ವಿಬಿಜಿ ರಾಮ್ ಜಿ ಬಡವರಿಗೆ ಅನ್ಯಾಯವಾಗುವ ಯೋಜನೆಯಲ್ಲ ಭ್ರಷ್ಠರಿಗೆ ನಡುಕ ಹುಟ್ಟಿಸುವ ಯೋಜನೆ-ಕೋಟಾ ಶ್ರೀನಿವಾಸ ಪೂಜಾರಿ- VBG Ram Ji is not a scheme that will do injustice to the poor

 SUDDILIVE || SHIVAMOGGA

ವಿಬಿಜಿ ರಾಮ್ ಜಿ ಬಡವರಿಗೆ ಅನ್ಯಾಯವಾಗುವ ಯೋಜನೆಯಲ್ಲ ಭ್ರಷ್ಠರಿಗೆ ನಡುಕ ಹುಟ್ಟಿಸುವ ಯೋಜನೆ-ಕೋಟಾ ಶ್ರೀನಿವಾಸ ಪೂಜಾರಿ- VBG Ram Ji is not a scheme that will do injustice to the poor, but a scheme that will make the corrupt tremble - Kota Srinivas Poojary  

VBG, Ramji


ಸಾರ್ವಜನಿಕ ಸುಳ್ಳನ್ನ ಕಾಂಗ್ರೆಸ್ ಮಾಡುತ್ತಿದ್ದರೆ, ಬಿಜೆಪಿ ಸತ್ಯದ ದರ್ಶನವನ್ನ ಜನರಿಗೆ ಹೇಳಬೇಕಿದೆ ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಕರೆನೀಡಿದ್ದಾರೆ.  

ಅವರು ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಬಿಜೆಪಿ ವಿಕಸಿತ ಭಾರತ ಗ್ಯಾರೆಂಟಿ ಫಾರ್ ರೋಜ್ ಗಾರ್ ಅಂಡ್ ಅಜೀವಿಕ್ ಮಿಷನ್ ಗ್ರಾಮೀಣ(ವಿಬಿಜಿ ರಾಮ್ ಜಿ) ಜಿಲ್ಲಾ ಜಾಗೃತಿ ಸಮಾವೇಶದಲ್ಲಿ ಮುಖ್ಯಾತಿಥಿಗಳಾಗಿ ಆಗಮಿಸಿ ಮಾತನಾಡಿ, ಈ ಯೋಜನೆಯು 125 ದಿನಗಳ ಕಾಲ ಕೆಲಸ ನೀಡುತ್ತಿದೆ. 100 ದಿನ ಕೆಲಸಕೊಡುತ್ತಿದ್ದ ನರೇಗಾಕ್ಕಿಂದ 25 ದಿನ ಕೆಲಸ ಹೆಚ್ಚಿಸಿ ನೀಡಿದರೂ ಕಾಂಗ್ರೆಸ್  ಬಡವರಿಗೆ ಅನ್ಯಾಯ ಮಾಡುತ್ತಿದೆ ಎಂದು ಸುಳ್ಳನ್ನ ಹೇಳುತ್ತಿದೆ ಎಂದು ದೂರಿದರು. 

