ಹಿಂದೂ ಸಂಗಮ ನಡೆಸಲು ಹಣ ಎಲ್ಲಿಂದ ಬರ್ತಾಯಿದೆ-ಕಿಮ್ಮನೆ ಗಂಭೀರ ಆರೋಪ-Where is the money coming from to hold Hindu Sangam

 SUDDILIVE || SHIVAMOGGA

ಹಿಂದೂ ಸಂಗಮ ನಡೆಸಲು ಹಣ ಎಲ್ಲಿಂದ ಬರ್ತಾಯಿದೆ-ಕಿಮ್ಮನೆ ಗಂಭೀರ ಆರೋಪ-Where is the money coming from to hold Hindu Sangam - Kimmane makes serious allegations

Kimnane, rathnakar


ಮೂರು ವಿಷಯಗಳಿಗೆ ಸಂಬಂಧಿಸಿದಂತೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸುದ್ದಿಗೋಷ್ಠಿ ನಡೆಸಿ ಮೊದಲಿಗೆ ವಿಶೇಷ ಅಧಿವಶನ ನಡೆಸಿದಾಗ ರಾಜ್ಯಪಾಲರ ನಡೆಯನ್ನ ತೀವ್ರವಾಗಿ ಖಂಡಿಸಿದರು.

ರಾಜ್ಯಪಾಲರು ಗೌವರ್ನರ್ ಆಗಿ ಇರಬೇಕೆ ಹೊರತು ಪಾಳೇದಾರರಾಗಿ ನಡೆದುಕೊಳ್ಳಬಾರದು. ಪೂರ್ವಶ್ರಮವನ್ನ ಮರೆತು ಸದನ ನಡೆಸಬೇಕಿತ್ತು. ಎರಡು ಸದನದ ಸದಸ್ಯರು ಸ್ಪೀಕರ್ ಕುರ್ಚಿಯಲ್ಲಿ ಕೂರಿಸಿದಾಗ ಅವರ ಅಡಿ ಇಡಿ ಸದನ ಇರುತ್ತಿತ್ತು. ಬೇಡ ಎನಿಸಿದರೆ ರಾಷ್ಟ್ರಗೀತೆ ಹಾಡಿ ಹೋಗಬಹುದು. ಸ್ವಾಗತ ಕರೆದು ರಾಜ್ಯಪಾಲರು ಓಡಿಹೋಗಿರುವುದು ಬಿಜೆಪಿ ಏಜೆಂಟಂತೆ ವರ್ತಿಸಿದಂತಾಯಿತು ಎಂದರು. 

ರಾಜ್ಯಪಾಲರನ್ನ ತಡೆಯುವ ಕೆಲಸ ಮಾಡಿದ ಬಿಕೆ ಹರಿಪ್ರಸಾದ್ ನಡುವಳಿಕೆಯನ್ನ ಸ್ವಾಗತಿಸುವೆ. ರಾಷ್ಟ್ರಭಕ್ತಿ ಗೀತೆ ಹೇಳಿ ಹೋಗುವುದನ್ನ ಖಂಡಿಸಿರುವ ಅವರು ರಾಜ್ಯಪಾಲರು ರಾಜೀನಾಮೆ ನೀಡಿ ಮನೆಗೆ ಹೋಗಲಿ ಎಂದರು.

ನರೇಗಾ ವಿಚಾರದಲ್ಲಿ ರಾಜ್ಯ ಸರ್ಕಾರ ಸರಿಯಾಗಿ ನಡೆದುಕೊಂಡಿದೆ. ಸದನದಲ್ಲಿ ವಿಪಕ್ಷಗಳು ಆಕ್ಷೇಪಿಸಬಹುದು. ಮೋದಿಗೆ ಆರ್ಥಿಕ ಸಲಹೆಗಾರರನ್ನ ಮೌಂಟ ಎವರೆಸ್ಟ್ ಗೆ ಕಳುಹಿಸುವುದು ಒಳ್ಳೆಯದು. ಭಾರತದಲ್ಲಿ 137 ಕೋಟಿ ಜನ ಸಂಖ್ಯೆಯಲ್ಲಿ 37 ಕೋಟಿ ಜನ ಹಸಿವಿನಿಂದ ಇದ್ದಾರೆ. ಸರ್ಕಾರಿ ನೌಕರರನ್ನಾಗಿ ಮಾಡಿ ಉದ್ಯೋಗ ಸೃಷ್ಠಿಸಬೇಕೆಂದು ಇಲ್ಲ. ಖಾಸಗಿ ಉದ್ಯೋಗ ಸೃಷ್ಠಿಗೆ 12 ವರ್ಷದಲ್ಲಿ ಮೋದಿ ಸರ್ಕಾರ ಮಾಡಿದ್ದೇನು? ಮನರೇಗಾ ಸಾಮಾಜಿಕ ಕಾಳಜಿಯ ಕಾರ್ಯಕ್ರಮವಾಗಿದೆ. 193 ದೇಶದಲ್ಲಿ ಈರೀತಿ ಕಾರ್ಯಕ್ರಮವಿಲ್ಲ. 

