ಡೈರಿ ಮುಂಭಾಗದ NHAI ರಸ್ತೆಗೆ ಮಹತ್ವದ ಆದೇಶ ಹೊರಬೀಳುವ ಸಾಧ್ಯತೆ- A major order is likely to be issued for the NHAI road in front of the dairy

 SUDDILIVE || SHIVAMOGGA

ಡೈರಿ ಮುಂಭಾಗದ NHAI ರಸ್ತೆಗೆ ಮಹತ್ವದ ಆದೇಶ ಹೊರಬೀಳುವ ಸಾಧ್ಯತೆ- A major order is likely to be issued for the NHAI road in front of the dairy

NHAI, Order


ಮಾಚೇನವಹಳ್ಲಿಯ ಶಿವಮೊಗ್ಗದ ಡೈರಿ ಮುಂಭಾಗದಲ್ಲಿ ಭೂಕುಸಿತಗೊಂಡ ಹಿನ್ನಲೆಯಲ್ಲಿ ಇಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವುಲಿಕಟ್ಟಿ, ಎಸ್ಪಿ ನಿಖಿಲ್ ಎಡಿಸಿ ಅಭಿಷೇಕ್ ಎನ್ ಹೆಚ್ ಪ್ರಾಧಿಕಾರದ ಅಧಿಕಾರಿಗಳು ಭೇಟಿ ನೀಡಿ ಮಹತ್ವದ ಆದೇಶ ಸಂಜೆ ಹೊತ್ತಿಗೆ ಹೊರಬೀಳುವ ಸಾಧ್ಯತೆಯಿದೆ. 

ಮಾಚೇನಹಳ್ಳಿ ಡೈರಿ ಸರ್ಕಲ್ ಬಳಿ NHAI ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಭೂಕುಸಿತ ಉಂಟಾಗಿದ್ದು ಸ್ಥಳಕ್ಕೆ ಅಧಿಕಾರಿಗಳು ಭೇಟಿನೀಡಿ  ಸೂಕ್ತ ನಿರ್ದೇಶನ ನೀಡಲಾಯಿತು. ಇಂದು ಸಂಜೆ ಮಹತ್ವದ ಆದೇಶ ಹೊರಬೀಳುವ ನಿರೀಕ್ಷೆಯಿದೆ. 


ಆದೇಶ ಏನಿರಬಹುದು?



ಡೈರಿ ಎದುರು ಅಂಡರ್ ಪಾಸ್ ನಲ್ಲಿ ರಾಷ್ಟ್ರೀ ಹೆದ್ದಾರಿ ನಿರ್ಮಾಣವಾಗುತ್ತಿದೆ. ರಾಷ್ಟ್ರೀಯ ಹೆದ್ದರಿಯ ಎರಡು ಕಡೆ ಸರ್ವೀಸ್ ರಸ್ತೆ ನಿರ್ಮಾಣವಾಗುತ್ತಿದೆ. ಈಗ ಮಾಚೇನಹಳ್ಳಿ ಡೈರಿ ಎದುರಿನ ರಸ್ತೆಯಲ್ಲಿ ವಾಹನದ ಆಗಮನ ಮತ್ತು ನಿರ್ಗಮನ ಒಂದೇ ಮಾರ್ಗವಾಗಿದ್ದು ಈ ಮಾರ್ಗವನ್ನ ಬದಲಿಸುವ ಸಾಧ್ಯತೆಯಿದೆ. 

ಮಾಚೇನಹಳ್ಳಿ ಕಡೆ ಹೋಗುವ ಮಾರ್ಗದಲ್ಲಿ ಭದ್ರಾವತಿ ಕಡೆಯಿಂದ ಶಿವಮೊಗ್ಗಕ್ಕೆ ಬರುವ ವಾಹನಗಳಿಗೆ ಅನುಕೂಲವಾಗಲಿದೆ. ಶಿವಮೊಗ್ಗದಿಂದ ಭದ್ರಾವತಿಗೆ ಹೋಗಲು ಡೈರಿ ಮುಂಭಾಗದಲ್ಲಿ ವಾಹನಗಳು ಸಾಗಲು ಆದೇಶ ಸಂಜೆ ಹೊರಬೀಳುವ ಸಾಧ್ಯತೆಯಿದೆ. ವಾಹನ ಸವಾರರು ಸಹಕರಿಸುವಂತೆ ಕೋರಲಾಗಿದೆ. 

A major order is likely to be issued for the NHAI road in front of the dairy

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close