ಗಲಾಟೆ ಬಿಡಿಸಲು ಬಂದವರ ಮೇಲೆ ಮಚ್ಚು ಬೀಸಲಾಗಿತ್ತು- Those who came to break up the riot were beaten with maces

 SUDDILIVE || BHADRAVATHI

ಗಲಾಟೆ ಬಿಡಿಸಲು ಬಂದವರ ಮೇಲೆ ಮಚ್ಚು ಬೀಸಲಾಗಿತ್ತು-  Those who came to break up the riot were beaten with maces  

Breakup, machets

ಭದ್ರಾವತಿಯ ಜೈಭೀಮ್ ನಗರದ ಪೌರಕಾರ್ಮಿಕರ ಮನೆಯ ಬಳಿಯಲ್ಲಿ ನಡೆದ ಗಲಾಟೆಯಲ್ಲಿ ನಡೆದ ಡಬ್ಬಲ್ ಮರ್ಡರ್ ಪ್ರಕರಣದಲ್ಲಿ 9 ಜನರ ವಿರುದ್ಧ ಎಫ್ಐಆರ್ ದಾಖಲಾಗಿದ್ದು ಈಗಾಗಲೇ ಐವರನ್ನ ಬಂಧಿಸಲಾಗಿದೆ. 

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಗಾಯಾಳು ಸುರೇಶ ಎನ್ ಬಿನ್ ನಾಗರಾಜ್ ಹೇಳಿಕೆಯ ಆಧಾರದ ಮೇರೆಗೆ ಸಂಜಯ್, ಸೈಲೆಂಟ್ ಶಶಿ, ವೆಂಕಟೇಶ್ ಭರತ್, ಮನು, ಪುರುಷೋತ್ತಮ, ಚಲ್ಲಪ್ಪ, ಸತೀಶ್, ಸುರೇಶ್ ಸೇರಿ 9 ಜನರ ವಿರುದ್ಧ ಎಫ್ಐಆರ್ ಆಗಿದ್ದು ಇದರಲ್ಲಿ ಮಂಜುನಾಥ್ ಯಾನೆ ಸೈಲೆಂಟ್ ಶಶಿ, ಭರತ್ ಯಾನೆ ಸುಂಡು, ಸಂಜಯ್ ಯಾನೆ ಕುಳ್ಳಿ, ಸುರೇಶ್ ಯಾನೆ ಸೂರಿ, ವೆಂಕಟೇಶ್ ಯಾನೆ ಕೆಂಚರನ್ನ ಬಂಧಿಸಲಾಗಿದೆ. 

ಭದ್ರಾವತಿ ಪೌರಕಾರ್ಮಿಕರಾಗಿದ್ದ ಗಾಯಾಳು ಸುರೇಶ್ ಎನ್  ಹೇಳಿಕೆಯ ಆಧಾರದಲ್ಲಿ ದೂರು ದಾಖಲಾಗಿದ್ದು ಪ್ರಕರಣದಲ್ಲಿ ನಂದೀಶ್ ಮತ್ತು ಸ್ಪೂರ್ತಿ ಅವರ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಡುಗಿ ಮತ್ತು ಹುಡುಗನ‌ ಮನೆಯವರನ್ನ ಹಳೇನಗರ ಪೊಲೀಸ್ ಠಾಣೆಗೆ  ಕರೆಸಲಾಗಿತ್ತು. ಜೈಭೀಮ್ ನಗರದ ಸಮಸ್ಯೆಯಾಗಿದ್ದರಿಂದ ಪೌರಕಾರ್ಮಿಕ ಸುರೇಶ್ ಸಹ ಹೋಗಿದ್ದನು.


ಠಾಣೆಯ ಮುಂಭಾಗದ ರಸ್ತೆಯಲ್ಲಿ ನಿಂತಿದ್ದ ಪೌರಕಾರ್ಮಿಕನನ್ನ ಕಂಡು ಕೇರಿಯ ಪರಿಚಯವಿರುವ ಸಂಜಯ್ ನಿನ್ನಾಕೆ ಇಲ್ಲಿಗೆ ಬಂದಿದೀಯಾ ಎಲ್ಲಾ ವಿಚಾರದಲೂ. ಮೂಗು ತೂರಿಸಿಕೊಂಡು ಬರುತ್ತೀಯಾ ಅಂತಾ ಹೇಳ್ತಾನೆ. ಅವನ ಜೊತೆಗಿದ್ದ ಶಶಿ, ವೆಂಕಟೇಶ, ಮನು, ಭರತ್, ಪುರುಷೋತ್ತಮ, ಸತೀಶ, ಚಲಪ್ಪ ಮತ್ತು ಸುರೇಶ ಇವರುಗಳು ಸಹಾ ಬಂದು  ನಿನಗೇನೋ ಕೆಲಸವಿದೆ. ಅಂತಾ ಹೇಳಿರ್ತಾರೆ ಇಷ್ಟಕ್ಕೆ ಸುರೇಶ್  ಆಲ್ಲಿಂದ ಮನೆಗೆ ಬಂದಿರುತ್ತಾನೆ. 

