ಸೋಮಿನಕೊಪ್ಪದಲ್ಲಿ ವ್ಯಾಪಾರಿಯೊಬ್ವರನ್ನ ಕೂಡಿಹಾಕಿ ಥಳಿತ! A businessman was rounded up and beatenin sominkoppa!

 SUDDILIVE || SHIVAMOGGA

ಸೋಮಿನಕೊಪ್ದಲ್ಲಿ ವ್ಯಾಪಾರಿಯೊಬ್ವರನ್ನ ಕೂಡಿಹಾಕಿ ಥಳಿತ! A businessman was rounded up and beaten in sominkoppa!     

Business, Man


ಶಿವಮೊಗ್ಗದಲ್ಲಿ ಮರದ ವ್ಯಾಪಾರಿಯೊಬ್ವರನ್ನ ಕೂಡಿಹಾಕಿ ಥಳಿಸಲಾಗಿದೆ. ಹಣ ಬಾಕಿ ಉಳಿಸಿಕೊಂಡ ವ್ಯಕ್ತಿಗೆ ಹಣಕೊಡುವಂತೆ ಮಸೀದಿ ಕಮಿಟಿಯವರು ತಿಳಿಸಿದ್ದಕ್ಕೆ ದ್ವೇಷದ ಹಿನ್ನಲೆಯಲ್ಲಿ ಕೂಡಿಹಾಕಿ ಮರ್ಮಾಂಗವನ್ನ ಹಿಸುಕಿ ಹಿಂಸೆ ನೀಡಿರುವ ಘಟನೆ ಮೊನ್ನೆ ನಡೆದಿದೆ. 

ಸೋಮಿನಕೊಪ್ಪದ ಮುಕೀಬ್ ಅಹಮದ್ ಎಂಬ ಟಿಂಬರ್ ಮತ್ತು ಆಟೋ ಕನ್ಸಲ್ಟೆನ್ಸಿ ವೃತ್ತಿ ಮಾಡಿಕೊಂಡಿದ್ದವರ ಬಳಿ ಸೋಮಿನಕೊಪ್ಪದ ಇಮ್ರಾನ್ ಎಂಬಾತ ಈ ಹಿಂದೆ ಎರಡು ಲಕ್ಷದ ಮರವನ್ನ‌ ಖರೀದಿಸಿ ಹಣಕೊಡಲು ಸತಾಯಿಸಿದ್ದನು. ಇದರಿಂದ ಮುಕೀಬ್ ಸೋಮಿನಕೊಪ್ಪದ ಮಸೀದಿ ಕಮಿಟಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಮಸೀದಿ ಕಮಿಟಿ ಇಮ್ರಾನ್ ಗೆ ಹಣ ನೀಡಲು ಸೂಚಿಸಿದ್ದರು. ಇದನ್ನೇ ದ್ವೇಷವಾಗಿ ಬೆಳೆಸಿಕೊಂಡ ಇಮ್ರಾನ್ ಮೊನ್ನೆ ಜ.29 ರಂದು ರಾತ್ರಿ ಮುಕೀಬ್ ಗೆ ಸೋಮಿನ್ ಕೊಪ್ಪದ ಶೆಡ್ ಗೆ ಬರಲು  ಕರೆ ಮಾಡಿ ತಿಳಿಸಿದ್ದನು. 

ಮುಕೀಬ್ ಅಳಿಯ ಜಾಬೀರ್ ಗೆ ಕರೆ ಮಾಡಿ  ಶೆಡ್ ಬಳಿ ಹೋಗುವುದಾಗಿ ತಿಳಿಸಿ ಹೋಗಿದ್ದರು.  ಇಮ್ರಾನ್ ತನ್ನ ಮೂವರು ಸಹಚರರೊಂದಿಗೆ ಬಂದಿದ್ದು. ಶೆಡ್ ಒಳಗೆ ಕೂಡಿಹಾಕಿ ಏಕಾಏಕಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಆದರೆ ಹೆಲ್ಮೆಟ್ ನಿಂದ ಮುಕೀಬ್ ತನ್ನ ಪ್ರಾಣ ಉಳಿಸಿಕೊಂಡಿದ್ದಾರೆ. ನಂತರ ಶೆಡ್ ತುಂಬ ಓಡಾಡಿಸಿ ಹಲ್ಲೆ ನಡೆಸಲಾಗಿದೆ. ಇಮ್ರಾನ್ ನ ಸಹಚರ ಮುಕೀಬ್ ನ ಮರ್ಮಾಂಗವನ್ನೇ ಹಿಸುಕಿ ಹತ್ಯೆಗೆ ಯತ್ನಿಸಿದ್ದಾನೆ.

ನನ್ನನ್ನ ಎದುರು ಹಾಕಿಕೊಂಡು ಬದುಕಿತ್ತೀಯಾ ಎಂದು ಇಮ್ರಾನ್ ಬೆದರಿಕೆಹಾಕಿದ್ದು ಹಿಂಸೆಯನ್ನ ತಾಳಲಾರದೆ ಮುಕೀಬ್ ಕಿರುಚಿಕೊಂಡಿದ್ದಾನೆ. ಇದೇವೇಳೆ ಮುಕೀಬ್ ಬಳಿಯಿದ್ದ 75 ಸಾವಿರ ರೂ. ಹಣವನ್ನ ಇಮ್ರಾನ್ ಕಿತ್ತುಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.  ಇದೇ ವೇಳೆ ಮುಕೀಬ್ ಕಿರುಚಿಕೊಂಡಿದ್ದಕ್ಕೆ ಜುಗೂನ್ ಎಂಬುವರು ಬಂದು ನೀವೇಕೆ ಇಲ್ಲಿದ್ದೀರಿ ಎಂದು ಕೇಳಿದಾಗ ಮುಕೀಬ್ ನಡೆದ ಕಥೆಯನ್ನ ತಿಳಿಸಿದ್ದಾರೆ. 

ಇದೇ ವೇಳೆ ಜನ ಸೇರಿಕೊಂಡಾಗ ಇಮ್ರಾನ್ ಮತ್ತು ಇತರೆ ಇಬ್ಬರು ಪರಾರಿಯಾಗಿದ್ದು ಇದರಲ್ಲಿದ್ದ ಒಬ್ಬನನ್ನ‌ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಳೆ ದ್ವೇಷದ ಹಿನ್ನಲೆಯಲ್ಲಿ ವ್ಯಾಪಾರಿ ಒಬ್ವರನ್ನ ಥಳಿಸಿಕೊಲೆ ಬೆದರಿಕೆ ಹಾಗೂ ಹಿಂಸೆ ನೀಡಿದಿಮ್ರಾನ್ ಮತ್ತು ಸಹಚರರ ವಿರುದ್ಧ ವಿನೋಬ ನಗರದಲ್ಲಿ ದೂರು ದಾಖಲಾಗಿದೆ.

A businessman was rounded up and beaten! 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close