ನೆಗೆದು ಬಿದ್ದು ಹೋಯಿತು ಎರಡನೇ ಬಾರಿಯ ಇ-ಚಲನ್ ದಂಡವಸೂಲಾತಿ, ಶಿವಮೊಗ್ಗ KSRTC ಬಾಕಿ ಕೇಳುದ್ರೆ ನೀವು ಅಚ್ಚರಿಪಡುತ್ತೀರ?The second e-challan fine collection went up in smoke

SUDDILIVE || SHIVAMOGGA

ನೆಗೆದು ಬಿದ್ದು ಹೋಯಿತು ಎರಡನೇ ಬಾರಿಯ ಇ-ಚಲನ್ ದಂಡವಸೂಲಾತಿ, ಶಿವಮೊಗ್ಗ KSRTC ಬಾಕಿ ಕೇಳುದ್ರೆ ನೀವು ಅಚ್ಚರಿಪಡುತ್ತೀರ?-The second e-challan fine collection went up in smoke, would you be surprised if the Shimoga KSRTC asks for the dues?

Fine, collection

ಕಳೆದ ಬಾರಿ 20 ದಿನಕ್ಕೆ 2 ಕೋಟಿಗೂ ಅಧಿಕ ಹಣ ಸಂಗ್ರಹವಾಗಿದ್ದ ಟ್ರಾಫಿಕ್ ಇ-ಚಲನ್ 50% ದಂಡ ಪಾವತಿಗೆ ಎರಡನೇ ಬಾರಿ ಜನರ ಸ್ಪಂದಿಸದೆ ನೀರಸ ಮುಡಿಸಿದ್ದಾರೆ.

ಕಳೆದ ಬಾರಿ 20 ದಿನಗಳಲ್ಲಿ ಒಟ್ಟು 50, 451 ಪ್ರಕರಣಗಳು ದಾಖಲಾಗಿದ್ದು ಒಟ್ಟು 2,09,38,750 ರೂ ಹಣ ಸಂಗ್ರಹವಾಗಿತ್ತು. ಈ ಬಾರಿ ಅವಧಿ ಮುಗೀತಾ ಬಂದರೂ 20 ಲಕ್ಷ ರೂ. ಸಂಗ್ರಹವಾಗಿಲ್ಲ. ಜನರ ಜೇಬಿನಿಂದ ಈಸಿಯಾಗಿ ಹಣ ತೆಗೆದುಕೊಳ್ಳುವ ಸರ್ಕಾರದ ಚಿಂತನೆಗೆ ಬ್ರೇಕ್ ಬಿದ್ದಿದೆ. 

ಕರ್ನಾಟಕ ಸರ್ಕಾರದ ಆದೇಶದಂತೆ ನ.21 ರಿಂದ ನಾಳೆ, ಅಂದರೆ ಡಿ.12 ರವರೆಗೆ ಟ್ರಾಫಿಕ್ ಈ ಚಲನ್ ಪ್ರಕರಣಗಳಿಗೆ ಸಂಬಂಧಿಸಿದಂತೆ 50% ಕಡಿಮೆ ಮೊತ್ತದ ದಂಡ ಪಾವತಿಗೆ ಎರಡನೇ ಬಾರಿ ಅವಕಾಶವನ್ನು ಕಲ್ಪಿಸಲಾಗಿತ್ತು. ನಿನ್ನೆಯವರೆಗೂ, ಅಂದರೆ ದಿನಾಂಕ 10.12.2025 ರವರೆಗೂ, ಕೇವಲ 3,933 ಪ್ರಕರಣಗಳಲ್ಲಿ 16 ಲಕ್ಷದ 11 ಸಾವಿರದ 250 ರೂಪಾಯಿಯ ದಂಡದ ಮೊತ್ತವನ್ನು ಶಿವಮೊಗ್ಗ ಜಿಲ್ಲಾದ್ಯಂತ ಸಂಗ್ರಹಿಸಲಾಗಿದೆ. ಸರ್ಕಾರದ ದಂಡ ಸಂಗ್ರಹ 2.O ಗೆ ಜನ ಮನ್ನಣೆ ನೀಡಿಲ್ಲ. 

ಅದೇ ರೀತಿ ರಸ್ತೆ ಸಾರಿಗೆ ಇಲಾಖೆಗೆ ಸಂಬಂಧಿಸಿದಂತೆ ನಿನ್ನೆಯವರೆಗೂ 16 ಪ್ರಕರಣಗಳಲ್ಲಿ 36,650 ಮೊತ್ತದ ದಂಡದ ಹಣವನ್ನು ಪಾವತಿ ಮಾಡಲಾಗಿದೆ. ಈ ಅವಕಾಶ ನಾಳೆಗೆ ಕೊನೆಗೊಳ್ಳಲಿದೆ.

ಬಾಕಿ ಉಳಿದ ಶಿವಮೊಗ್ಗ KSRTC ಬಸ್ ಗಳ ಸಂಚಾರಿ ನಿಯಮ ಉಲ್ಲಂಘನೆಯ ದಂಡ

2023 ರಿಂದ ಇದುವರೆಗೂ KSRTC ಶಿವಮೊಗ್ಗ ವಿಭಾಗ ಜಿಲ್ಲೆಯಲ್ಲಿ ಸಂಚಾರಿ ನಿಯಮ ಉಲ್ಲಂಘನೆಯ ದಂಡವನ್ನ ಉಳಿಸಿಕೊಂಡಿದೆ. 2023 ರಿಂದ 2025 ಇಲ್ಲಿಯ ವರೆಗಿನ ಸಂಚಾರಿ ನಿಯಮದ ದಂಡ ಉಲ್ಲಂಘನೆಯ ದಂಡವನ್ನ KSRTC 1,75,000 ರೂ.ಗಳನ್ನ ಕಟ್ಟಬೇಕಿದೆ. ಕಳೆದ ಆಗಸ್ಟ್ ವರೆಗೂ 2,75,000 ರೂ ದಂಡ ಬಾಕಿ ಉಳಿಸಿಕೊಂಡಿದ್ದ KSRTC ಇದರಲ್ಲಿ 1 ಲಕ್ಷ ಹಣವನ್ನ ಪಾವತಿಸಿತ್ತು. ಆದರೂ ಒಙದು ಮುಕ್ಕಾಲು ಲಕ್ಷ ರೂ. ದಂಡವನ್ನ ಬಾಕಿ ಉಳಿಸಿಕೊಂಡಿದೆ. 

ಅದೇ ಸಾರ್ವಜನಿಕರ ಬಾಕಿ ಉಳಿದರೆ ಯಮ ಸ್ವರೂಪಿಯಂತೆ ವರ್ತಿಸುವ ಅಧಿಕಾರಿಗಳು ಮೊದಲು ಸಾರ್ವಜನಿಕರ ತೆರಿಗೆ ಹಣದಲ್ಲಿ ಬದುಕುವ ಸರ್ಕಾರಿ ವಾಹನಗಳ ಬಾಕಿ ಕಟ್ಟಿಸಿಕೊಳ್ಳಲಿ ಎಂದು ಜನ ಹೇಳುವ ದಿನಗಳು ಹತ್ತಿರ ಬಂದರೂ ಬರಬಹುದು. 

The second e-challan fine collection went up in smoke

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close