2 ಲಕ್ಷಕ್ಕಿಂತ ಹೆಚ್ಚು ಗ್ರಾಮಪಂಚಾಯಿತಿಗಳಿವೆ. 2004-05 ರಲ್ಲಿ 76 ಸಾವಿರ ಕೋಟಿ ಹಣವನ್ನ ಮನಮೋಹನ ಸಿಂಗ್  ಮೀಸಲು ಮಾಡಿದರು. ಮೇಳಿಗೆ ಗ್ರಾಪಂಗೆ ದೇಶದ ನಂ1 ಪ್ರಶಸ್ತಿ ಬಂದಿದೆ. ಶಾಲೆ ಕಾಂಪೌಂಡ್, ಕೆರೆ ಬದಿ ಕಟ್ಟುವುದು, ಹೂಳೆತ್ತುವುದು ಮೊದಲಾದವುದು ಮನರೇಗಾದ ಕಾರ್ಯಕ್ರಮವಾಗಿದೆ ಕಾರ್ಯಕ್ರಮಗಳು ಕಾನೂನಾಗಿಸುವ ಕೆಲಸವನ್ನ ಭಾರತ ಬಿಟ್ಟರೆ ಬೇರೆಯ ದೇಶವಿಲ್ಲ ಎಂದರು. 

ಮನರೇಗಾದಲ್ಲಿ ಕೇಂದ್ರ ಸರ್ಕಾರ ಕೊಡುವ ಬಾಕಿ ಇದೆ. ಉದ್ಯೋಗ ಸೃಷ್ಠಿ ಮಾಡದಿದ್ದರೆ ಭಾರತ ಒಂದೇ ದೇಶವಾಗಿರಲು ಸಾಧ್ಯವಿಲ್ಲ. ಇದು ಅಧೋಗತಿಗೆ ಹೋಗುವ ಕೆಕಸವಾಗಿದೆ. ರಾಜ್ಯ ಸರ್ಕಾರ ಹಣಕೊಡಬೇಕು ಎಂಬ ಕಾರಣವೇನಿದೆ ಮನರೇಗಾದಿಂದ ಗಾಂಧೀಜಿ ಹೆಸರು ಯಾಕೆ ತೆಗೆದರು ಎಂದು ಪ್ರಶ್ನಿಸಿದರು. 

ಹಿಂದೂ ಸಂಗಮ ಮಾಡುವ ಆರ್ ಎಸ್ ಎಸ್ ಹಿಂದೂ ಜಾತಿ ವ್ಯವಸ್ಥೆ ನಿವಾರಿಸಲು ಏನು ಕ್ರಮ ಎಂದು ಪ್ರಶ್ನಿಸಿದ ಕಿಮ್ಮಬೆ ಜಾತಿ ವ್ಯವಸ್ಥೆ ಮನೆಯಿಂದ ಹೊರಗಿರಬೇಕು ಎಂದು ಹೇಳಿದ ಡಾ.ರವಿಕಿರಣ್ ಹೇಳಿಕೆಯನ್ನ ವಿರೋದಿಸಿದರು. ಹಿಂದೂ ಎಂದು ಆರ್ ಎಸ್ ಎಸ್  ಹೇಳೋದು ಯಾರಿಗೆ? ಇದನ್ನ ವಿವರಿಸಬೇಕು. ಅಸ್ಪೃಷ್ಯತೆ ಹೋಗಬೇಕು. ಏಕತೆಯಿರಬೇಕು ಎನ್ನುವವರು ಅದಕ್ಕೆ ಪೂರಕವಾಗಿರೋದು ಏನು? ಹಿಂದೂ ಸಮಾಜದಲ್ಲಿ ಸಮಾನತೆ ಕಾಣಲು ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡಬೇಕು. ಅದನ್ನ ಯಾಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು. 

ಹಿಂದೂ ಸಂಗಮ ಕಾರ್ಯಕ್ರಮಕ್ಕೆ ಹಣ ಎಲ್ಲಿಂದ ಬರುತ್ತೆ ಎಂದು ಪ್ರಶ್ನಿಸಿದ ಕಿಮ್ಮನೆ ಇವರು ದೇಶವನ್ನ ಅಭಿವೃದ್ಧಿ ಮಾಡುತ್ತಿಲ್ಲ. ಪಕ್ಷಕಟ್ಟುವ ನೆಪ ಇ್ಟುಕೊಂಡಿದ್ದಾರೆ. ಸಾಲ ಮಾಡಿ ದೇಶ ಬಿಟ್ಟು ಓಡಿಹೋದವರಿಂದ ಡೀಲ್ ನಡೆಸಿ ಅರ್ಧಹಣದಿಂದ ಈ ಕಾರ್ಯಕ್ರಮ ಮಾಡಲಾಗುತ್ತಿದೆ. ಕೋಟ್ಯಾಂತರ ರೂ ಸಾಲ ಮಾಡಿ ದೇಶ ಬಿಟ್ಟು ಓಡಿ ಹೋದವರನ್ನ ಕೇಂದ್ರ ಸರ್ಕಾರ ಒಬ್ಬರನ್ಬಾದರು ಕರೆತಂದ್ರಾ ಎಂದು ಗಂಭೀರ ಆರೋಪ ಮಾಡಿದರು.

Where is the money coming from to hold Hindu Sangam

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close