ಈ ಘಟನೆ ಡಿ.12 ಸಂಜೆ 7-30 ಕ್ಕೆ ನಡೆದಿದ್ದರೆ, ರಾತ್ರಿ 8-45 ಕ್ಕೆ ಸುರೇಶ್  ಮನೆಯಲ್ಲಿದ್ದಾಗ ಸಂಜಯ್ ಫೋನ್ ಮಾಡಿ ನಿನ್ನ ಹತ್ತಿರ ಮಾತನಾಡಬೇಕು. ಬಾ ಅಂತಾ ಹೇಳಿರ್ತಾನೆ.  ಕೇರಿಯ ಪುರುಷೋತ್ತಮ ರವರ ಮನೆ ಮತ್ತು ಪೌರ ಕಾರ್ಮಿಕರ ಕ್ವಾಟ್ರಸ್ ಮಧ್ಯೆ ಓಣಿ ರಸ್ತೆಯಲ್ಲಿ ಸಂಜಯ್ ನಿಂತಿದ್ದು, ಅವನ ಬಳಿ ಹೋದ ಪೌರಕಾರ್ಮಿಕನಿಗೆ ಹುಡುಗಿಯ ಅಣ್ಣ ಭರತನು  ನಿನ್ನ ತಂಗಿಗೆ ಹೀಗೆ ಆಗಿದ್ದರೆ ಏನು ಮಾಡುತ್ತಿದ್ದೆ ಎಂದು ಪ್ರಶ್ನಿಸಿದ್ದಾನೆ. 

ಅಲ್ಲೇ ಇದ್ದ ಶಶಿ, ವೆಂಕಟೇಶ, ಮನು ಪುರುಷೋತ್ತಮ, ಸತೀಶ ಮತ್ತು ಸುರೇಶರವರು  ಯಾಕೋ ಬೇಡದ ವಿಚಾರಕ್ಕೆ ಬರುತ್ತೀಯಾ ಎಂದು ಹೇಳಿ ಎಲ್ಲರೂ ಸುರೇಶ್ ವಿರುದ್ಧ ಮುಗಿಬಿದ್ದು ಗಲಾಟೆ ಮಾಡಿದ್ದಾರೆ. ಅಷ್ಟರಲ್ಲಿ ಗಲಾಟೆ ಶಬ್ದ ಕೇಳಿ  ಪರಿಚಯದವರಾದ ಅಜಯ್, ವೆಂಕಟೇಶ, ಪ್ರಭು ಮತ್ತು ಗೌತಮ್ ಇವರುಗಳು ಬಂದು ಗಲಾಟೆ ಬಿಡಿಸಲು ಪ್ರಯತ್ನಿಸಿದ್ದು ಗಲಾಟೆ ನಿಲ್ಲಲಿಲ್ಲ.

ಗಲಾಟೆ ಶಬ್ದ ಕೇಳಿ ಸಂಬಂಧಿಕರಾದ, ರಾಮಾಂಜನೇಯ, ಅಣ್ಣಪ್ಪ, ಕಿರಣ, ಮಂಜುನಾಥ, ಕೃಷ್ಣ,,ಸುರೇಶ್  ತಾಯಿ ಲಕ್ಷ್ಮಿ ರವರು ಸಹ ಬಂದು ಯಾಕೆ ಗಲಾಟೆ ಮಾಡುತ್ತೀಯಾ ಎಂದು ಕೇಳಿದ್ದಾರೆ.  ವೆಂಕಟೇಶ ಸುರೇಶನನ್ನ ಗಟ್ಟಿಯಾಗಿ ಹಿಡಿದುಕೊಂಡಿದ್ದು, ಸಂಜಯ್ ಅವನ ಬಳಿ ಇದ್ದ ಮಚ್ಚಿನಿಂದ ಆತನ ಬಲಗಾಲಿನ ತೊಡೆಯ ಹತ್ತಿರ ಕಡಿದಿದ್ದಾನೆ.  ಶಶಿ ಅವನಹತ್ತಿರ ಇದ್ದ ಚಾಕುವಿನಿಂದ  ಎಡಪಕ್ಕೆಯ ಹತ್ತಿರ ತಿವಿದು, ಕೊಲೆಗೆ ಯತ್ನಿಸಿದ್ದಾರೆ.   ಕಿರಣ ಮತ್ತು ಮಂಜುನಾಥ್ ರವರು ಸರೇಶನನ್ನ ಹಿಡಿದುಕೊಂಡು ಎದುರಾಳಿಗಳನ್ನ ತಳ್ಳುತ್ತಿದ್ದಾಗ ಸಂಜಯ್ ಅವನ ಕೈಯಲ್ಲಿದ್ದ ಮಚ್ಚಿನಿಂದ ಮಂಜುನಾಥ್ ರವರ ಕುತ್ತಿಗೆಗೆ ಕಡಿದಿದ್ದಾನೆ. ಶಶಿಯು ಚಾಕುವಿನಿಂದ ಚುಚ್ಚಿದ್ದಾನೆ, ಕಿರಣನಿಗೂ ಸಹ ಸಂಜಯ್ ಮಚ್ಚಿನಿಂದ ಕಡಿದು ಶಶಿಯು ಚಾಕುವಿನಿಂದ ಪಕ್ಕೆಗೆ ತಿವಿದಿದ್ದಾನೆ. 