ನರೇಗಾದಲ್ಲಿ ನೋಡಲ್ ಅಧಿಕಾರಿಗಳಿಗೆ ನೀಡಲು ಹಣವಿರಲಿಲ್ಲ. ಈಗ ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಲಾಗಿದೆ. ಪಂಚಾಯತ್ ರಾಜ್ ಉದ್ಯೋಗ ಖಾತ್ರಿಯಲ್ಲಿ ಪಂಚಾಯತ್ ರಾಜ್ ದುರ್ಬಲವಾಗುತ್ತಿದೆ ಎಂದು ಕಾಂಗ್ರೆಸ್ ಸುಳ್ಳು ಹೇಳುತ್ತಿದೆ. ಇದನ್ನ ಬಿಜೆಪಿ ಸತ್ಯದ ದರ್ಶನ ಮಾಡಿಸಬೇಕಿದೆ. ನರೇಗಾದಲ್ಲಿ ಬಯೋಮೆಟ್ರಿಕ್ ಚರ್ಚೆಯಾಗಿತ್ತು. ಈ ಹಿಂದೆ ಬುರ್ಕಾಹಾಕಿಕೊಂಡು ಗಂಡಸರು ಕೆಲಸ ಮಾಡಿದೆ ಎಂದು ಆಡಿಟ್ ಹೇಳಿದೆ. 22 ಸಾವಿರ ಕೋಟಿಹಣವನ್ನ ಪ.ಬಂಗಾಳ ದುರುಪಯೋಗ ಪಡಿಸಿಕೊಂಡಿದೆ ಎಂಬ ಆರೋಪವನ್ನ ಆಡಿಟ್ ಹೇಳುತ್ತಿದೆ. ಮಹಾತ್ಮಗಾಂಧಿ ಬದಲು ಈ ಹಿಂದೆ ಪ.ಬಂಗಾಳ ಕರ್ಮಚಾರಿ ಯೋಜನೆ ಎಂದು ಹೆಸರಿಟ್ಟಿತ್ತು. ಆಗ ಆಕ್ಷೇಪಿಸದ ದೀದಿ ಸರ್ಕಾರ ಈಗ ಕಾಂಗ್ರೆಸ್ ಜೊತೆ ಸೇರಿ ಮಹಾತ್ಮಗಾಂಧಿ ಹೆಸರಿಲ್ಲ ಎನ್ನುತ್ತಿದೆ ಎಂದು ವಿವರಿಸಿದರು. 


ಕರ್ನಾಟಕದಲ್ಲಿ 669 ಕೋಟಿ ಹಣ ನರೇಗಾದಲ್ಲಿ ದುರುಪಯೋಗವಾಗಿದೆ ಎಂದು ಆಡಿಟ್ ಹೇಳಿದೆ. ಇದನ್ನ ರಾಜ್ಯಕ್ಕೆ ಹೇಳಿದರೆ ಯಾರ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ ನರೇಂದ್ರ ಮೊದಿ ಅಧಿಕಾರಕ್ಕೆ ಬಂದಾಗಿನಿಂದ ಅವರನ್ನ ವಿರೋಧಿಸುವ ಭರದಲ್ಲಿ ಕಾಂಗ್ರೆಸ್ ಸುಳ್ಳನ್ನೇ  ಹೇಳಿಕೊಂಡು ಬರುತ್ತಿದೆ. ವಿಶ್ವಕಾರ್ಮ‌ಯೋಜನೆಯಲ್ಲಿ ರಾಜ್ಯದ ಸಿಎಂ ಡಿಸಿಗಳು ಭಾಗಿಯಾಗದಂತೆ ಸೂಚನೆ ನೀಡಿದ್ದರು. ನಾವು ಪ್ರತಿಭಟಿಸಿದ ನಂತರ ಅದರ ಬಗ್ಗೆ ಡಿಸಿ ಈಗ ಸಭೆ ನಡೆಸುತ್ತಿದ್ದಾರೆ. 

ನರೇಗಾದಲ್ಲಿ100 ದಿನಕ್ಕೆ ಕೂಲಿ ಇತ್ತು. ಒಂದು ದಿನಕ್ಕೆ 174 ರೂ. ನಿಗದಿಯಾಗಿತ್ತು. ವರ್ಷಕ್ಕೆ ಒಬ್ಬನಿಗೆ 17 ಸಾವಿರ ರೂ. ತಗಲುತ್ತಿತ್ತು. ಆದರೆ ಈಗ 370 ರೂ. ದಿನಕೂಲಿ ನೀಡಲಾಗುತ್ತಿದೆ. 45 ಸಾವಿರ ರೂ ವರ್ಷಕ್ಕೆ ನೀಡಲಾಗುತ್ತಿದೆ. ಇದರ ಬಗ್ಗೆ ಗಲ್ಲಿ ಗಲ್ಲಿಗಳಲ್ಲಿ, ಗ್ರಾಮಪಂಚಾಯಿತಿಯಲ್ಲಿ ಬಿಜೆಪಿ ಜನರಿಗೆ ಸತ್ಯ ಹೇಳಬೇಕಿದೆ. ರಾಜ್ಯಪಾಲರನ್ನ ಅಡ್ಡಕಟ್ಟಿದ ರಾಜ್ಯ ಸರ್ಕಾರದ ಕಾಂಗ್ರೆಸ್ ಶಾಸಕರು ಗೂಂಡಾಗಿರಿಯನ್ನ ಮೆರೆದಿರುವುದು ಪ್ರಜಾಪ್ರಭುತ್ವದ ಹತ್ಯೆ ಮಾಡಿರುವುದಕ್ಕೆ ಸಮವಾಗಿದೆ ಎಂದು ಆರೋಪಿಸಿದರು. 

