SUDDILIVE || SHIVAMOGGA
ರೈಲುದರ ಹೆಚ್ಚಳದ ವಿರುದ್ಧ ಜಿಲ್ಲಾ ಯುವಕಾಂಗ್ರೆಸ್ ನಿಂದ ರೈಲು ತಡೆಗೆ ಯತ್ನ, ಪೊಲೀಸರ ವಶಕ್ಕೆ-District Youth Congress attempts to attack railway station against rail fare hike, arrests made
ಪದೇ ಪದೇ ರೈಲು ಪ್ರಯಾಣದ ದರವನ್ನು ಹೆಚ್ಚಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಇಂದು ಜಿಲ್ಲಾ ಯುವ ಕಾಂಗ್ರೆಸ್ ರೈಲು ತಡೆಗೆ ಮುಂದಾಗಿದ್ದು ಅವರನ್ನು ಪೊಲೀಸರು ವಶಕ್ಲೆ ಪಡೆದಿದ್ದಾರೆ.
ಅಚ್ಚೆ ದಿನ್ ಆಯೆಗ ಎಂದೇ ಅಧಿಕಾರದ ಗದ್ದುಗೆ ಹಿಡಿದ ಕೇಂದ್ರದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಲ್ಲ ಒಂದು ರೀತಿಯ ಜನಸಾಮಾನ್ಯರ ಮೇಲೆ ಗದಪರ ಮಾಡುತ್ತಿದೆ ಜನಸಾಮಾನ್ಯರ ಸಾರಿಗೆ ಎಂದೇ ಖ್ಯಾತವಾಗಿರುವ ಮತ್ತು ದೇಶದ ಜನರ ಜೀವನ ಆಡಿ ಅಂತಾಗಿರುವ ರೈಲು ಪ್ರಯಾಣ ದರವನ್ನು ಪದೇಪದೇ ಹೆಚ್ಚಿಸುತ್ತಿದೆ ಎಂದು ಸಂಘಟನೆ ಆರೋಪಿಸಿದೆ
ಕೇಂದ್ರದಲ್ಲಿ ಅಧಿಕಾರಿಕ ಬಂದ ಬಿಜೆಪಿ ಸರ್ಕಾರ ಪದೇಪದೇ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿರಂತರವಾಗಿ ಮಾಡಿಕೊಂಡೆ ಬಂದಿದೆ ಲೀಟರ್ಗೆ 60 ರೂ ಇದ್ದ ಡೀಸೆಲ್ ಪೆಟ್ರೋಲ್ ಬೆಲೆಯನ್ನು 90 ರಿಂದ 105 ಗಳಿಗೆ ಹೆಚ್ಚಿಸಿದೆ 450 ಇದ್ದ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಸಾವಿರಾರುಗಳಿಗೆ ತಲುಪುವಂತೆ ಮಾಡಿದೆ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಸಹ ತೆರಿಗೆಯನ್ನು ಹೆಚ್ಚಿಸಲಾಗಿದೆ ಇತ್ತೀಚೆಗೆ ರಸಗೊಬ್ಬರ ಬೆಲೆಗಳನ್ನು ಹೆಚ್ಚಿಸುವ ಮೂಲಕ ರೈತರ ಬದುಕಿಗೆ ಕೊಳ್ಳಿ ಇಟ್ಟಿದೆ ಎಂದು ಸಂಘಟನೆ ಆರೋಪಿಸಿದೆ.
ಕೂಡಲೇ ಕೇಂದ್ರ ಸರ್ಕಾರ ಹೆಚ್ಚಿಸಿರುವ ರೈಲು ಪ್ರಯಾಣ ದರವನ್ನು ಹಿಂಪಡೆಯಬೇಕು ರೈಲು ಪ್ರಯಾಣ ಹಿಂದಿನಂತೆ ಜನಸಾಮಾನ್ಯರ ಜೀವನಾಡಿಯಾಗಿರುವಂತೆ ನೋಡಿಕೊಳ್ಳಬೇಕು ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಯುವ ಕಾಂಗ್ರೆಸ್ ವತಿಯಿಂದ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟನೆ ಆಗ್ರಹಿಸಿದೆ.
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ಹರ್ಷಿತ್ ಗೌಡ, ಹೆಚ್ ಸಿ.ಯೋಗೀಶ್, ರಮೇಶ್ ಹೆಗ್ಡೆ, ವಿಜಯ ಕುಮಾರ್, ಧೀರ್ ರಾಜ್ ಹೊನ್ನವಿಲೆ, ನಗರ ಅಧ್ಯಕ್ಷರ ಶೆಟ್ಟಿ ಗ್ರಾಮಾಂತರ ಅಧ್ಯಕ್ಷರಾದ ಪ್ರವೀಣ್ ಬ್ಲಾಕ್ ಅಧ್ಯಕ್ಷರ ಗಿರೀಶ್ ಮೊಹಮ್ಮದ್ ಗೌಸ್ ಪ್ರವೀಣ್ ಕುಮಾರ್ ಶಶಿಕುಮಾರ್ ಮೊದಲಾದವರು ಭಾಗಿಯಾಗಿದ್ದರು.
District Youth Congress attempts to block train against rail fare hike, arrests made


