ವಾರದಲ್ಲಿ ಐದು ದಿನಗಳವರೆಗೆ ಮಾತ್ರ ಬ್ಯಾಂಕಿಂಗ್ ಕೆಲಸ ನೀಡುವಂತೆ ಬ್ಯಾಂಕ್ ನೌಕರರ ಮುಷ್ಕರ-Bank employees strike demanding only five-day banking work a week

 SUDDILIVE || SHIVAMOGGA

ವಾರದಲ್ಲಿ ಐದು ದಿನಗಳವರೆಗೆ ಮಾತ್ರ ಬ್ಯಾಂಕಿಂಗ್ ಕೆಲಸ ನೀಡುವಂತೆ ಬ್ಯಾಂಕ್ ನೌಕರರ ಮುಷ್ಕರ-Bank employees strike demanding only five-day banking work a week    

Bank, strike


ವಾರದಲ್ಲಿ ಐದು ದಿನಗಳ ಮಾತ್ರ ಬ್ಯಾಂಕಿಂಗ್ ಕೆಲಸ ನೀಡುವಂತೆ ಒತ್ತಾಯಿಸಿ ಇಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಒಕ್ಕೂಟ ಬಿ.ಹೆಚ್ ರಸ್ತೆಯಲ್ಲಿರುವ ಮೈಸೂರು ಬ್ಯಾಂಕ್ ನಿಂದ ಗೋಪಿ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಗೋಪಿ ವೃತ್ತದಲ್ಲಿ ಮಾನವ ಸರಪಳಿ ನಡೆಸಿದರು. 

ದೇಶದಂತ 10 ಲಕ್ಷ ಬ್ಯಾಂಕ್ ನೌಕರರು ತಮ್ಮ ನ್ಯಾಯ ಸಮ್ಮತ ಬೇಡಿಕೆಯಾದ ವಾರದಲ್ಲಿ ಐದು ದಿನಗಳು ಮಾತ್ರ ಕೆಲಸದಲ್ಲಿ ತೊಡಗಿಸಿಕೊಂಡು ಉಳಿದ ಎರಡು ದಿನಗಳ ರಜೆ ಜಾರಿ ಮಾಡಬೇಕೆಂದು ಮುಷ್ಕರದಲ್ಲಿ ಆಗ್ರಹಿಸಲಾಯಿತು. ಕೇಂದ್ರ ಸರ್ಕಾರಕ್ಕೆ ವಾರದಲ್ಲಿ ಐದು ದಿನ ನಬಾರ್ಡ್ ನೌಕರಿರಿಗೆ ವಾರದಲ್ಲಿ .

ಐದು ದಿನ ಮಾತ್ರ ಕೆಲಸವಿದ್ದು ಬ್ಯಾಂಕ್ ನೌಕರರಿಗೆ ಸಹ ಈ ಸವಲತ್ತನ್ನು ನೀಡಬೇಕೆಂದು ಮುಷ್ಕರ ನಿರತ ಬ್ಯಾಂಕ್ ನೌಕರರು ಆಗ್ರಹಿಸಿದರು. ಬ್ಯಾಂಕ್ ನೌಕರರಿಗೆ 5 ದಿನಗಳ ಮಾತ್ರ ಕೆಲಸ ನೀಡುವಂತೆ ಈಗಾಗಲೇ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನೀಡಿದರು ಸಹ ಕೇಂದ್ರ ಸರ್ಕಾರ ಇನ್ನು ಅಂತಿಮ ಅನುಮೋದನೆ ನೀಡಿಲ್ಲ ಸೌಹಾರ್ಚಿತವಾಗಿ ಬಗ್ಗಹರಿಸುವ ಉದ್ದೇಶದಿಂದ ಯು ಎಫ್ ಬಿ ಯು ಹಲವು ಬಾರಿ ರಾಜ್ಯಗಳನ್ನು ಭಾಗವಹಿಸಿ ಚರ್ಚೆ ನಡೆಸಿದೆ ಆದರೆ ಕೇಂದ್ರ ಸರ್ಕಾರದಿಂದ ಯಾವುದೇ ಸ್ಪಷ್ಟ ಬರವಸೆ ಅಥವಾ ಅಂತಿಮ ಅನುಮೋದನೆ ಲಭ್ಯವಾಗದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಮುಷ್ಕರ ನಡೆಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

ಪ್ರಸ್ತುತ ಬ್ಯಾಂಕ್ ಸಿಬ್ಬಂದಿಗಳು ಸಿಬ್ಬಂದಿ ಕೊರತೆ ನಡುವೆ ಬಹುತೇಕ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಹಣ ಕಟ್ಟಲು ಮತ್ತು ಪಡೆಯುವ ಸೌಲಭ್ಯಗಳನ್ನು ಎಟಿಎಂನಲ್ಲಿ ಕಲ್ಪಿಸಲಾಗಿದೆ. ಆನ್ಲೈನ್ ಬ್ಯಾಂಕಿಂಗ್ ಉಪಯೋಗಿಸಬಹುದಾಗಿದೆ. ಈಗಾಗಲೇ ಕೇಂದ್ರ ಸರ್ಕಾರದ ನೌಕರರು ಇನ್ಸೂರೆನ್ಸ್ ಆರ್ಬಿಐ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ವಾರದಲ್ಲಿ ಐದು ದಿನ ಮಾತ್ರ ಕೆಲಸವಿದೆ.


 ಆದರೆ ಸರ್ಕಾರದ ಎಲ್ಲಾ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮತ್ತು ಸಾರ್ವಜನಿಕ ಸೇವೆಯಲ್ಲಿ ನಿರತರಾಗಿರುವ ಬ್ಯಾಂಕ್ ನೌಕರರಿಗೆ ವಾರಪೂರ್ತಿ ಕೆಲಸ ನೀಡಲಾಗುತ್ತಿದೆ.  ಒತ್ತಡವನ್ನ ತಗ್ಗಿಸು ಬ್ಯಾಂಕ್ ಗಳು ಐದು ದಿನಗಳ ಕೆಲಸ ನಿರ್ವಹಿಸಿದರೆ ಗ್ರಾಹಕರಿಗೂ ಯಾವುದೇ ಸಮಸ್ಯೆ ಇರುವುದಿಲ್ಲ. ಈ ಕೂಡಲೇ ಬೇಡಿಕೆಗಳನ್ನು ಈಡೇರಿಸಬೇಕು ಹಾಗೂ ಬೇಡಿಕೆಗಳು ಕೇವಲ ನೌಕರರಿಗೆ ಮಾತ್ರವಲ್ಲ ಉತ್ತಮ ಬ್ಯಾಂಕಿಂಗ್ ವ್ಯವಸ್ಥೆಗೆ ಅಗತ್ಯವುದೆ ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

Bank employees strike demanding only five-day banking work a week

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close