ಹಂಸರಾಜ್ ಭಾರಧ್ವಾಜ್ ಅವರು ಸಿಎಂ ಯಡಿಯೂರಪ್ಪನವರ ಅಧಿಕಾರದ ಅವಧಿಯಲ್ಲಿ ವಿಧಾನ ಸಭೆ ಅಧಿವೇಶನದಲ್ಲಿ ಸಿದ್ದರಾಮಯ್ಯನವರೆ ಎದ್ದು ನಿಂತು ಸರ್ಕಾರದ ವರದಿ ಓದಬೇಡಿ ಎಂದು ಕೂಗಿದ್ದರು. ರಾಜ್ಯಪಾಲರು ವರದಿ ಮಂಡಿಸಿದ್ದೇನೆ ಎಂದು ಹೇಳಿ ಹೊರಗೆ ನಡೆದರು. ಆಗ ಬಿಎಸ್ ವೈ ಗೌರವಾನ್ವಿತವಾಗಿ ಬೀಳ್ಕೊಟ್ಟು ಬಂದರು. ಇಂದು ಕಾಂಗ್ರೆಸ್ ಶಾಸಕರು ಗೂಂಡಾಗಿರಿ ನಡೆಸಿದರು ಎಂದು ವಿವರಿಸಿದರು. 

ಸಂಗಪ್ಪ ಮತ್ತು ಗಾಂಧೀಜಿ ಅವರ ಬಗ್ಗೆ ಕಾಂಗ್ರೆಸ್ ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದನ್ನ ಉಲ್ಲೇಖಿಸಿ ಮಾತನಾಡಿದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಸಂಗಪ್ಪನಿಂದ ತೊಂದರೆ ಆಗಿಲ್ಲ ಕಾಂಗ್ರೆಸ್ ನಂತಹ ನುಂಗಪ್ಪಣ್ಣನಿಂದ ತೊಂದರೆ ಉಂಟಾಗಿದೆ. ಬಡವರಿಗೆ ರಾಮ್ ಜಿ ಯೋಜನೆ ತೊಂದರೆ ಕೊಡುವ ಕಾಯ್ದೆಯಲ್ಲ ಭ್ರಷ್ಠಾಚಾರಿಗಳಿಗೆ ತೊಂದರೆ ಕೊಡುವ ಕಾಯ್ದೆ ಎಂದು ತಿರುಗೇಟು ನೀಡಿದರು. 

2014 ರಲ್ಲಿ ಬಿಜೆಪಿ ಸರ್ಕಾರ ಬಂದಾಗ 18 ಸಾವಿರ ಮನೆಗಳು ವಿದ್ಯುತ್ ಇಲ್ಲದಂತಾಗಿತ್ತು. ನಾನು ಇಂಧನ ಮಂತ್ರಿಯಾದಾಗ ಉತ್ತರ ಕನ್ನಡದ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಯಿತು. ಇದಕ್ಕೆ ಶಕ್ತಿ ನೀಡಿದ್ದು ಕೇಂದ್ರ ಸರ್ಕಾರದ ಸಹಾಯದಿಂದ ಎಂದರು.

