಾಗಿದೆ.  

ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಕುರಣ್ ಕುಮಾರ್, ಉಪಾಧ್ಯಕ್ಷರಾದ ಮುಜೀಬ್, ಜನರಲ್ ಸೆಕ್ರೆಟರಿ ಶಫಿ, ವಿಜಯ್ಕುಮಾರ್, ಜೀವನ್, ಸಾಧಿಕ್ ಮೊದಲಾದವರುಭಾಗಿಯಾಗಿದ್ದರು.

Social boycott

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close