ಅಭಿಮಾನಿಗಳಿಗೆ ಖುಷಿ ನೀಡುವ ಡೆವಿಲ್ ಸಿನಿಮಾ ಪ್ರೇಕ್ಷಕರನ್ನ ಹಿಡಿದಿಟ್ಟುಕೊಳ್ಳುತ್ತಾ? Will the Devil movie, which delights fans, hold on to the audience?

 SUDDILIVE || SHIVAMOGGA

ಅಭಿಮಾನಿಗಳಿಗೆ ಖುಷಿ ನೀಡುವ ಡೆವಿಲ್ ಸಿನಿಮಾ ಪ್ರೇಕ್ಷಕರನ್ನ ಹಿಡಿದಿಟ್ಟುಕೊಳ್ಳುತ್ತಾ?Will the Devil movie, which delights fans, hold on to the audience?

Devil, cinema


ಸಿಎಂ ಚೇರ್ ಉಳಿಸಿಕೊಳ್ಳುವ ಪ್ರಯತ್ನದ ಸುತ್ತ ನಡೆಯುವ ಕಥೆಗಳನ್ನ ಸಿನಿಮಾ ಮಾಡಲಾಗಿದೆ. ಡಬ್ಬಲ್ ಆಕ್ಟಿಂಗ್ ನ ದರ್ಶನ್ ದ ಡೆವಿಲ್ ಸಿನಿಮಾ ಅಭಿಮಾನಿಗಳಿಗೆ ರಸದೌತಣ ಉಣಬಡಿಸಿದೆ. ಒಂದು ಪಾತ್ರ ಸೌಮ್ಯವಾಗಿದ್ದರೆ ಮತ್ತೊಂದು ಪಾತ್ರ ಸಾಕ್ಷಾತ್ 'ರಾಕ್ಷಸನ' ಅಪಾವತಾರ. 

ಸಿನಿಮಾ ನಿರೂಪಣೆಯು ರಾಜಕೀಯ ಒಳಸಂಚು, ಭಾವನಾತ್ಮಕ ಸಂಘರ್ಷ, ವೈಯಕ್ತಿಕ ದ್ವೇಷ ಮತ್ತು ದೊಡ್ಡ ಪ್ರಮಾಣದ ಆಕ್ಷನ್ ಸನ್ನಿವೇಶಗಳನ್ನು ಸಂಯೋಜಿಸಿದೆ ಧನುಷ್ ರಾಜಶೇಖರ್ ಯಾನೆ ದಿ ಡೆವಿಲ್ ಮತ್ತು ಕೃಷ್ಣ ನ ನಟನೆಯಲ್ಲಿ ದರ್ಶನ್ ಸೈ ಎನಿಸಿಕೊಂಡಿದ್ದಾರೆ. ಅನಂತ್ ನಂಬಿಯರ್ ಸಿಎಂ ಅಡ್ವೈಸರ್ (ಅಚ್ಚುತ್ ರಾವ್), ನಾಯಕ ನಟಿಯಾಗಿ  ರಚನಾ ರೈ ರುಕ್ಮಿಣಿ ಪಾತ್ರದಲ್ಲಿ, ಧನುಷ್ ತಂದೆ ರಾಜಶೇಖರ್ ಅಭಿನಯವನ್ನ ಹಿಂದಿ ನಟ ಮಹೇಶ್ ಮಂಜ್ರೇಕರ್, ರಾಜಕಾರಣದ ಅವಕಾಶಕ್ಕಾಗಿ ಶರ್ಮಿಳಾ ಮಾಂಡ್ರೆ ಅಭಿನಯ ಸೂಪರ್ ಆಗಿದೆ.


ನನ್ನ ಪೋಸ್ಟರ್ ಹಾಕಿದರೆ, ಜನ ಸೇರ್ತಾರೆ, ನಾನು ಹೀರೋನೇ, ಆಟಕ್ಕೆ ಬಳಸಿಕೊಂಡಿದ್ದೀರ ರೂಲ್ ಮಾಡೇ ಹೋಗೋದು, ಸೂರ್ಯನಿಗೆ ಬಹಳಹೊತ್ತು ಗ್ರಹಣ ಇರಲ್ಲ, ನಾನು ಬರ್ತಾಯಿದ್ದೀನಿ ಚಿನ್ನ... ನಮ್ಮಣ್ಣ ದಾನದಲ್ಲಿ ಕರ್ಣನಿಗಿಂತ ಜೋರು, ತೊಡೆ ತಟ್ಟಿದರಲ್ಲಿ ಭೀಮನೂ ಡಮ್ಮಿನೆ ಡೈಲಾಗ್ ಗಳು ಅಭಿಮಾನಿಗಳನ್ನ ಹಿಡಿದಿಟ್ಟಿದೆ. 