ಶಾಸಕ ಚೆನ್ನಬಸಪ್ಪ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಯನ್ನ ವಿರೋಧಿಸಲು ನಡೆಸಿರುವ ಅಧಿವೇಶನ ಇತಿಹಾಸದಲ್ಲೇ ನಡೆದಿಲ್ಲ ಎಂದು  ಆರೋಪಿಸಿದರು. ರಾಜ್ಯಪಾಲರ ಭಾಷಣದಲ್ಲಿ ರಾಜ್ಯಪಾಲರನ್ನ ಅಪನಾನಿಸಲು ಹೊರಡಟಿದೆ. ಸಂವಿಧಾನ ಕಾಪಾಡುವಂತೆ ಬಂಬಡ ಬಚಾಯಿಸುವ ಕಾಂಗ್ರೆಸ್ ಸಂವಿಧಾನದ ಬುಡವನ್ನೇ ಅಲ್ಲಾಡಿಸಲು ಹೊರಟಿದೆ ಎಂದು ದೂರಿದರು.

ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಮಾತನಾಡಿ,  ಪೊಲೀಸರಿಂದ ದಂಡವಸೂಲಿ ಮಾಡಲು ಸರ್ಕಾರ ಹೊರಟಿದೆ. ವಾಹನದ ದೋಷಗಳಿಂದ ಹಣ ವಸೂಲಿ ಮಾಡಲಾಗುತ್ತಿದೆ. ಪೊಲೀಸ್ ಇಲಾಖೆಗೆ  350 ರೂ. ನೀಡುತ್ತಿದ್ದ ಇಂಧನದ ಹಣವನ್ನ 250 ರೂ.ಗೆ ಇಳಿಸಲಾಗಿದೆ. ಓಟರ್ ಲೀಸ್ಟ್ ಪರಿಷ್ಕರಿಸಲು ಹೊರಟರೆ ಪ್ರತಿಭಟಿಸುತ್ತಾರೆ. ಓಟರ್ ಲೀಸ್ಟ್ ಬಗ್ಗೆ ಕ್ರಮ ಕೈಗೊಳ್ಳದಿದ್ದರೂ ಕಾಂಗ್ರೆಸ್ ಪ್ರತಿಭಟಿಸುತ್ತದೆ. ವಿಬಿಜಿ ರಾಮ್ ಜಿಯನ್ನ ಕೇರಳ ಮತ್ತು ಹಿಮಾಚಲಯದಲ್ಲಿ  ಎಡ ಪಕ್ಷದ ಸರ್ಕಾರ ಒಪ್ಪಿದೆ. ಆದರೆ  ಕಾಂಗ್ರೆಸ್ ವಿರೋಧಿಸಿದೆ ಎಂದರು.

ನರೇಗಾ ಯೋಜನೆಯಲ್ಲಿ ಕೇಂದ್ರದಿಂದ 90% ಹಣ ದುರುಪಯೋಗವಾಗಿದೆ. ಕರ್ನಾಟಕದಲ್ಲಿ ನರೇಗಾ ಯೋಜನೆಯಲ್ಲಿ  669 ಕೋಟಿ ನರೇಗಾದಲ್ಲಿ ದುರುಪಯೊಗ ಆಗಿದೆ ಎಂದು ಆಡಿಟ್ ವರದಿ ನೀಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ಯೋಜನೆಯಲ್ಲಿ ರಾಜ್ಯ ಸರ್ಕಾರ ಕ್ರಮ‌ಕೈಗೊಳ್ಳಬೇಕಿದೆ. ಆದರೆ ರಾಜ್ಯಸರ್ಕಾರ ಒಬ್ಬರ ಮೇಲೂ ಕ್ರಮ ಜರುಗಿಸಿಲ್ಲ. ಹಾಗಾಗಿ ಕೇಂದ್ರ ವಿಬಿಜಿ ರಾಮ್ ಜಿ ಎನ್ನುವ ಯೋಜನೆಯನ್ನ ತರಲು ಹೊರಟಿದೆ ಎಂದುವಿವರಿಸಿದರು.

ರ್ಕಾಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಜಗದೀಶ್, ಸಂಸದರು, ದತ್ತಾತ್ರಿ, ಸಿದ್ದರಾಮಣ್ಣ, ಮೊದಲಾದವರು ಉಪಸ್ಥಿತರಿದ್ದರು. 

VBG Ram Ji is not a scheme that will do injustice to the poor   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close