ಜೈಲಿನ ಖೈದಿಗೆ ನೀಡಲು ತಂದಿದ್ದ ಪ್ಯಾಂಟ್​ ಜಿಪ್​ನಲ್ಲಿತ್ತು ಗಾಂಜಾ-Marijuana was found in the zip of pants brought to give to a prison inmate

  SUDDILIVE || SHIVAMOGGA

ಜೈಲಿನ ಖೈದಿಗೆ ನೀಡಲು ತಂದಿದ್ದ ಪ್ಯಾಂಟ್​ ಜಿಪ್​ನಲ್ಲಿತ್ತು ಗಾಂಜಾ-Marijuana was found in the zip of pants brought to give to a prison inmate    

Marijuna, prision


ಶಿವಮೊಗ್ಗ ನಗರದಲ್ಲಿ ಗಾಂಜಾ ಹಾವಳಿ ಎಗ್ಗಿಲ್ಲದೆ ನಡೆಯುತ್ತಿದ್ದು, ಪೊಲೀಸರು ಕಟ್ಟೆಚ್ಚರದ ಕ್ರಮಗಳನ್ನು ಕೈಗೊಂಡಿದ್ದರೂ, ಕೇಂದ್ರ ಕಾರಾಗೃಹದೊಳಗೆ ಮಾದಕ ವಸ್ತುವಿನ ಕಳ್ಳಸಾಗಣೆ ಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಈ ಹಿಂದೆ ಬಾಳೆ ದಿಂಡು ಮತ್ತು ಅಧಿಕಾರಿಯ ಒಳ ಉಡುಪಿನಲ್ಲಿ ಗಾಂಜಾ ಸಾಗಾಟ ಪ್ರಕರಣಗಳು ಬಯಲಿಗೆ ಬಂದ ಬೆನ್ನಲ್ಲೇ, ಅದೇ ರೀತಿಯ ಮತ್ತೊಂದು ಘಟನೆ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.


ಜೀನ್ಸ್ ಪ್ಯಾಂಟ್‌ನಲ್ಲಿ ಗಾಂಜಾ ಅಕ್ರಮ ಸಾಗಾಟ


ಡಿಸೆಂಬರ್ 9, 2025 ರಂದು ಸಂಜೆ ಸುಮಾರು 4:50ಕ್ಕೆ ಅಶ್ಪಾಕ್ ತಂದೆ ಅಬ್ದುಲ್ ಎಂಬ ಜೈಲಿನ ಬಂದಿಯನ್ನು ಸಂದರ್ಶಿಸಲು ಶಕೀಬ್  ಎಂಬ ವ್ಯಕ್ತಿ ಮಾರುತಿ ಸುಜುಕಿ ಕಾರಿನಲ್ಲಿ ಜೈಲಿಗೆ ಬಂದಿದ್ದ. ಈ ವೇಳೆ ಕರ್ತವ್ಯ ನಿರತರಾದ ಅಧಿಕಾರಿಗಳು ಸಂದರ್ಶಕ ಶಕೀಬ್ ಮತ್ತು ಬಂದಿಗೆ ನೀಡಲು ತಂದಿದ್ದ ಬಟ್ಟೆ ಹಾಗೂ ಇತರೆ ವಸ್ತುಗಳನ್ನು ತಪಾಸಣೆಗೊಳಪಡಿಸಿದರು. ಈ ಸಂದರ್ಭದಲ್ಲಿ, ಆತ ತಂದಿದ್ದ ನಾಲ್ಕು ಜೀನ್ಸ್ ಪ್ಯಾಂಟ್‌ಗಳ ಸೊಂಟದ ಪಟ್ಟಿಯ ಒಳಗಡೆ ಹಾಗೂ ಜಿಪ್ ಪಟ್ಟಿಯಲ್ಲಿ ನಿಷೇಧಿತ ವಸ್ತುವಾದ ಗಾಂಜಾ ಇರುವುದು ಪತ್ತೆಯಾಗಿದೆ. ಗಾಂಜಾ ಪತ್ತೆಯಾದ ನಂತರ ಶಕೀಬ್‌ನನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಿದಾಗ, ಆತನ ಬಳಿ 9,910 ನಗದು ಹಣವೂ ಪತ್ತೆಯಾಗಿದೆ. ಸಂದರ್ಶಕನಾದ ಶಕೀಬ್, ಜೈಲಿನೊಳಗೆ ಗಾಂಜಾ ಹಾಗೂ ಹಣವನ್ನು ಅಕ್ರಮವಾಗಿ ಸಾಗಿಸಲು ಪ್ರಯತ್ನಿಸಿ ಸಿಕ್ಕಿಬಿದ್ದಿದ್ದಾನೆ.

ನಂತರ ಭದ್ರತಾ ಸಿಬ್ಬಂದಿಯವರು ವಶಪಡಿಸಿಕೊಂಡ ಗಾಂಜಾ, 9,910 ನಗದು, ಮತ್ತು ಮಾರುತಿ ಸುಜುಕಿ ಕಾರು ಮತ್ತು ಅದರ ಕೀಲಿಯನ್ನು ಮುಂದಿನ ಕ್ರಮಕ್ಕಾಗಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಕಾರಾಗೃಹದೊಳಗೆ ಗಾಂಜಾ ಮತ್ತು ನಗದು ನಿಷೇಧಿತ ವಸ್ತುಗಳಾಗಿದ್ದು, ಇವುಗಳನ್ನು ಅಕ್ರಮವಾಗಿ ಸಾಗಿಸಲು ಪ್ರಯತ್ನಿಸಿದ ಸಂದರ್ಶಕ ಶಕೀಬ್ ತಂದೆ ಜಿಯಾವುಲಾ, ಮತ್ತು ಬಂಧಿ ಅಶ್ಪಾಕ್ ತಂದೆ ಅಬ್ದುಲ್ (ವಿ.ಎಂ.ಸಂಖ್ಯೆ 663/2025) ರವರ ವಿರುದ್ಧ ಕರ್ನಾಟಕ ಕಾರಾಗೃಹ (ತಿದ್ದುಪಡಿ ಅಧಿನಿಯಮ-2022) ರ ಕಲಂಗಳ ಅಡಿಯಲ್ಲಿ ಮತ್ತು ಇತರೆ ಸೂಕ್ತ ಕಾನೂನು ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Marijuana was found in the zip of pants brought to give to a prison inmate    


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close