ಒಂದೇ ಸಾರಿ ನಕ್ಕುಬಿಡು, ಬಿಜಿಎಂ ಹಾಡು ಅಭಿಮಾನಿಗಳಿಗೆ ಮುದನೀಡುತ್ತದೆ.ಕೃಷ್ಣ ಮೆಸ್ ನಡೆಸುವನು, ನಟನಾಗುವ ಹುಚ್ಚಿನಿಂದ ರಾಜಕಾರಣಿಯ ಮಗನ ಪಾತ್ರಕ್ಕೆ ಒಪ್ಪಿಕೊಳ್ತಾನೆ. ರಾಜಕಾರಣಿಯ ಮಗನೇ ಧನುಷ್ ಯಾನೆ ಡೆವಿಲ್ ಈತನನ್ನ ಸಿಎಂ ಮಾಡುವ ಸರ್ಕಸ್ಸೇ ದಿ ಡೆವಿಲ್ ಸಿನಿಮಾ, ಹೇಗೆ ಎಂಬುದನ್ನ ಜನ ಥಿಯೇಟರ್ ಗೆ ಬಂದು ನೋಡಬೇಕು. ಅಭಿಮಾನಿಗಳಿಗೆ ಸಿನಿಮಾ ಮುದನೀಡಿದರೂ ಪ್ರೇಕ್ಷಕರ ನಿರೀಕ್ಷೆಗೆ ಸಿನಿಮಾ ಹಿಡಿದಿಟ್ಟುಕೊಳ್ಳುತ್ತಾ ಎಂಬುದೇ ಪ್ರಶ್ನೆಯಾಗಿದೆ.

ಶ್ರೀ ಜೈಮಾತ ಕಂಬೈನ್ಸ್  ನಲ್ಲಿ ತಯಾರಾದ ದಿ ಡೆವಿಲ್ ನ್ನ ಪ್ರೊಡ್ಯೂಸರ್ ಜೆ ಜಯಮ್ಮ-ಸರಿಗಮ, ನಿರ್ದೇಶಕ ಮಿಲನ ಪ್ರಕಾಶ್ ವೀರ್, ಸಂಗೀತ ಅಜನೀಶ್ ಲೋಕ್ ನಾಥ್, ಸಂಭಾಷಣೆ ಕಾಂತರಾಜ್ ಎಸ್ ಎಸ್, ಆಕ್ಷನ್ ರಾಮ್ ಲಕ್ಷ್ಮಣ್, ಕೋರಿಯೋಗ್ರಫಿಯನ್ನ ಸಂತು ಮಾಸ್ಟರ್ ನಿಭಾಯಿಸಿದ್ದಾರೆ.

ಶಿವಮಗ್ಗದಲ್ಲಿ ಸಂಭ್ರಮಾಚರಣೆ


ಸಿನಿಮಾ ಥಿಯೇಟರ್ ನಲ್ಲೇ ಅಭಿಮಾನಿಗಳು ಅಭಿಮಾನಿ ಮೆರೆದಿದ್ದಾರೆ. ಶಿವಮೊಗ್ಗದ ವೀರಭದ್ರ ಚಲನಚಿತ್ರ ಮಂದಿರದಲ್ಲಿ ಅಭಿಮಾನಿಗಳು ದರ್ಶನ್ ಎಂಟ್ರಿಗೆ ಕುಡಿದು ಕುಪ್ಪಳಿಸಿದ್ದಾರೆ. ಥಿಯೇಟರ್ ಒಳಗೆ ಅಭಿಮಾನಿಗಳಿಗೆ ಪೇಪರ್ ಬ್ಲೋಯೆರ್ ಬಿಡದೆ ಇರುವುದು ನಿರಾಸೆ ಮೂಡಿದೆ. ಶಿವಮೊಗ್ಗದಲ್ಲಿ ಡೆವಿಲ್ ಸಿನಿಮಾಕ್ಕಾಗಿ 2000 ಜನರಿಗೆ ಬಿರಿಯಾನಿಯನ್ನೂ ಮಾಡಿಸಿದ್ದಾರೆ. ನಿನ್ನೆ ಸಂಜೆಯಿಂದ ಲೇಜರ್ ಶೋ, ಡೊಳ್ಳು ಕುಣಿತಗಳಿದ್ದವು.  ದರ್ಶನ್ ಮೊದಲ ಬಾರಿಗೆ ಜೈಲಿಗೆ ಹೋಗಿ ಬಂದಾಗ ಸಾರಥಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆ ನಿರೀಕ್ಷೆಯಲ್ಲೇ ಈ ಸಿನಿಮಾವನ್ನ‌ ನೋಡಲಾಗಿತ್ತು. 

Will the Devil movie, which delights fans, hold on to the audience?     

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close