ಕಿರಣ ಮತ್ತು ಮಂಜುನಾಥ್ ರವರುಗಳು ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದು ಅವರು ಸತ್ತರೆಂದು ಅವರೆಲ್ಲರೂ ಅಲ್ಲಿಂದ ಜಾಗಖಾಲಿ ಮಾಡ್ತಾರೆ. ಆವರೆಲ್ಲರೂ ಹೋಗುವಾಗ ನಿಮ್ಮನ್ನು ಸುಮ್ಮನೇ ಬಿಡುವುದಿಲ್ಲವೆಂದು ಹೇಳಿ ಸಂಜಯ್ ನ ಕೈಯಲ್ಲಿದ್ದ ಮಚ್ಚು ಮತ್ತು ವೆಂಕಟೇಶನ ಚಾಕುವನ್ನು ತೆಗೆದುಕೊಂಡು ಹೋಗಿದ್ದಾರೆ. ಗಾಯಾಳುಗಳಾಗಿ ಬಿದ್ದಿದ್ದ ಮೂರನ್ನ ಆಸ್ಪತ್ರೆಗೆಕರೆದೊಯ್ಯಲಾಗಿದೆ. 

ಆಸ್ಪತ್ರೆಗೆ ಕರೆದೊಯ್ಯಲಾಗಿದ್ದ ಮಂಜುನಾಥ್  ಸಾವುಕಂಡರೆ ಕಿರಣ್ ಮತ್ತು ಸುರೇಶ್ ರನ್ನ ಮೆಗ್ಗಾನ್ ಗೆ ದಾಖಲಿಸಲಾಗಿತ್ತು. ಕಿರಣ್ ಸಹ ಸಾವನ್ನಪ್ಪಿದ್ದಾನೆ.

ಹಳೆಯ ದ್ವೇಷವೂ ಕಾರಣ

ಭರತನ ತಂಗಿ ಸ್ಪೂರ್ತಿ ವಿಚಾರದಲ್ಲಿ. ಸ್ಟೇಷನ್ ಹತ್ತಿರ ಹೋದ ಸುರೇಶ್ ಗೆ ಇದೇ ಮೊದಲು ಬಾರಿ ಇವರೆಲ್ಲಾ ದ್ವೇಷ ಕಾರಿರಲಿಲ್ಲ  ಈ ವರ್ಷ 2025 ರ ವಿಜಯದಶಮಿ ಹಬ್ಬದ ಸಮಯದಲ್ಲಿ ಸುರೇಶ್ ದೊಡ್ಡಪ್ಪನವರಾದ ಆಯ್ಯಪ್ಪನವರಿಗೆ ಸಂಜಯ್, ವೆಂಕಟೇಶ, ಶಶಿ, ಸಾಗರ್ ಮತ್ತು ಪರುಷೋತ್ತಮ ಇವರುಗಳು ಗಲಾಟೆ ಮಾಡಿದ ವಿಚಾರದಲ್ಲಿ.  ದೊಡ್ಡಪ್ಪ ಮತ್ತು ಅವರ ಮಗನ ಜೊತೆ ಸುರೇಶ್ ಹಳೇನಗರ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡಿಸಿದ ವಿಚಾರದಲಿ.. ದ್ವೇಷ ಇಟ್ಟುಕೊಂಡು ಕೊಲೆಗೆ ಪ್ರಯತ್ನಿಸಲಾಗಿತ್ತು ಎಂದು ದೂರಿನಲ್ಲಿ ದಾಖಲಿಸಲಾಗಿದೆ. 

ಹಲೆ ಮಾಡುವುದನ್ನು ತಪ್ಪಿಸಲು ಬಂದ ಕಿರಣ, ಮಂಜುನಾಥ ರವರಿಗೆ ಕೊಲೆ ಮಾಡಿದ ಸಂಜಯ್ ಬಿನ್ ವಡಿವೇಲು, ವೆಂಕಟೇಶ ತಂದೆ ಕುಮಾರ, ಶಶೀ ತಂದೆ ಕುಮಾರ, ಪುರುಷೋತ್ತಮ, ಚಲಪ್ಪ, ಸತೀಶ,ಮನು ಸುರೇಶ ಮತ್ತು ಭರತ್ ಇವರು ಸಮಾನ ಉದ್ದೇಶದಿಂದ ಪ್ರಾಣಾಂತಿಕ ಹಲೆ.. ಮಾಡಿ ಕೊಲೆ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಲಾಗಿದೆ.

Those who came to break up the riot were beaten with maces

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close